ಅರಕಲಗೂಡು: ಮುಂಬರುವ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳ ಅಧಿಕಾರಕ್ಕೆ ಬರುವುದಿಲ್ಲ ಅವರು, ಗೆದ್ದೆತ್ತಿನ ಬಾಲ ಹಿಡಿಯುವವರು, ಬಿಜೆಪಿ ಶಾಸಕರನ್ನು ಖರೀಧಿಸಿ ಅಧಿಕಾರದಲ್ಲಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ತಾಲ್ಲೂಕಿನ ಬೆಳಗೂಲಿ ಗ್ರಾಮದಲ್ಲಿ ಕನಕದಾಸ ಮತ್ತು ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಅನಾವರಣ ಮಾಡಿದ ನಂತರ ೨೫ ಸಾವಿರಕ್ಕೂ ಹೆಚ್ಚು ಸೇರಿದ್ದ ಕಿಕ್ಕಿರಿದ ಜನಸಂದಣಿ ಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕಾರಣ ಇವತ್ತು ಕೆಟ್ಟ ಪರಿಸ್ಥಿತಿ ನಿರ್ಮಾಣ ಮಾಡಿದೆ. ಬಿಜೆಪಿ ಅಪರೇಷನ್ ಕಮಲದ ಮೂಲಕ ಬಂದವರು. ಬಂದ ಮೇಲೆ ಬರೀ ಲೂಟಿ ಮಾಡುತ್ತಿದ್ದಾರೆ. ನನ್ನ ೪೦ ವರ್ಷ ರಾಜಕಾರಣದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ ಬಂದ ಮೇಲೂ ಅಭಿವೃದ್ದಿ ಆಗಿಲ್ಲ. ಬಿಜೆಪಿ ಭ್ರಷ್ಟಾಚಾರದ ಜೊತೆಗೆ ವಚನ ಭ್ರಷ್ಟರೂ ಆಗಿದ್ದಾರೆ. ಸರ್ಕಾರದಲ್ಲಿ ಬರೀ ಲೂಟಿ ನಡೆಯುತ್ತಿದ್ದು, ಇವರು ೪೦% ಸರ್ಕಾರ ಎಂದು ಕೆಂಪಣ್ಣ ಮೋದಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.
ಪ್ರಧಾನಿ ಹೇಳಿದಂತೆ ನಾ ಕಾವೋಂಗ ನಾ ಕಾನೆ ದೂಂಗಾ ಎನ್ನುವ ಮಾತು ಸುಳ್ಳಾಗಿದೆ. ವಿಧಾನ ಸೌಧ ಗೋಡೆಗಳು ಲಂಚ ಅಂತ ಪಿಸುಗುಡಿತ್ತಿವೆ ಎಂದು ಟೀಕಿಸಿದರು.
ಆರ್‌ಎಸ್‌ಎಸ್ ಕಟ್ಟಿದ ಹೆಡೆಗೆ ವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಭಗತ್ ಸಿಂಗ್ ಸಹ ಆರ್.ಎಸ್.ಎಸ್. ಸದಸ್ಯರಲ್ಲ. ಬಿಜೆಪಿಯವರು ಒಬ್ಬರು ಹೋರಾ ಟದಲ್ಲಿ ಸತ್ತಿಲ್ಲ.. ಈ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ನೇರ ಚರ್ಚೆಗೆ ಬರಲು ನಾನು ಕೊಟ್ಟ ಆಫರ್‌ಗೆ ಬಿಜೆಪಿ ಮೌನವಾಗಿದೆ. ದಮ್ಮು-ತಾಕತ್ತು ಇದ್ದರೆ ಬಂದು ಚರ್ಚಿಸಲಿ ಎಂದು ಸವಾಲು ಹಾಕಿದರು.
ಕನಕದಾಸರು ೧೫ ಶತಮಾ ನದಲ್ಲಿದ್ದರು ಇವರ ೫೩೫ನೇ ಜಯಂತಿಯನ್ನು ಆಚರಿಸುತ್ತಿ ದ್ದೇವೆ. ೧೯೮೮ ಬೊಮ್ಮಾಯಿ ಸಿಎಂ ಆದಾಗ ನಾನು ಸಾರಿಗೆ ಮಂತ್ರಿಯಾಗಿದ್ದೇ, ಅಂದು ಕನಕದಾಸರ ೫೦೦ ಜಯಂತಿ ಮಾಡಿದ್ದೇವು. ನಂತರ ಇದು ಪ್ರೇರಣೆಯಾಗಿ ನಡೆದು ಬಂದಿತು ಎಂದರು.
ಪುರಂದರದಾಸ ಭಕ್ತಿ ಪರಂ ರೆಯಾದರೆ, ಕನ್ನಡ ಸಾಹಿತ್ಯದಲ್ಲಿ ದಾಸ ಮತ್ತು ವಚನ ಸಾಹಿತ್ಯ ಜನರ ಭಾಷೆಯಲ್ಲಿ ಭೋದನೆ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ಸೈನಿಕ ಶಾಲೆ ಪ್ರಾರಂಬಿ ಸಿದೆ ಮಹಾನ್ ವ್ಯಕ್ತಿಗಳ ಪ್ರತಿಮೆ ಅನಾವರಣ ಮಾಡಿದ್ದು, ಇದು ದೇಶ ದ ಯುವಕರಿಗೆ ದಾರಿ ದೀಪವಾಗಲಿ ಎಂದು ಮನವಿ ಮಾಡಿದರು.
ಕಾರ್‍ಯಕ್ರಮದಲ್ಲಿ ಆಯೋಜಕ ಕೃಷ್ಣೇಗೌಡ, ಕಾಂಗ್ರೆಸ್ ಮುಖಂ ಡರುಗಳಾದ ಮಾಜಿ ಸಚಿವ ಮಹದೇವಪ್ಪ, ಬೈರತಿ ಸುರೇಶ್, ಹೆಚ್.ಕೆ.ಜವರೇಗೌಡ, ಹೆಚ್.ಪಿ ಮೋಹನ್ ನೂರಾರು ಮುಖಂಡರು ಹಾಜರಿದ್ದರು.