News Kannada
Thursday, March 23 2023

ಮಡಿಕೇರಿ

ಮೈಸೂರು -ಕುಶಾಲನಗರ ನೂತನ ರಾಷ್ಟ್ರೀಯ ಹೆದ್ದಾರಿ ಅನುಷ್ಠಾನ ಸಂಬಂದ ಪೂರ್ವ ಭಾವಿ ಸಭೆ

Photo Credit :

ಮೈಸೂರು ;  ನೂತನ ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ (NH-275) ಯೋಜನೆ ಕುರಿತಂತೆ ಅನುಷ್ಠಾನಗೊಳಿಸುವ ಸಂಬಂಧ  ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪ ಸಿಂಹ ಅವರ ಅದ್ಯಕ್ಷತೆಯಲ್ಲಿ  ಶನಿವಾರ  ಸಭೆಯು ನಡೆಯಿತು.

3300.45 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆಗಾಗಿ   ಅರಣ್ಯ ಇಲಾಖೆ ,   ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ , ಸೆಸ್ಕ್‌ , ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳನ್ನು  ಸಭೆಗೆ ಆಹ್ವಾನಿಸಿ  ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ  ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸೃತ ಚರ್ಚೆ ನಡೆಸಲಾಯಿತು.

ಈ ಉದ್ದೇಶಿತ ಯೋಜನೆಗೆ ವಿಸೃತ ಯೋಜನಾ ವರದಿ ಸಿದ್ದ ಪಡಿಸಲಾಗಿದ್ದು ಕಾಮಗಾರಿಯು ಒಟ್ಟು 30 ತಿಂಗಳುಗಳಲ್ಲಿ    ಪೂರ್ಣಗೊಳ್ಳಲಿದೆ. ಈ ನೂತನ ಹೆದ್ದಾರಿಯು  ಶ್ರೀರಂಗಪಟ್ಟಣದ ಅಗ್ರಹಾರ  ಗ್ರಾಮದಿಂದ  ಪ್ರಾರಂಭಗೊಂಡು ಕುಶಾಲನಗರ ಹೊರವಲಯದ ಬಸವನಳ್ಳಿ ಗ್ರಾಮದವರೆಗೆ ಬರಲಿದ್ದು ಈ ಯೋಜನೆಯ ಒಟ್ಟು ಉದ್ದ 92 ಕಿಲೋಮೀಟರ್‌ ಗಳಾಗಿದೆ.  ಈ  ಹೆದ್ದಾರಿಯಲ್ಲಿ  45 ಮೀಟರ್‌ ಗಳಷ್ಟು ಅಗಲದ 4 ಪಥಗಳ  ರಸ್ತೆ  ನಿರ್ಮಾಣಗೊಳ್ಳಲಿದೆ.

ಈ ನೂತನ ಹೆದ್ದಾರಿಗೆ ಭೂಸ್ವಾಧೀನಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದ್ದು  ಇದರಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಯೋಜನೆಯ ಸಿವಿಲ್‌ ಕಾಮಗಾರಿ ವೆಚ್ಚ ಸುಮಾರು 2300.45 ಕೋಟಿ ರೂಪಾಯಿಗಳಾಗಿದ್ದು ಭೂಸ್ವಾದೀನಕ್ಕೆ 1000 ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ.

ಈ ಹೆದ್ದಾರಿಯಲ್ಲಿ  ಕುಶಾಲನಗರ , ಪಿರಿಯಾಪಟ್ಟಣ, ಹುಣಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್‌ ಬರಲಿದೆ. ಈ ಹೆದ್ದಾರಿಯು ಮೈಸೂರಿಗೆ ಸಂಪರ್ಕ ಹೊಂದುವುದಿಲ್ಲ. ಇದು ಬಸವನಳ್ಳಿಯಿಂದ ನೇರವಾಗಿ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇ ಗೆ ಸಂಪರ್ಕ ಕಲ್ಪಿಸಲಿದೆ.

ಒಟ್ಟು ಮೂರು ಪ್ಯಾಕೇಜ್‌ ಗಳಲ್ಲಿ  ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ಒಟ್ಟು ನಾಲ್ಕು ದೊಡ್ಡ ಸೇತುವೆಗಳು ಒಂದು ಚಿಕ್ಕ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಹೆದ್ದಾರಿಯಲ್ಲಿ ಕೊಪ್ಪ ಬಳಿ ರೆಸ್ಟ್‌ ಏರಿಯಾ ಕೂಡ ನಿರ್ಮಾಣವಾಗಲಿದ್ದು ಒಟ್ಟು 13.16
ಕಿಲೋಮೀಟರ್‌ ಉದ್ದದ ಸರ್ವೀಸ್‌ ರಸ್ತೆ ಮತ್ತು 21.65 ಕಿಲೋಮೀಟರ್‌ ಉದ್ದದ ಸ್ಲಿಪ್‌ ರಸ್ತೆ ನಿರ್ಮಾಣಗೊಳ್ಳಲಿದೆ.

ಈ ಹೆದ್ದಾರಿಗೆ ಕುಶಾಲನಗರದಲ್ಲಿ  12.32 ಕಿಲೋಮೀಟರ್‌ ಉದ್ದದ ಬೈಪಾಸ್‌ , ಪಿರಿಯಾಪಟ್ಟಣದಲ್ಲಿ 19.92 ಕಿಲೋಮೀಟರ್‌ ಬೈಪಾಸ್‌ , ಹುಣಸೂರು , ಬಿಳಿಕೆರೆಯಲ್ಲಿ ಬೈಪಾಸ್‌ ಮತ್ತು ಇಲವಾಲ ಬಳಿ 4.59 ಕಿಲೋಮೀಟರ್‌ ಉದ್ದದ ಬೈಪಾಸ್‌
ನಿರ್ಮಾಣಗೊಳ್ಳಲಿದೆ.

ಈ ಹೆದ್ದಾರಿಯಲ್ಲಿ ಒಂದು ಫ್ಲೈ ಓವರ್‌ ಕೂಡ ನಿರ್ಮಾಣಗೊಳ್ಳಲಿದೆ.  ಈಗಾಗಲೇ 8506 ಕೋಟಿ ರೂಪಾಯಿಗಳ ವೆಚ್ಚದ  ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು  ಮುಂದಿನ ದಸರಾ ವೇಳೆಗೆ
ಪೂರ್ಣಗೊಳ್ಳಲಿದೆ.

ಅದು ಮುಗಿದ ಕೂಡಲೇ ಈ ಯೋಜನೆ ಅನುಷ್ಠಾನ ಚುರುಕಾಗಲಿದೆ ಎಂದು ಅಧಿಕಾರಿಗಳು ಹೇಳಿದರು. ಈಗ ಮಡಿಕೇರಿ -ಬೆಂಗಳೂರು ನಡುವಿನ ಪ್ರಯಾಣದ ಅವಧಿ 7 ಘಂಟೆಗಳಾಗಿದ್ದು ಈ ನೂತನ ಹೆದ್ದಾರಿ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ ಕೇವಲ 4 ಘಂಟೆಗಳಿಗೆ ಇಳಿಕೆ ಆಗಲಿದೆ.

See also  ಗೋಣಿಮರೂರು: 10ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಉದ್ಘಾಟನೆ

ಈ ಹೆದ್ದಾರಿ ಯಿಂದಾಗಿ ಬೆಂಗಳೂರು- ಮಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದ್ದು  ವಾಣಿಜ್ಯ ವಹಿವಾಟು , ಬಂದರು ಮೂಲಕ ಆಮದು ರಫ್ತು ವಹಿವಾಟೂ ಹೆಚ್ಚಳಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೂ ಹೆಚ್ಚಿನ
ಅನುಕೂಲ ಆಗುವುದರ ಜತೆಗೇ  ವಾಣಿಜ್ಯ ಚಟುವಟಿಕೆಯೂ ಹೆಚ್ಚಾಗಲಿದೆ.

ವಹಿವಾಟಿನ ಹೆಚ್ಚಳದಿಂದ ಉದ್ಯೋಗಾವಕಾಶವೂ ಹೆಚ್ಚಾಗಲಿದೆ. ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಗೌತಮ್‌ ಬಗಾದಿ , ಶಾಸಕ ಜಿ ಟಿ ದೇವೇ ಗೌಡ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು