ಹಾಸನ: ನಗರದ ಠಾಣೆಯೊಂದರ ಇಬ್ಬರು ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿಯೇ ಮದ್ಯಪಾನ ಮಾಡಿರೋ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಪೆನ್ಷನ್ ಮೊಹಲ್ಲಾ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ರಂಗಸ್ವಾಮಿ ಹಾಗೂ ಸಿಬ್ಬಂದಿ ರಾಮೇಗೌಡ ತಪ್ಪಿತಸ್ಥರು ಎಂದು ತಿಳಿದು ಬಂದಿದ್ದು,ಈಗಾಗಲೇ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿದ್ದಾರೆ.
ಆಯುಧ ಪೂಜೆಯ ದಿನ ಕತ೯ವ್ಯ ನಿವ೯ಹಣೆ ಸಂದರ್ಭದಲ್ಲಿ ಈ ಇಬ್ಬರು ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಕೊಠಡಿಯಲ್ಲಿ ಸಮವಸ್ತ್ರ ಧರಿಸಿಯೇ ಮದ್ಯಪಾನ ಮಾಡಿದ್ದರು.