ಚಾಮರಾಜನಗರ: ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ನಂಜನಗೂಡು ನಗರದಲ್ಲಿ ಮಾತನಾಡಿದ ಅವರು ಜನರು ನನ್ನನ್ನು ಹಾರೈಸಿದರೆ ಖಂಡಿತವಾಗಿ ವಿಧಾನಸಭೆಗೆ ಹೋಗುತ್ತೇನೆ ನಾನೊಬ್ಬನೇ ಸಾಕು.. ಚಾಮರಾಜನಗರ ಜನ ಈ ರಾಜ್ಯಕ್ಕಾಗಿ, ನಾಡಿಗಾಗಿ ಚಾಮರಾಜನಗರದ ಭವಿಷ್ಯಕ್ಕಾಗಿ ನನ್ನನ್ನು ಗೆಲ್ಲಿಸಬೇಕಿದೆ. ಯಾವುದೇ ಒಂದು ಜಾತಿ, ಹಣದ ಆಮಿಷಗಳಿಗೆ ಒಳಗಾಗದೆ ನನ್ನನ್ನು ಗೆಲ್ಲಿಸಿದರೆ ನಿಜಕ್ಕೂ ಒಂದು ಹೊಸ ಅಧ್ಯಾಯ ಆರಂಭವಾಗುತ್ತದೆ.
ಎಲ್ಲ ಪಾರ್ಟಿಯವರು ಬಾರಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಯಾರು ಪ್ರಾಮಾಣಿಕರು ಇಲ್ಲ. ಮೂರು ಸಾರಿ ಚಾಮರಾಜನಗರ ಕ್ಷೇತ್ರದಲ್ಲಿ ಸೋತಿದ್ದೇನೆ ಚಾಮರಾಜನಗರವನ್ನು ಜಿಲ್ಲೆ ಮಾಡಿದ್ದೇನೆ. ಕ್ರೀಡಾಂಗಣ ಮಾಡಿದ್ದೇನೆ. ಕುಡಿಯುವ ನೀರನ್ನು ತಂದುಕೊಟ್ಟಿದ್ದೇನೆ.
ದುಡ್ಡಿಲ್ಲ, ಜಾತಿ ಇಲ್ಲ, ಸೋತಿದ್ದೇನೆ. ಈ ಬಾರಿ ಗೆಲ್ಲಿಸಬೇಕು ಎಂಬುದು ಎಲ್ಲರ ಮನಸ್ಸಿನಲ್ಲಿ ಬಂದಿದೆ. ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.