News Kannada
Friday, January 27 2023

ಮಡಿಕೇರಿ

ಲಂಚ: ಕಾರ್ಯಪಾಲಕ ಎಂಜಿನಿಯರ್‌ ಸೇರಿ ಐವರು ಎಸಿಬಿ ಬಲೆಗೆ

Photo Credit :

ಮಡಿಕೇರಿ: ರಸ್ತೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯ ಟೆಂಡರ್‌ ನೀಡಲು ಗುತ್ತಿದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕೊಡಗು ಜಿಲ್ಲಾ ಪಂಚಾಯಿತಿಯ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸೇರಿ ಐವರು ಶನಿವಾರ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್‌ ಶ್ರೀಕಂಠಯ್ಯ, ಸಹಾಯಕ ಎಂಜಿನಿರ್‌ ತೌಸಿಫಿ, ಎಸ್‌ಡಿಎ ರಮೇಶ್‌, ಕವನ್‌ ಹಾಗೂ ಸಂತೋಷ್‌ ಅವರು ಎಸಿಬಿ ಬಲೆಗೆ ಬಿದ್ದವರು.

ಇವರಿಂದ ಒಟ್ಟು ₹ 4.10 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಎಸ್‌ಪಿ ಅರುಣಾಂಶು ಗಿರಿ ಮಾಹಿತಿ ನೀಡಿದ್ದಾರೆ.

ಎಸಿಬಿ ಅಧಿಕಾರಿಗಳು ಕಚೇರಿಯ ಮೇಲೆ ದಾಳಿ ನಡೆಯುತ್ತಿದ್ದಂತೆ ಗುತ್ತಿಗೆದಾರರಿಂದ ಪಡೆದಿದ್ದ ಹಣವನ್ನು ಕಿಟಕಿಯ ಮೂಲಕ ಪಕ್ಕದ ಕಾಡಿಗೆ ಎಸೆದಿದ್ದರು. ಅದನ್ನು ಅಧಿಕಾರಿಗಳು ಹುಡುಕಿ ವಶ ಪಡಿಸಿಕೊಂಡರು. ಶ್ರೀಕಂಠಯ್ಯ ಅವರ ಮನೆಯ ಮೇಲೂ ದಾಳಿ ನಡೆದಿದೆ. ಗುತ್ತಿಗೆದಾರ ಬಡ್ಡೀರ ನಂದ ಎಂಬುವರು ಎಸಿಬಿಗೆ ಲಂಚ ಬೇಡಿಕೆಯಿಟ್ಟಿದ್ದ ದಾಖಲೆ ಸಹಿತ ದೂರು ನೀಡಿದ್ದರು.

See also  ಕೊಡಗಿನಲ್ಲೂ ಹೆಚ್ಚುತ್ತಿರುವ ಕೊರೋನಾ ಸೋಂಕು: 58 ಹೊಸ ಪ್ರಕರಣಗಳು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು