ಹಾಸನ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಕೆಲವರು ಟಿಕೆಟ್‌ಗಾಗಿ ಹೋರಾಡುತ್ತಿದ್ದರೆ ಇನ್ನು ಕೆಲವರು ಕ್ಷೇತ್ರವನ್ನ ಗಟ್ಟಿಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ಇದರಲ್ಲಿ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರೊ ಬಗ್ಗೆ ಮಾತಾಡಿದ್ದು, ನಾನು ಕಾಂಗ್ರೆಸ್ ಸೇರಿದ್ರೆ 50,000 ಲೀಡಲ್ಲಿ ಗೆಲ್ತಿನಿ ಎಂದಿದ್ದಾರೆ. ಇದೀಗ ಇದು ರಾಜ್ಯ ರಾಜಕಾರಣದಲ್ಲಿ ಬಾರಿ ಸಂಚಲನ ಮೂಡಿಸಿದೆ. ರೇವಣ್ಣ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಮಾಡದೆ ಯಾರಲ್ಲ ಯಾವನಪ್ಪ ಬಂದ್ರು ನಾ ಗೆಲ್ತಿನಿ ಎಂದಿದ್ದಾರೆ.
ಶಾಸಕ ಶಿವಲಿಂಗೇಗೌಡ ಕಳೆದ ಒಂದು ವರ್ಷದಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ತಾರೆ ಎಂಬ ಬಗ್ಗೆ ವದಂತಿ ಕೂಡ ಈ ಹಿಂದೆ ಹರಡಿತ್ತು. ಕೆಪಿಸಿಸಿ ಕಾರ್ಯಾದ್ಯಕ್ಷ ಧ್ರುವನಾರಾಯಣ ಕೂಡ ಶಿವಲಿಂಗೇಗೌಡ ನಮ್ಮ ಪಾರ್ಟಿ ಸೇರ್ತಾರೆ ಎಂದು ಹೇಳಿದ್ರು, ಆದರೂ ಇದುವರೆಗೆ ಸುಳಿವು ಬಿಟ್ಟು ಕೊಡದ ಶಾಸಕ ಶಿವಲಿಂಗೇಗೌಡ. ಇದೀಗ ತಾವು ಕಾಂಗ್ರೆಸ್ ಸೇರಿದ್ರೆ ದೊಡ್ಡ ಮಟ್ಟದ ಲೀಡಲ್ಲಿ ಗೆಲ್ತಿನಿ ಎನ್ನೋ ವಿಶ್ವಾಸದ ಕುರಿತು ಮಾತನಾಡಿದ್ದಾರೆ.
ತಮ್ಮ ಕಾರ್ಯಕರ್ತರ ಜೊತೆ ಮಾತನಾಡುವಾಗ ಕಾಂಗ್ರೆಸ್ ಸೇರೋ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಚರ್ಚೆಗೆ ಕಡೆಗೂ ಸ್ಪಷ್ಟನೆ ಸಿಕ್ಕಿದೆ.