News Kannada
Wednesday, May 31 2023
ಹಾಸನ

ಬೇಲೂರು: ಯಂತ್ರೋಪಕರಣಗಳಿಗೂ ಸಬ್ಸಿಡಿ ಡೀಸೆಲ್- ಬಿ.ಸಿ ಪಾಟೀಲ್

Belur: Subsidised diesel for machinery: B C Patil
Photo Credit : News Kannada

ಬೇಲೂರು: ಮುಂದಿನ ದಿನಗ ಳಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಗೆ ಸಬ್ಸಿಡಿ ದರದಲ್ಲಿ ಡೀಸೆಲ್ ವ್ಯವಸ್ಥೆ ಮಾಡಲು ಮುಂದಿನ ದಿನಗಳಲ್ಲಿ ಯೋ ಜನೆ ರೂಪಿಸುವುದಾಗಿ ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದರು.

ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆದ ಶ್ರೀ ಪುಷ್ಪಗಿರಿ ಸಾವಯುವ ಕೃಷಿ ಸಂಘದ ದಶಮಾ ನೋತ್ಸವ, ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದ ಅವರ ಅನ್ನದಾತನಿಗೆ ನಮನ ಸಲ್ಲಿಸಬೇಕಾ ದರೆ ನಾವುಗಳು ಜೈ ಕಿಸಾನ್ ಎಂಬ ಘೋಷಣೆಯೊಂದಿಗೆ ದೂರವಾಣಿ ಕರೆಗಳನ್ನು ಸ್ವೀಕರಿಸುವಂತಾಗಬೇಕು ಎಂದರು.

ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಾಲ್ಕು ವಿಶ್ವವಿದ್ಯಾನಿಲ ಯಗಳಲ್ಲಿ ಬಿಎಸ್ಸಿ ಎ ಜಿ ಪದವಿ ವಿಭಾಗ ತೆರೆಯಲಾಗಿದೆ. ನಾಲ್ಕುವರೆ ಸಾವಿರ ವಿದ್ಯಾರ್ಥಿಗಳಿಗೆ ಸೀಟು ನಿಗದಿ ಮಾಡಿರುವುದು ಹಾಗೆಯೇ ರೈತ ಶಕ್ತಿ ಯೋಜನೆ ಅಡಿಯಲ್ಲಿ ರೈತರಿಗೆ ೧೨೫೦ ಸಹಾಯ ವಾಗುವುದು ಪ್ರಧಾನಮಂತ್ರಿ ಕಿರುಜಿಯೋಗ ಯೋಜನೆ ಅಡಿಯಲ್ಲಿ ಶೇಕಡಾ ಸಣ್ಣಪುಟ್ಟ ಫ್ಯಾಕ್ಟರಿಗಳನ್ನು ತೆರೆಯುವುದಕ್ಕೆ ಉದ್ಯಮಗಳಿ ಗಾಗುವುದಕ್ಕೆ ಸುಮಾರು ಹದಿನೈದು ಲಕ್ಷದವರೆಗೂ ಸಬ್ಸಿಡಿ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹ ಯೋಗದೊಂದಿಗೆ ನೀಡಲಾಗುತ್ತಿದೆ ಎಂದರು. ಕೃಷಿಯನ್ನು ರೈತರು ಒಂದು ಲಾಭದಾಯಕ ಉದ್ಯೋಗವೆಂದು ಭಾವಿಸಬೇಕು ರೈತರ ಬೆಳೆ ಬೆಳೆಯುವ ವಿಧಾನಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಬದಲಿ ಬೆಳೆಗಳನ್ನು ಬೆಳೆಯುವಂತಹ ರಾಸಾಯನಿಕ ಗೊಬ್ಬರಗಳನ್ನ ಹಾಕುವುದನ್ನು ಬಿಡಬೇಕು.

ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ಬೆಳೆ ಬೆಳೆಯುವ ಪದ್ಧತಿಯನ್ನು ರೂಡಿಸಿಕೊಳ್ಳಬೇಕು ಆಗ ಮಾತ್ರ ಕೃಷಿ ನಿಜವಾಗಿಯೂ ಕೂಡ ರೈತರಿಗೆ ಲಾಭದಾಯಕ ಉದ್ಯೋಗವಾಗಿ ಮಾಡಿಕೊಳ್ಳಬಹುದು ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾವಯುವ ಪದ್ದತಿಯನಲ್ಲಿ ಬೆಳೆ ಬೆಳೆಯುವಂತಹ ರೈತರಿಗೆ ರೂ.೧೦,೦೦೦ ಸಹಾಯಧನ ವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಸಿರಿಧಾನ್ಯಗಳ ಬಳಸುವ ಬೆಳೆಯುವ ಪದ್ಧತಿಯನ್ನು ರೂಡಿಸಿಕೊ ಳ್ಳಬೇಕು ಎಂದು ತಿಳಿಸಿದರು. ಡಾ. ಎಂ ವಿ ಧನಂಜಯ್ ಪ್ರಧಾನ ವಿಜ್ಞಾನಿಗಳು ಭಾರತೀಯ ವಿಜ್ಞಾನ ಇವರು ಮಾತನಾಡಿ ಶ್ರೀಗಳು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ಈ ಭಾಗದ ರೈತರಿಗೆ ಸ್ಪೂರ್ತಿದಾಯಕ ರಾಗಿದ್ದಾರೆ ಸಾವಯವ ವಸ್ತುಗಳ ಎಲ್ಲಾ ರೈತರಿಗೆ ಮಾರಾಟ ಮಾಡಲು ಸೂಕ್ತವಾದಂತಹ ಮಾರುಕಟ್ಟೆಯ ಅನುಕೂಲವಾಗುವಂತ ವ್ಯವಸ್ಥೆ ಅವಶ್ಯಕತೆ ಇದೆ ಈ ಮೂಲಕವಾಗಿ ರೈತರ ಬೆಳೆದ ಬೆಳೆಗೆ ನ್ಯಾಯ ಒದಗಿಸುವುದರ ಜೊತೆಗೆ ಜೊತೆಗೆ ರೈತರಿಗೆ ಶಕ್ತಿ ತುಂಬ ಕೆಲಸವನ್ನು ಮಾಡಬೇಕಿದೆ ಎಂದು ತಿಳಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರ ಶಾಸಕ ಕೆ ಎಸ್ ಲಿಂಗೇಶ್ ಮಾತನಾಡಿ , ದೇಶ ಸ್ವತಂತ್ರ ಬಂದ ಸಂದರ್ಭದಲ್ಲಿ ಜನಸಂಖ್ಯೆ ಕೇವಲ ೩೦ ಕೋಟಿ ಇತ್ತು ಆದರೆ ಇಂದು ೧೩೦ ಕೋಟಿ ತಲುಪಿದೆ, ಸ್ವಾವಲಂಬನೆ ಕೃಷಿಯನ್ನು ಅಳವಡಿಸಿಕೊಂಡಿರುವುದರಿಂದಾಗಿ ರೈತರ ಹಸಿರು ಕ್ರಾಂತಿಯ ಪರಿಣಾಮವಾಗಿ ಅತಿವೃಷ್ಟಿ ಅನಾವೃಷ್ಟಿ ಸಂದರ್ಭದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿರುವುದು ಹೆಮ್ಮೆಯ ಸಂಗತಿ ಇದಕ್ಕೆ ಪ್ರಮುಖ ಕಾರಣ ಅನ್ನದಾತರಿಗೆ ಸರ್ಕಾರದ ವತಿಯಿಂದ ಬೆಳೆ ವಿಮೆ ಬೆಳೆ ಹಾನಿ ಪರಿಹಾರ ಮುಂತಾದವುಗಳನ್ನ ಸರಿಯಾದ ಸಮಯಕ್ಕೆ ನೀಡುವ ಮೂಲಕ ರೈತರ ಹಿತ ಕಾಯಬೇಕಾಗಿದೆ ಎಂದು ತಿಳಿಸಿದರು.

See also  ಹಾಸನ: ರೈತರು ಅಗೆದ ಕಂದಕಕ್ಕೆ ಬಿದ್ದ ಆನೆ ಮರಿ

ಕಾರ್ಯಕ್ರಮದಲ್ಲಿ ಪುಷ್ಪಗಿರಿ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಜಗತ್ತಿಗೆ ಆಹಾರ ನೀಡುವ ಹಸಿವನ್ನು ನೀಗಿಸುವ ಅನ್ನದಾತ ದೃತಿಗೆಡಬಾರದು , ಪ್ರಾಮಾಣಿಕ ಕಾಯಕ ನಿಷ್ಠೆಯಿಂದ ಕೆಲಸ ಮಾಡಿದರೆ ಭೂಮಿತಾಯಿ ಫಲ ನೀಡುತ್ತಾಳೆ ಜಗತ್ತಿನಲ್ಲಿ ಬಹು ದೊಡ್ಡ ಶಕ್ತಿ ರೈತರು, ರೈತ ಮಾರುಕಟ್ಟೆಗಳನ್ನು ಹೆಚ್ಚಿಸಿದರೆ ರಾಜ್ಯದಲ್ಲಿ ರೈತರು ನೆಮ್ಮದಿಯ ಜೀವನ ನಡೆಸುತ್ತಾರೆ ಎಂದು ತಿಳಿಸಿದರು.

ಕೃಷಿ ಮೇಳದಲ್ಲಿ ಸುಮಾರು ೩೫ಕ್ಕೂ ಹೆಚ್ಚು ಯಂತ್ರೋಪಕರಣಗಳನ್ನು ಪ್ರದರ್ಶನ ರೈತರ ಆಕರ್ಷಕವಾಗಿತ್ತು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಯೋಗೀಶ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸುನಿತಾ , ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಉಪಾಧ್ಯಕ್ಷರು ಕೊರಟಿಗೆರೆ ಪ್ರಕಾಶ್ ಪುಷ್ಪಗಿರಿ , ಮಠದ ಆಡಳಿತ ಅಧಿಕಾರಿ ಕಿಟ್ಟಪ್ಪ , ಮುಖಂಡರಾದ ರಮೇಶ್ ಬಸವರಾಜು ನಿರಂಜನ್ ಶಿವಪ್ಪ ರಘುನಾಥ್ ಮುಂತಾದವರು ಹಾಜರಿದ್ದರು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು