News Kannada
Saturday, January 28 2023

ಹಾಸನ

ಹಾಸನ : ಪುಣ್ಯಾರಾಧನೆ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಟ ಎಸ್. ದೊಡ್ಡಣ್ಣ ಬೇಸರ

Photo Credit : By Author

ಹಾಸನ : ಇಲ್ಲಿವರೆಗೂ ಕೊರೋನಾ ಇತರೆ ಅನೇಕ ಖಾಯಿಲೆಗಳಿಗೆಲ್ಲಾ ಔಷಧಿ ಕಂಡುಹಿಡಿದ್ದಿದ್ದಾರೆ ಆದ್ರೆ ಕಂಡೋರ ಆಸ್ತಿ ಹೊಡೆಯಲು ಸಂಚು ಮಾಡುತ್ತಾರಲ್ಲ ಅದನ್ನು ನಿಲ್ಲಿಸಲು ಇದುವರೆಗೂ ಯಾರು ಯಾವ ಔಷಧಿ ಕಂಡು ಹಿಡಿದಿರುವುದಿಲ್ಲ ಎಂದು ಪ್ರಸ್ತುತ ಸನ್ನಿವೇಶದ ಕುರಿತು ಹಿರಿಯ ಹಾಸ್ಯ ಹಾಗೂ ಪೋಷಕ ನಟನಾದ ಎಸ್. ದೊಡ್ಡಣ್ಣ ಬೇಸರವ್ಯಕ್ತಪಡಿಸಿದರು.

ನಗರದ ಶ್ರೀ ಜವೇನಹಳ್ಳಿ ಮಠದ ಆವರಣದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಪುಣ್ಯಾರಾಧನೆ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗುರುಕೊಟ್ಟ ಜ್ಞಾನವು ನಿರಂತರವಾಗಿ ಹರಿಯುತ್ತಲೆ ಇರುತ್ತದೆ. ಗುರುಗಿಂತ ದೊಡ್ಡವರು ಈ ಭೂಮಿ ಮೇಲೆ ಯಾರು ಇರುವುದಿಲ್ಲ. ತ್ರಿಮೂರ್ತಿಗಳ ಜೊತೆ ಗಣಪತಿ ಸೇರಿದ ಮೇಲೆ ಗುರುವಾಗಿದ್ದು. ನನಗೆ ಇದೆ ಶ್ರೀ ಜವೇನಹಳ್ಳಿ ಮಠದಲ್ಲಿ ಸಂಗಮೇಶ್ವರ ಸ್ವಾಮೀಜಿಗಳು ತುತ್ತು ಅನ್ನ ಕೊಡುತ್ತಿದ್ದರು. ಈ ಅನ್ನವನ್ನು ಏನದ್ರೂ ಮರೆತರೇ ಮುಂದೆ ಯಾವ ಜನ್ಮದಲ್ಲೂ ನಮಗೆ ಅನ್ನ ಸಿಗುವುದಿಲ್ಲ. ಆಗೇ ಅಂದು ಬಡತನ ಇಂದು ಸಿರಿತನ ಬಂದಾಗ ಹಳೆಯದನ್ನು ಎಂದು ಮರೆಯಬಾರದು. ಮರೆತರೇ ನಮಗೆ ತಿನ್ನುವುದಕ್ಕೆ ಏನು ಸಿಗುವುದಿಲ್ಲ. ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನಿಸಿದಾಗ ಒಂದು ಮಾತನಾಡದೇ ಒಪ್ಪಿಕೊಂಡು ಭಾಗವಹಿಸಿದ್ದೇನೆ ಎಂದು ಹಿಂದಿನ ನೆನಪನ್ನು ಮಾಡಿಕೊಂಡು ಸ್ಮರಿಸಿದರು.

ಅತ್ಯಂತ ಮಾರಕವಾಗಿರುವ ಕೊರೋನಾ ಬಂದಾಗ ಎಲ್ಲದಕ್ಕೂ ಔಷಧಿ ಕಂಡು ಹಿಡಿದು ಜೀವ ಉಳಿಸಿದರು. ಆದ್ರೆ ಕಂಡೋರ ಆಸ್ತಿ ಹೊಡೆಯುವುದಕ್ಕೆ ನೋಡುತ್ತಾರಲ್ಲ ಅವರಿಗೆ ಇನ್ನು ಯಾವ ಔಷಧಿ ಕಂಡು ಹಿಡಿದಿಲ್ಲವಲ್ಲ ಎಂದು ಸಲ್ಪ ಹಾಸ್ಯದ ಮಾತನ್ನು ಆಡುತ್ತಾ, ಯಾರಾದ್ರೂ ಕಂಡು ಹಿಡಿದಿದ್ರೆ ಅದನ್ನು ನೋಡಿ ತೃಪ್ತನಾಗುತ್ತೇನೆ ಎಂದರು. ಅನ್ಯಾಯ ಮಾಡಿದವರು ಒಂದು ದಿನ ಅದರ ಪಶ್ಚತಾಪ ಪಡಲೇಬೇಕು ಎಂದು ಇದೆ ವೇಳೆ ಕೆಲ ಮಾತುಗಳನ್ನಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಗಮನಸೆಳೆದರು.

ನಂತರ ಭಾಗವಹಿಸಿದ್ದ ವಿವಿಧ ಭಾಗದ ಮಠಾಧೀಶರು ತಮ್ಮ ಹಿತಾವಚನವನ್ನು ನುಡಿದು, ಮನುಷ್ಯನಾದವನು ಸಮಾಜದಲ್ಲಿ ಹೇಗೆ ಬದುಕಬೇಕು. ಇರುವ ಜನ್ಮವನ್ನು ಹೇಗೆ ಸಾರ್ಥಕತೆ ಮಾಡಿಕೊಳ್ಳಬೇಕು. ಸೇವೆ ಮಾಡುವುದರ ಮೂಲಕ ಜನ್ಮ ತೃಪ್ತಿಪಡೆದುಕೊಳ್ಳುವುದು ಹೇಗೆ? ಒಬ್ಬರೂ ಮತ್ತೊಬ್ಬರನ್ನು ಹಿಂಸಿಸದೇ, ಮೋಸ ಮಾಡದೇ ತನ್ನ ಸ್ವಂತ ದುಡಿಮೆಯಲ್ಲಿ ಬದುಕಿ ತೋರಿಸುವುದರ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಸಲಹೆ ನೀಡಿದರು.

ಪುಣ್ಯಾರಾಧನೆ ಶರಣರ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಜವೇನಹಳ್ಳಿ ಮಠದ ಆವರಣದಲ್ಲಿ ಮೊದಲು ಬೆಳಗಿನಿಂದ ವಿರಕ್ತ ಮಠದ ತ್ರಿಮೂರ್ತಿ ಗುರುಗಳಾದ ಶ್ರೀ ದೊಡ್ಡ ಶಾಂತವೀರ ಶಕ್ತಿ ಶಿವಯೋಗಿಗಳ ೧೦೬ನೇ , ಶ್ರೀ ಚಿಕ್ಕ ಶಾಂತವೀರ ಮಹಾಸ್ವಾಮಿಗಳ ೮೬ನೇ ಹಾಗೂ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳ ೩೬ನೇ ವರ್ಷದ ಪುಣ್ಯಾರಾಧನೆ ನಡೆಯಿತು. ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಿದರು. ಇದೆ ವೇಳೆ ಹಿರಿಯ ಹಾಸ್ಯ ಹಾಗೂ ಪೋಷಕ ನಟನಾದ ಎಸ್. ದೊಡ್ಡಣ್ಣ, ಬೆಂಗಳೂರು ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಟಿ.ಆರ್. ಶಿವಕುಮಾರ್, ಎನ್.ಬಿ.ಎಸ್.ಎಸ್. ನ್ಯಾಷನಲ್ ಛೇರ್‍ಮನ್ ಎಂ.ಬಿ. ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಿದರು.

See also  ಪಿಎಸ್ಐ ಅಕ್ರಮ ಪ್ರಕರಣ : ತಂದೆ ಮಗ ಸೇರಿ ಮೂವರ ಬಂಧನ

ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ತೋಟದಾರ್ಯಮಠದ ಮುಂಡರ್ಗಿಯ ಶ್ರೀ ನಿಜಗುಣಾನದ ಮಹಾಸ್ವಾಮಿ ಮತ್ತು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ವಹಿಸಿದ್ದರು.

ಇದೆ ವೇಳೆ ವಿವಿಧ ಮಠದ ಮಠಾಧೀಶರಾದ ರಾಯನಾಳ ಹುಬ್ಬಳ್ಳಿಯ ರೇವಣ್ಣ ಸಿದ್ದೇಶ್ವರ ಮಹಾಸ್ವಾಮೀಜಿ, ಧರ್ಮರಾಜೇಂದ್ರ ಮಹಾಸ್ವಾಮಿ, ಸ್ವತಂತ್ರ ಬಸವಲಿಂಗ ಶಿವಯೋಗಿ, ವಿಜಯಕುಮಾರ ಮಹಾಸ್ವಾಮಿ, ಜಯದೇವ ಮಹಾಸ್ವಾಮಿ, ಗಂಗಾಧರ್ ಶಿವಚಾರ್ಯ ಮಹಾಸ್ವಾಮಿ, ಮಹಾಂತ ಶಿವಲಿಂಗ ಮಹಾಸ್ವಾಮಿ, ಸೋಮಶೇಖರ ಶಿವಚಾರ್ಯ ಮಹಾಸ್ವಾಮಿ, ಕಲ್ಯಾಣ ಮಹಾಸ್ವಾಮಿ, ಬಸವರಾಜೇಂದ್ರ ಮಹಾಸ್ವಾಮಿ, ಮಲ್ಲೇಶ್ವರ ಮಹಾಸ್ವಾಮಿ, ಮಹಾಂತ ಮಹಾಸ್ವಾಮಿಗಳು ವಹಿಸಿದ್ದರು. ಜೊತೆಗೆ ಲಿಂಗಾಯತ ವೀರಶೈವ ಮಹಾಸಭೆ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜವೇನಹಳ್ಳಿ ಮಠದ ಹಿತಾರಕ್ಷಣಾ ಸಮಿತಿ ಅಧ್ಯಕ್ಷರಾದ ಬಿ.ವಿ. ಉಮೇಶ್, ಉದ್ಯಮಿ ಎಸ್.ಹೆಚ್. ರಾಜಶೇಖರ್, ಲಿಂಗಾಯತ ಮಹಾಸಭಾದ ಅಧ್ಯಕ್ಷ ಹೆಚ್.ಆರ್. ಹೊಂಬೇಶ್, ಬಸವ ಕೇಂದ್ರದ ಅಧ್ಯಕ್ಷರಾದ ಯು.ಎಸ್. ಬಸವರಾಜು, ವೀರಶೈವ ಯುವ ಸೇನೆಯ ಉಪಾಧ್ಯಕ್ಷ ಶರತ್ ಭೂಷಣ್, ಜಿಲ್ಲಾ ಲಿಂಗಾಯತ ವೀರಶೈವ ಸಂಘದ ಸಹಕಾರ್ಯದರ್ಶಿ ಮಯೋರಿ ಲೋಕೇಶ್, ಅವಿನಾಶ್, ಮೋಹನ್, ಮನೀಜ್, ದರ್ಶನ್, ವೇಣುಕುಮಾರ್ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು