ಹನೂರು: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ಗುರುಮಲ್ಲಪ್ಪನ ದೊಡ್ಡಿ ಗ್ರಾಮ ಸಮೀಪದ ರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಬಿಆರ್ ಟಿ ವನ್ಯಜೀವಿ ಧಾಮದ ನಾಲ್ಕು ವರ್ಷದ ಚಿರತೆ ಗುರುಮಲ್ಲಪ್ಪನ ದೊಡ್ಡಿ ಬಳಿಯಲ್ಲಿ ರಸ್ತೆಯನ್ನು ದಾಟುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಚಿರತೆ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ ಈ ಬಗ್ಗೆ ತಿಳಿದ ಸಾರ್ವಜನಿಕರು, ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಚಾಮರಾಜನಗರ ಎಸಿಎಫ್ ಸಭ್ಯಶ್ರೀ, ಬಿಆರ್‍ಟಿ ವನ್ಯಜೀವಿ ಧಾಮದ ಎಸಿಎಫ್ ಆರ್‍ಎಫ್‍ಒ ಶಿವರಾಮು ಹಾಗೂ ಸಿಬ್ಬಂದಿ ಪರಿಶೀಲಿಸಿ ಮಹಜರ್ ನಡೆಸಿದ ಬಳಿಕ ನ್ನು ಅರಣ್ಯ ಇಲಾಖೆಯ ಹಿರಿಯ ವೈದ್ಯ ಮುಜೀದ್ ಅವರು ಮರಣೋತ್ತರ ಪರೀಕ್ಷೆ ನಡೆಸಿ, ಚಿರತೆಯ ಕಳೇಬರಹವನ್ನು ಬೈಲೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶವ ಸಂಸ್ಕಾರ ನೆರವೇರಿಸಿದರು.