News Kannada
Thursday, March 30 2023

ಮೈಸೂರು

ಮೈಸೂರು: ವಿಷ್ಣು ಸಹಸ್ರನಾಮ ಪಠಣದಿಂದ ವಿಘ್ನ ನಾಶ – ಡಿ.ಟಿ.ಪ್ರಕಾಶ್

Vishnu Sahasranama recitation destroys obstacles – D.T. Prakash
Photo Credit : By Author

ಮೈಸೂರು: ವಿಷ್ಣು ಸಹಸ್ರನಾಮ ಪಠಣದಿಂದ ವಿವಿಧ ರೋಗ, ಬಂಧನ, ಭಯ, ಆಪತ್ತು’ ಎಂಬ ವಿಘ್ನಗಳಿಂದ ದೂರವಾಗಬಹುದು ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.

ನಗರದ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರ ಸಭಾ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್‌ ಮೈಸೂರು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಮಾತ್ಮನ ಒಂದೇ ತತ್ವದ ಕಡೆ ನಮ್ಮನ್ನೂ ತೆಗೆದುಕೊಂಡು ಹೋಗುವುದಿದ್ದರೆ ಅದು ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ ಪಠಣ ಮಾತ್ರ.  ಗ್ಲೋಬಲ್  ವಿಷ್ಣು ಸಹಸ್ರನಾಮ ಸತ್ಸಂಗ್ ಫೆಡರೇಷನ್ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಹಾಗೂ ಭಾರತದ ಉದ್ದಗಲಕ್ಕೂ ವಿಷ್ಣು ಸಹಸ್ರನಾಮದ ಪ್ರಸರಣಕ್ಕಾಗಿಯೇ ಮೀಸಲಾದ ಸಂಸ್ಥೆಯಾಗಿದೆ. ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಸೇವೆ ಅಪಾರ ಎಂದರು.

ಡಾ.ಭಾಷ್ಯಂ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ್‌ ಸಂಸ್ಥೆಯ ಸಂಸ್ಥಾಪಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ವಿಶ್ವ ವಿಪತ್ರಯೀ ಪರಿಷತ್ ಅಧ್ಯಕ್ಷ ಎಸ್.ರಘುನಾಥ್, ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕ ರಮಾಕಾಂತ ಶೆಣೈ, ಎಚ್‌.ಕೆ.ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ವಿ.ಭರದ್ವಾಜ್‌, ಡಾ.ಜಗನ್ನಾಥ್ ಶೆಣೈ, ಮಂಗಳಾ ಭಾಸ್ಕರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ  ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಲತಾ ಬಾಲಕೃಷ್ಣ, ಶೇಷಾದ್ರಿ, ಸುಚಿಂದ್ರ, ಚಕ್ರಪಾಣಿ, ಇತರರಿದ್ದರು.

See also  ಕಾಂಗ್ರೆಸ್ ಕಾರಣದಿಂದಾಗಿ ಮೈಸೂರು ಸ್ಮಾರ್ಟ್ ಸಿಟಿ ವಿಳಂಬ: ಸಂಸದ ಸಿಂಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು