ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್ ಕಳೆದ ಒಂದು ವರ್ಷದಲ್ಲಿ ಜನೋಪಯೋಗಿ ಕಾರ್ಯ ಯೋಜನೆಗಳ ಮೂಲಕ ಜನಸ್ನೇಹಿಯಾಗಿದೆ ಎಂದು ರೋಟರಿ ವುಡ್ಸ್ನ 3181 ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.
ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾಗಿ 2022ರ ಮೇ 15 ರಂದು ಉದಯಿಸಿದ ರೋಟರಿ ಮಡಿಕೇರಿ ವುಡ್ಸ್ 35 ಸದಸ್ಯರ ತಂಡಗಳನ್ನೊಳಗೊಂಡು ಸಾಕಷ್ಟು ಜನೋಪಯೋಗಿ ಕಾರ್ಯ ಯೋಜನೆಗಳ ಮೂಲಕ ಜನಸ್ನೇಹಿಯಾಗಿದ್ದು, ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಸೇರಿದಂತೆ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷರಾದ ಸಪಂತ್ ಕುಮಾರ್, ಕಾರ್ಯದರ್ಶಿಯಾದ ವಸಂತ ಕುಮಾರ್, ವಲಯ 6ರ ಸಹಾಯಕ ಗವರ್ನಲ್ ರತನ್ ತಮ್ಮಯ್ಯ ಉಪಸ್ಥಿತರಿದ್ದರು.