ಹಾಸನ: ಕೇಂದ್ರ ಚುನಾವಣೆ ಆಯೋಗ ರಾಜ್ಯ ಚುನಾವಣೆಯನ್ನು ಘೊಷಣೆ ಮಾಡಿದೆ. ಮೇ ೧೦ ರಂದು ಮತದಾನಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಅದರಂತೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಭಾವ್ಯ ಅಭ್ಗರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದರಲ್ಲೂ ಜೆ.ಡಿ.ಎಸ್. ಪಕ್ಷವಂತೂ ಶತಾಯಗತಾಯ ಹಾಸನ ವಿಧಾನ ಸಭಾ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಜೆ.ಡಿ.ಎಸ್. ಪಕ್ಷದ ನಾಯಕರು ಈ ಬೆಳವಣಿಗೆಯಿಂದ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಬಿ.ಜೆ.ಪಿ. ಪಕ್ಷದ ಹಾಸನ ತಾಲ್ಲೂಕಿನ ದಾಸ ಒಕ್ಕಲಿಗ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯರೊಬ್ಬರನ್ನು ಜೆ.ಡಿ.ಎಸ್. ಪಕ್ಷಕ್ಕೆ ಕರೆತರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ ಎನ್ನಲಾಗಿದೆ.
ಬಿ.ಜೆ.ಪಿ. ಪಕ್ಷದ ದಾಸ ಒಕ್ಕಲಿಗ ಮುಖಂಡ ಜೆ.ಡಿ.ಎಸ್. ಪಕ್ಷಕ್ಕೆ ಬಂದರೆ ನಮ್ಮ ಸ್ಥಿತಿ-ಗತಿ ಏನು? ಪಕ್ಷದಲ್ಲಿ ನಮ್ಮ ಸ್ಥಾನ ಮಾನ ವೇನು ಅಂತ ಕೆಲ ಜೆ.ಡಿ.ಎಸ್. ಪಕ್ಷದ ಮುಖಂಡರು. ನಮಗೆ ಇನ್ನೇನೂ ರಾಜಕೀಯ ಸನ್ಯಾಸವೇ ಗತಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಬಿ.ಜೆ.ಪಿಯ ೧೩ ನಗರಸಭಾ ಸದಸ್ಯರಿದ್ದಾರೆ.
ಅವರಲ್ಲಿ ೩ ರಿಂದ ೫ ಜನ ನಗರಸಭಾ ಸದಸ್ಯರನ್ನು ಆಪರೇಶನ್ ಜೆ.ಡಿ.ಎಸ್. ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೆಲ ನಾಮ ನಿರ್ದೇಶನ ನಗರಸಭಾ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಜೆ.ಡಿ.ಎಸ್. ಪಕ್ಷದ ವಲಯದಲ್ಲಿ ಅಚ್ಚರಿಯ ಬೆಳೆವಣಿಗೆಗೆ ಕಾರಣವಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯೊಬ್ಬರು ಹಾಸನ ತಾಲ್ಲೂಕಿನ ಮತದಾರರನ್ನು ಸೆಳೆಯಲು ೯೦ಸಾವಿರ ಜೊತೆ ವಾಲೆ-ಜುಮ್ಮಕಿಯನ್ನು ಮತದಾರರಿಗೆ ಕೊಡಲು ಸಿದ್ದಪಡಿಸಿಕೊಂಡಿದ್ದಾರೆ ಎಂದು ಹಾಸನ ತಾಲ್ಲೂಕಿನಾದ್ಯಂತ ಗುಸುಗುಸು ಸುದ್ಧಿ ಹಬ್ಬಿದೆ.