ಸಕಲೇಶಪುರ: ಸಕಲೇಶಪುರ ಭಾಗದಲ್ಲಿನ ಕೆಲವು ಗ್ರಾಮಗಳಲ್ಲಿ ಮುಂಜಾನೆ ಸಮಯದಲ್ಲಿ ಕಾಡಾನೆಗಳ ಪ್ರತ್ಯಕ್ಷವಾಗುವುದು ಹೆಚ್ಚಾಗ ತೊಡಗಿದೆ.ಇಂದು ಮುಂಜಾನೆ ಬೆಳಗೋಡು, ಗೋಳಗೊಂಡೆ ಗ್ರಾಮದ ಸುತ್ತಮುತ್ತ ಕಾಡಾನೆ ಸಂಚಾರ ನಡೆಸಿದೆ.
ಬೆಳಗಿನ ಸಮಯದಲ್ಲಿ ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಉದ್ಯೋ ಗಸ್ಥರು ತೆರಳುವ ವೇಳೆ ಕಾಡಾನೆಗಳು ಓಡಾಟ ನಡೆಸುತ್ತಿರುವುದು ಸಾರ್ವಜನಿ ಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಕನ ಆನೆಯು ಮನೆಗಳ ಮೇಲೆ ದಾಳಿ ನಡೆಸುವ ಪ್ರವೃತ್ತಿ ಹೊಂದಿದ್ದು ಈಗಾಗಲೇ ಬಾಳ್ಳುಪೇಟೆಯ ಕೆಲವು ಕಡೆಗಳಲ್ಲಿ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ. ಇದೇ ಆನೆಯೂ ಹಲಸುಲಿಗೆ ಗ್ರಾಮದಲ್ಲೂ ಮನೆಗಳ ಮೇಲೆ ದಾಳಿ ನಡೆಸಿ ಕಿಟಕಿ ಗಾಜು,ಬಾಗಿಲು ಮುರಿದು ಹಾಕಿತ್ತು. ಈಗಾಗಲೇ ಮನೆಗಳ ಆಕ್ರಮಣಕಾರಿ ಮನೋಭಾವ ಹೊಂದಿರುವ ಮಕನ ಆನೆಯನ್ನು ಸೆರೆ ಹಿಡಿಯುವಂತೆ ಶಾಸಕರು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಇತ್ತೀಚಿಗೆ ಅರಣ್ಯ ಇಲಾಖೆಯಿಂ ದ ಟಾಸ್ಕ್ ಫೋರ್ಸ್ ರಚನೆ ಮಾಡಿ ದ್ದರೂ ಸಹ ಸಕಲೇಶಪುರ ಆಲೂರು ಭಾಗಗಳಲ್ಲಿ ಆನೆಗಳ ಉಪಟಳ ನಿಂತಿಲ್ಲ ಕೇವಲ ಆನೆಗಳ ಬರುವಿಕೆಯ ಬಗ್ಗೆ ಮಾಹಿತಿ ನೀಡುತ್ತಿರುವ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂದು ರೈತರು ಹಾಗೂ ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.