ಹಾಸನ: ಶಾಂತಿಗ್ರಾಮ ಟೋಲ್ ಬಳಿ ಸ್ಥಳೀಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಕಿರುಕುಳ ಮತ್ತು ದಬ್ಬಾಳಿಕೆ ಖಂಡಿಸಿ ವಿವಿಧ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಟೋಲ್ ಬಳಿ ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಇರುವ ಶಾಂತಿಗ್ರಾಮ ಟೋಲ್ ಸಂಸ್ಥೆ ಹಾಗೂ ಸಿಬ್ಬಂದಿಗಳಿಂದ ನಿರಂತರವಾಗಿ ಸ್ಥಳೀಯರ ಮೇಲೆ ಮತ್ತು ಹೋರಾಟಗಾರರ ಮೇಲೆ ಕಿರುಕುಳ ಮತ್ತು ದಬ್ಬಾಳಿಕೆ ಮಾಡುವುದನ್ನು ಖಂಡಿಸುತ್ತೇವೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಇರುವ ಕಡೆ ಸರ್ವೀಸ್ ರಸ್ತೆಯನ್ನು ಮಾಡಬೇಕು. ಇಪ್ಪತ್ತು ಕಿ.ಮೀ.ವ್ಯಾಪ್ತಿಯವರೆಗೂ ಆಧಾರ್ ಕಾರ್ಡ್ ಆಧಾರದಲ್ಲಿ ಸ್ಥಳೀಯರಿಗೆ ಉಚಿತ ಬಿಡಬೇಕು. ಟೋಲ್ ಸ್ಥಾಪನೆಗೆ ೬೦ ಕೀ.ಮೀ. ಅಂತರ ಇರಬೇಕು. ಟೋಲ್‌ನಲ್ಲಿ ಕನ್ನಡಿಗರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಸುಂಕ ಕಟ್ಟುವ ಪ್ರಯಾಣಿ ಕರಿಗೆ ಶೌಚಾಲಯ ಹಾಗೂ ವಿಶ್ರಾಂತಿ ಗೃಹ ನಿರ್ಮಾಣ ಮಾಡಿ, ಅಪಘಾತ ವಾದಗ ತುರ್ತು ಚಿಕಿತ್ಸೆ ಮಾಡಿಸಬೇಕು ಮತ್ತು ಸಾರ್ವಜನಿಕರ ಕರೆಗೆ ಮುಖ್ಯಸ್ಥರು ಸ್ಪಂದಿಸಬೇಕು ಎಂದು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. ದಬ್ಬಾಳಿಕೆ ಮತ್ತು ಮೂಲ ಸೌಕರ್ಯವನ್ನು ವಂಚಿಸಿ ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿರುವ ಎಲ್.ಎನ್.ಟಿ.ಶಾಂತಿಗ್ರಾಮ ಟೋಲ್ ವಿರುದ್ಧ ಬೃಹತ್ ಹೋರಾಟ ಮಾಡುತ್ತಿ ದ್ದೇವೆ ಎಂದು ತಿಳಿಸಿದರು.
ಈ ವೇಳೆ ಟೋಲ್ ಅಧಿಕಾರಿ ಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಾಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಹೋರಾಟದಲ್ಲಿ ವಿವಿಧ ಸಂಘಸಂಸ್ಥೆಗಳು ಸೇರಿ ಸುತ್ತ ಮುತ್ತಲದ ಜನರು ಭಾಗ ವಹಿಸಿದ್ದರು. ಕನ್ನಡ ಹೋರಾಟ ಗಾರ ಬಾಳ್ಳು ಗೋಪಾಲ್, ರಾಜ್ಯ ರೈತ ಸಂಘ ಜಿಲ್ಲಾಅಧ್ಯಕ್ಷ ಪಾಂಡುರಂಗ, ಅನಂತಕುಮಾರ್ ಮತ್ತು ಒಕ್ಕಲಿಗರ ಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ರಾಕೇಶ್‌ಗೌಡ, ಭೋವಿ ಸಂಘದ ಜಿಲ್ಲಾಧ್ಯಕ್ಷರು ಸಂದೀಪ್, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಿನೇಶ್‌ಗೌಡ,ಕರವೇ ಶಿವರಾಮೇಗೌಡ ಬಣ ಅಧ್ಯಕ್ಷ ಪ್ರವೀಣ್‌ಗೌಡ,ಕರುನಾಡ ರಕ್ಷಣಾ ವೇದಿಕೆಚಂದನ್‌ಗೌಡ, ಪಾಲಾಕ್ಷ, ಪುನೀತ್, ಪವನ್ ಕುಮಾರ್ ಹೀಗೆ ನೂರಾರು ಹೋರಾಟಗಾರರು ,ಸುತ್ತಮುತ್ತಲ ಗ್ರಾಮಸ್ಥರುಇದ್ದರು.