ಕೊಡಗು: ಬಾಳೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನವರಿ 22 ರಂದು ಮರಣ ಹೊಂದಿದ ಚೆಟ್ಟಿಮಾಡ ಕಿಟ್ಟು ಚಂಗಪ್ಪ ಸುಳುಗೋಡು ಗ್ರಾಮ, ಬಾಳೆಲೆ ಇವರು ತಮ್ಮ ಅಮೂಲ್ಯ ನೇತ್ರಾಗಳನ್ನು ದಾನ ಮಾಡುವುದರ ಮೂಲಕ ಇಬ್ಬರಿಗೆ ಬೆಳಕಾಗಿದ್ದಾರೆ.
ಇವರ ನೇತ್ರಗಳನ್ನು ಜನವರಿ 23 ರ ಮುಂಜಾನೆ ಸುಮಾರು 01.30ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿಯ ನೇತ್ರ ವೈದ್ಯರಾದ ಡಾ. ವಿಕ್ರಮ್, ಡಾ. ಸಂಜಯ್ ಹಾಗೂ ವೆಂಕಟೇಶ್ ತುರ್ತುವಾಹನ ಚಾಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ನೇತ್ರಗಳನ್ನು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಾಳೆಲೆ ವ್ಯೆದ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.