News Kannada
Tuesday, October 03 2023
ಕ್ರೀಡೆ

ಚೆಟ್ಟಳ್ಳಿ: ಕ್ರಿಕೆಟ್‌ ಕ್ರೀಡೆಯಲ್ಲಿ ಸಂಭ್ರಮಿಸಿದ ಮಹಿಳೆಯರು

Chettalli: Women celebrate in the game of cricket
Photo Credit : By Author

ಚೆಟ್ಟಳ್ಳಿ: ಮಹಿಳೆಯರು ಬ್ಯಾಟ್‌ಹಿಡಿಯುತಾ ಫೀಲ್ಡ್  ಇಳಿದು ತಮ್ಮ ಕೌಟುಂಬಿಕ ಜಂಜಾಟಗಳನ್ನೆಲ್ಲ ಮರೆತು ಸಿಕ್ಸ್ ಬಾರಿಸುತಾ ತಾವೂಸಂಭ್ರಮಿಸುತಾ ಪ್ರೇಕ್ಷಕರಿಗೂ ಮುದನೀಡಿದ ಮಹಿಳಾ ಕ್ರಿಕೆಟ್‌ ಕ್ರೀಡೆಯಲ್ಲಿ ಆಕರ್ಶಣೀಯವಾಗಿತ್ತು.ವಿವಿಧ ಉಡುಪುಧರಿಸಿದ ಮಹಿಳಾ ಚೀರ್ ಉಮೆನ್ಸ್ ತಂಡದ ನ್ರತ್ಯ ಕಾರ್ಯಕ್ರಮಕ್ಕೆ ಮೆರಗುನೀಡಿತ್ತು.

ಮಹಿಳೆಯರು ತಯಾರಿಸಿದ ವಿವಿಧ ಬಗ್ಗೆ ತಿಂಡಿತಿನಿಸುಗಳ ಮಳಿಗೆಗಳು ಹಲವು ಬಗೆಯ ಕ್ರೀಡೆಗಳುಕಾರ್ಯಕ್ರಮದಲ್ಲಿ ಗಮನಸೆಳೆಯಿತು ಕೊಡಗಿನ ನಾನಾ ಕಡೆಗಳಿಂದ ಮಹಿಳೆಯರಲ್ಲದೆ ಪುರುಷರು ಮಕ್ಕಳು ಹೆಚ್ಚಾಗಿಭಾಗವಹಿಸಿದ್ದು ವಿಶೇಷವಾಗಿತ್ತು.

ಚೆಟ್ಟಳ್ಳಿ ಅವರ್‌ ಕ್ಲಬ್ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಉಮೆನ್ಸ್ ನಾಕ್‌ ಔಟ್‌ ಕ್ರಿಕೆಟ್‌ ಟೂರ್ನಮೆಂಟ್‌ನ್ನು ಕೊಡಗು ಜಿಲ್ಲಾ ಪೋಲೀಸ್‌ವರಿಷ್ಠಾಧಿಕಾರಿ ಕ್ಯಾಪ್ಟನ್‌ ಮಲ್ಚಿರ ಎ.ಅಯ್ಯಪ್ಪ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿ ಕ್ರೀಡೆಗಳುಮಾನಸಿಕ ಹಾಗು ದೈಹಿಕ ಸದ್ರಡತೆಗೆ ಸಹಕಾರಿಯಾಗಲಿದೆ.ಕೊಡಗಿನಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾಗಿದೆ. ಮಹಿಳಾ ಕ್ಲಬ್  ವತಿಯಿಂದ ಚೆಟ್ಟಳ್ಳಿಯಲ್ಲಿ ಮಹಿಳಾ ಕ್ರಿಕೆಟ್‌ ಆಯೋಜಿಸಿರುವುದು ಪ್ರಶಂಸನೀಯ ಎಂದರು.

ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರಿಕೇಟ್ ಆಡುವ ಮೂಲಕ ಕ್ಯಾಪ್ಟನ್ ಮಲ್ಚಿರ ಎ.ಅಯ್ಯಪ್ಪ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ನೀಡಿದರು. ೧೬ನೊಂದಾಯಿತ ಮಹಿಳಾ ತಂಡಗಳು ಪ್ರತೀಕ್ರೀಡೆಯಲ್ಲಿ ೩ಓವರ್‌ನಂತೆ ಆಡಿದರೆ ಅಂತಿಮನಾಗಿ ೪ ಓರ‍ ಆಡಿದರು. ಅಂತಿಮವಾಗಿ ಆದರ್ಶ್ಯೂತ್‌ಕ್ಲಬ್ ಕಟ್ಟೆಮಾಡು ೪೨ರನ್ನುಗ¼ನ್ನು ಪಡೆಯುವ ಮೂಲಕ ಅವರ್‌ಕ್ಲಬ್‌ಚೆಟ್ಟಳ್ಳಿಯನ್ನು ಮಣಿಸಿದರು.

ಸಂಭ್ರಮಾಕ್ಲಬ್ ಟಿಶೆಟ್ಟಿಗೇರಿ ತಂಡ ಮೂರನೇಸ್ಥಾನವನ್ನು ತಮ್ಮದಾಗಿಸಿ ಕೊಂಡಿತು.ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕರಾದ ಮುಳ್ಳಂಡ ರತ್ತುಚಂಗಪ್ಪ ಕ್ರೀಡಾ ತಂಡಗಳನ್ನುದ್ದೇಶಿಸಿ ಮಾತನಾಡಿ ಚೆಟ್ಟಳ್ಳಿಯಲ್ಲಿ ಪ್ರಪಥಮ ಮಹಿಳಾಕ್ರೀಡೆಯನ್ನು ಆಯೋಜಿಸಿರುರುವು ಹೆಮ್ಮೆ ಎನಿಸಿದೆ. ವಿಜೇತತಂಡಕ್ಕೆ ಶುಭಹಾರೈಸಿದರು.

ಪ್ರಥಮಸ್ಥಾನಪಡೆದ ಆದರ್ಶ್ಯೂತ್ ಕಟ್ಟೆಮಾಡುತವರಿಗೆ ಟ್ರೋಫಿ ಹಾಗು ೧೧ಸಾವಿರ ನಗದುಬಹುಮಾನ ದ್ವಿತೀಯಸ್ಥಾನ ಪಡೆದ ಅವರ್‌ಕ್ಲಬ್‌ಚೆಟ್ಟಳ್ಳಿಯವರಿಗೆ ಟ್ರೋಫಿ ಹಾಗು ೬ಸಾವಿರ ನಗದು ಹಾಗು ತ್ರತೀಯಸ್ಥಾನಪಡೆದ ಸಂಭ್ರಮಾ ಕ್ಲಬ್ ಟಿಶೆಟ್ಟಿಗೇರಿ ತಂಡಕ್ಕೆ ಟ್ರೋಫಿ ಹಾಗು ೩ಸಾವಿರ ನಗದುಬಹುಮಾನ ನೀಡಲಾಯಿತು. ಆಲ್‌ರೌಂಡರಾಗಿ ಮಿಂಚಿದ ಮನೆಮಂಡ ಅಂಜಲಿಸೋಮಯ್ಯ, ಅತ್ಯುತ್ತಮ ಆಟಗಾರರಾದ ಮುಳ್ಳಂಡ ವಿಂದ್ಯಾರಜನ್, ಜ್ಯೋತಿ,ಅಶ್ವಿನಿ,ವಿನೂತ,ಕೆಚೆಟ್ಟಿರ ರತಿ ಕಾರ್ಯಪ್ಪ, ಸಜಾಪೂವಯ್ಯ ಹಾಗು ಹಲವರಿಗೆ ಬಹುಮಾನ ನೀಡಲಾಯಿತು. ಮಡಿಕೇರಿಯ ಪೊಮ್ಮಕ್ಕಡ ಕೂಟಕ್ಕೆ ಅತ್ಯುತ್ತಮ್ಮಚೀಯ್ಸ್ತಂಡ ಬಹುಮಾನವನ್ನು ನೀಡ ಲಾಯಿತು.

ಅವರ್‌ ಕ್ಲಬ್‌ನ ಅಧ್ಯಕ್ಷರಾದ ಐಚೆಟ್ಟಿರ ಸುಮಿತಾ ಮಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಮಹಿಳೆಯರು ಸೇರಿ ಚೆಟ್ಟಳ್ಳಿ ಅವರ್‌ಕಬ್ಲ್  ಪ್ರಾರಂಭಿಸಿದ್ದೇವೆಂದರು. ಉಪಾಧ್ಯಕ್ಷರಾದ ಮುಳ್ಳಂಡಶೋಭಾ ಚಂಗಪ್ಪ ಮಾತನಾಡಿ ಚೆಟ್ಟಳ್ಳಿ ಅವರ್ ಕಬ್ಲ್ ಪ್ರಾರಂಭಿಸುವ ಮೂಲಕ ಹಲವು ಕಾರ್ಯಕ್ರಮದ ಜೊತೆ ಪ್ರತೀ ವರ್ಷ ಹಲವು ಕ್ರೀಡೆಯನ್ನು ಆಯೋಜಿಸಿದ್ದು ಈ ವರ್ಷ ಸುನಿಮ ಮಾಚಯ್ಯನವರ ಸಲಹೆ ಮೇರೆ ಮಹಿಳಾ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸುತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಮೊದಲಬಾರಿ ಮಹಿಳಾ ಕ್ರಿಕೇಟ್‌ ಕ್ರೀಡೆಯನ್ನು ಆಯೋಜಿಸಿದ್ದೇವೆಂದರು.

ಮಾಜಿ ಅಧ್ಯಕ್ಷರಾದ ಕೊಂಗೇಟಿರ ದೇಚುಮುದ್ದಯ್ಯ, ಕಾರ್ಯದರ್ಶಿ ಅಂಜಲಿಸೋಮಯ್ಯ, ಖಜಾಂಜಿ ಮುಳ್ಳಂಡ ಸುಶೀಲಾ ತಮ್ಮಯ್ಯ ವೇದಿಕೆಯಲ್ಲಿದ್ದರು. ಕ್ಲಬ್‌ನ ಪದಾಧಿಕಾರಿಗಳು ಹಾಗು ಸದಸ್ಯರು ಕ್ರೀಡಾ ಆಯೋಜನೆಯಲ್ಲಿ ಶ್ರಮಿಸಿದರು.

See also  ಮಡಿಕೇರಿ| ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ : ಜು.11 ರಂದು ಮಡಿಕೇರಿಯಲ್ಲಿ ಪ್ರತಿಭಟನೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು