ಗುಂಡ್ಲುಪೇಟೆ: ಕರ್ನಾಟಕ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಗುಂಡ್ಲುಪೇಟೆಯಲ್ಲಿದ್ದ ಬಿಜೆಪಿ ಶಾಸಕ ನಿರಂಜನ್ ಕುಮಾರ್ ಅವರ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ.
ಶಾಸಕ ನಿರಂಜನ್ ಕುಮಾರ್ ಅವರು, ತಾಲೂಕಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರ ಕಛೇರಿಯನ್ನು ತೆರೆದಿದ್ದರು. ಅಲ್ಲದೆ ಪ್ರತಿ ಸೋಮವಾರ ಜನ ಸಂಪರ್ಕ ಸಭೆ ಏರ್ಪಡಿಸುವ ಮೂಲಕ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಆದರೆ ಇದೀಗ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಕಛೇರಿಯನ್ನು ತೆರವುಗೊಳಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ದಿನಾಂಕ ಅಧಿಕೃತ ಆದೇಶದನ್ವಯ ಪಟ್ಟಣದಲ್ಲಿ ಶಾಸಕರ ಕಚೇರಿ, ಪಕ್ಷದ ಬ್ಯಾನರ್ ಗಳು ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿನ ಗೋಡೆ ಬರಹಗಳನ್ನು ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ತೆರವು ಗೊಳಿಸಲಾಗುತ್ತಿದೆ.