News Kannada
Friday, December 09 2022

ಮೈಸೂರು

ಮೈಸೂರು: ದಸರಾದ ಶ್ವಾನಲೋಕದಲ್ಲಿ ಮಿಂಚಿದ ಚಾರ್ಲಿ

Mysuru: Charlie shines in the dog world of Dasara
Photo Credit : By Author

ಮೈಸೂರು: ನಾನಾ ಬಣ್ಣದ, ಸಣ್ಣ ಗಾತ್ರದಿಂದ ಆಳೆತ್ತರದವರೆಗಿನ ವಿಭಿನ್ನ ತಳಿಯ ಶ್ವಾನಗಳ ಲೋಕ ನಗರದ ಮೈಸೂರು ವಿಶ್ವವಿದ್ಯಾಲಯದ  ಸ್ಪೋರ್ಟ್ಸ್ ಅಂಡ್ ಪೆವಿಲಿಯನ್ ಮೈದಾನದಲ್ಲಿ ಅನಾವರಣಗೊಂಡಿತ್ತು. ಇವುಗಳ ನಡುವೆ ಚಾರ್ಲಿ ಗಮನಸೆಳೆಯಿತು.

ನಾಡಹಬ್ಬ ಮೈಸೂರು ದಸರಾ ಉತ್ಸವ ಅಂಗವಾಗಿ ರೈತ ದಸರಾ ಉಪಸಮಿತಿಯಿಂದ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ ಅಂಡ್ ಪೆವಿಲಿಯನ್ ಮೈದಾನದಲ್ಲಿ ಆಯೋಜಿಸಿದ್ದ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ತರಹೇವಾರಿ ತಳಿಯ ನಾಯಿಗಳು ತಮ್ಮ ಒಡೆಯನೊಂದಿಗೆ ಇಡೀ ಮೈದಾನದಲ್ಲಿ  ಅತ್ತಿಂದಿತ್ತ ಬಿಂಕುಬಿನ್ನಾಣದಿಂದ ಓಡಾಡುತ್ತಾ ಶ್ವಾನ ಪ್ರಿಯರ ಮನಸೂರೆಗೊಳಿಸುವ ದೃಶ್ಯ ಒಂದೆಡೆಯಾದರೆ, ಮೈದಾನಕ್ಕೆ ಆಗಮಿಸಿದ್ದ ನೂರಾರು ಯುವತಿಯರು ಮುದ್ದಾದ ಶ್ವಾನಗಳ ವಯ್ಯಾರ, ನಾಜೂಕಿಗೆ ಮನಸೋತು ತಬ್ಬಿ, ಮುದ್ದಾಡುವ ದೃಶ್ಯ ನೋಡುಗರಿಗೆ ಶ್ವಾನ  ಪ್ರೇಮವನ್ನು ಇಮ್ಮಡಿಯಾಗಿಸುವಂತಿತ್ತು.

ಮೈಸೂರು ನಗರ, ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ 23 ತಳಿಯ, ಸಾವಿರಕ್ಕೂ ಹೆಚ್ಚು ಶ್ವಾನಗಳು ಹಾಗೂ 50ಕ್ಕೂ ಹೆಚ್ಚು  ಬಗೆ ಬಗೆಯ ತಳಿಯ ಬೆಕ್ಕುಗಳು ಗಮನ ಸೆಳೆದವು. ಇತ್ತೀಚೆಗೆ ತೆರೆಕಂಡ ಚಾರ್ಲಿ 777 ಚಲನಚಿತ್ರದ ಶ್ವಾನ ಚಾರ್ಲಿ ಸಾಕು ಪ್ರಾಣಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಚಿತ್ರನಟ, ನಟಿಯರು ಹಾಗೂ ಸೆಲಿಬ್ರೆಟಿಗಳಿನ್ನು ನೋಡಲು ಜನ ಮುಗಿಬೀಳುವ ದೃಶ್ಯ ಸಾಮಾನ್ಯ. ಚಾರ್ಲಿ ಕಂಡೊಂಡನೆ ನೂರಾರು ಮಂದಿ ಅದರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರೆ, ಇನ್ನೂ ಕೆಲವರು ಚಾರ್ಲಿಯನ್ನು ಸ್ಪರ್ಶಿಸಿ, ಮೈದಡವಿ ಸಂಭಮಿಸಿದರು.

ಮೈದಾನದಲ್ಲಿ ಜರ್ಮನ್ ಶರ್ಡ್, ಡಾಬರ್ ಮೆನ್, ಗೋಲ್ಡನ್ ರಿಟ್ರವರ್, ಲ್ಯಾಬ್, ಸೈಬೀರಿಯನ್ ಹಸ್ಕಿ, ರ್‍ಯಾಟ್‌ವ್ಹೀಲರ್ ತಳಿಯ ನೂರಾರು  ಶ್ವಾನಗಳು ಕಂಡು ಬಂದವು. ಇವುಗಳ ಜೊತೆಗೆ ಚೈನೀಸ್ ತಳಿಯ ಪೀಕಿಂಗೀಸ್ ನಾಯಿ ಪ್ರಮುಖ ಆಕರ್ಷಣೆಯಾಗಿತ್ತು. ಮೈತುಂಬ ಉದ್ದದ ರೋಮಗಳೊಂದಿಗೆ ಆಕರ್ಷ ಮುಖಚಹರೆ ಹೊಂದಿದ್ದ ಈ ಶ್ವಾನ ಇಡೀ ಮೈಸೂರಿನಲ್ಲಿ ಇರುವುದು ಒದೊಂದೆ ಎಂಬುದು ಗಮನಾರ್ಹ.

ಗ್ರೇಟ್ ಡೆನ್, ಸೆಂಟ್ ಬರ್ನಾಡ್, ಅಮೇರಿಕನ್ ಬುಲ್ಲಿ, ಮಿನ್‌ಪಿನ್, ಬೀಗಲ್, ಫ್ರೆಂಚ್ ಬುಲ್, ಡೂಡಲ್ರೆಡ್ ರಿಟನ್, ಮೆಲ್ಜಿಯನ್ ಮೆಲಿಯೋಸ್,  ಡ್ಯಾಶೂಂಡ್, ಪೂಡಲ್, ಚೌ ಚೋ, ಶಿಟ್ಝೂ, ಲ್ಯಾಶೋಪ್ಸ್, ಪಿಟ್‌ಬುಲ್, ಬೆಲ್ಜಿಯಂ ಶರ್ಡ್ ಪ್ರಮುಖ ಆಕರ್ಷಣೆಯಾಗಿದ್ದವು. ಇದರ ಜತೆಗೆ ದೇಶಿ ತಳಿಯಾದ ಮುಧೋಳ್ ಮತ್ತು ರಾಜುಪಲ್ಲಿ ನಾಯಿಗಳು ಗಮನ ಸೆಳೆದವು.

ಸಾಕುಪ್ರಾಣಿಗಳ ಪ್ರದರ್ಶನದಲ್ಲಿ ಶ್ವಾನಗಳಷ್ಟೇ ಅಲ್ಲದೆ ಮನೆಯ ಮುದ್ದಿನ ಪ್ರಾಣಿ ಎಂದೇ ಹೆಸರಾದ ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿ  ನೋಡುಗರನ್ನು ಬೆರಗುಗೊಳಿಸಿದವು. ಬೆಂಗಾಲ್ ಕ್ಯಾಟ್, ಬಾಂಬೆ ಕ್ಯಾಟ್,ಹಿಮಾಲಯನ್ ಕ್ಯಾಟ್, ಮೈನ್ ಕೂನ್, ಬ್ರಿಟೀಷ್ ಶಾರ್ಥಾರ್, ಪಶ್ಚಿಯನ್ ಕ್ಯಾಟ್ ಸೇರಿದಂತೆ ನಾಲ್ಕೈದು ತಳಿಯ 50ಕ್ಕೂ ಹೆಚ್ಚು ಬೆಕ್ಕುಗಳು ಬಿಂಕು, ಬಿನ್ನಾಣದಿಂದ ಓಡಾಡುತ್ತ ತಮ್ಮ ವಯ್ಯಾರ ಪ್ರದರ್ಶಿಸಿದವು.

See also  ಆನ್‌ ಲೈನ್‌ ಪಾಠಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು