ಮಡಿಕೇರಿ: ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಚುನಾವಣೆ ಕೇವಲ ಘೋಷಣೆ, ಭರವಸೆಯಲ್ಲಿ ನಡೆಯಬಾರದು. ಬಿಜೆಪಿ ನಡೆಸಿದ ಉತ್ತಮ ಆಡಳಿತದವನ್ನು ರಾಜ್ಯದ ಜನರ ಮುಂದಿಡಬೇಕೆಂಬ ನಿಟ್ಟಿನಲ್ಲಿ ಈ ವಿಜಯ ಯಾತ್ರೆಯನ್ನು ಆಯೋಜಿಸಲಾಗಿದೆ. ಸರ್ಕಾರದ ಸಾಧನೆಯೊಂದಿಗೆ ಮತಯಾಚನೆಗಾಗಿ ಈ ರಥಯಾತ್ರೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ರಾಜ್ಯದಲ್ಲಿ ಅದ್ಭುತ ಜನ ಬಿಜೆಪಿಗೆ ಬೆಂಬಲ ಸಿಗುತ್ತಿದೆ. ಈ ರೀತಿಯ ಬೆಂಬಲ ಬಿಜೆಪಿಗೆ ದೊರಕುತ್ತಿರುವುದು ವಿಶೇಷವಾಗಿದೆ. ಜನಪರ ಕೆಲಸ ಮಾಡಿದರೆ ಜನ ಬೆಂಬಲ ದೊರಕುತ್ತದೆ ಎಂದರು.
ಕರ್ನಾಟಕದಲ್ಲಿ ಪೂರ್ಣ ಬಹುಮತ ಪಡೆದು ಎಂದಿಗೂ ಬಿಜೆಪಿ ಆಡಳಿತ ಮಾಡಿಲ್ಲ. ಈ ಬಾರಿ ರಾಜ್ಯದ ಜನರು ಬಿಜೆಪಿಗೇ ಪೂರ್ಣ ಬಹುಮತ ನೀಡಬೇಕೆಂದು ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಿಂದಾಗಿ ದೊಡ್ಡ ಮಟ್ಟದ ಸಂಘಟನೆ ರಾಜ್ಯದಲ್ಲಿ ಆಗಿದೆ. ದಲಿತರಿಗೆ, ಹಿಂದುಳಿತದವರಿಗೆ ನಾವು ಮಾಡಿದ ಕೆಲಸ ಪ್ರಶಂಸನೀಯವಾಗಿದೆ. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ಎಲ್ಲ ಸಮಾಜಕ್ಕೆ ಸೂಕ್ತ ಅನುದಾನ ನೀಡಿದ್ದಾರೆ.
ಬೆಂಗಳೂರು – ಮೈಸೂರು ಹೆದ್ದಾರಿ ಯೋಜನೆ ತನ್ನದೆಂದು ದೇವೇಗೌಡ ಹೇಳುತ್ತಿದ್ದಾರೆ. ಯಾರಿಗೋ ಹುಟ್ಟಿದ ಮಕ್ಕಳು ನಂದು ಎನ್ನುತ್ತಾರೆ ಎಂದರೆ ಏನು ನ್ಯಾಯ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಂಥ ವ್ಯಕ್ತಿಗಳು ರಾಜ್ಯದ ಇತಿಹಾಸದಲ್ಲಿ ದುಷ್ಟರಂತೆ ಕಂಡು ಬರುತ್ತಾರೆ. ಮೊದಲು ಕುಂಕುಮ ಹಾಕುತ್ತಿರಲಿಲ್ಲ. ಈಗ ಕುಂಕುಮ ಇಲ್ಲದೆ ಹೊರ ಬರುವುದಿಲ್ಲ. ನಾವು ಮುಸ್ಲಿಂರ ಪರ, ನಾವು ಗೋವು ತಿನ್ನುತ್ತೇವೆ ಎಂದು ಹೇಳಲಿ, ಅಥವಾ ನಾವು ಮುಸ್ಲಿಂ ವಿರೋಧಿ, ಗೋವು ತಿನ್ನುವುದಿಲ್ಲ ಎಂದು ನೇರವಾಗಿ ಹೇಳಿ. ನಾಮಿನೇಷನ್ ಮಾಡುವಾಗ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿಯವರೆಗೂ ದೇವಾಲಯ ಬಗ್ಗೆ ಹಿಂದೂಗಳ ಬಗ್ಗೆ ಚಿಂತೆಯೇ ಇಲ್ಲದ ಕಾಂಗ್ರೆಸ್ ನವರು ಹಿಂದೂ ವಿರೋಧಿಗಳು ಎಂದು ಈಶ್ವರಪ್ಪ ಟೀಕೆ ಮಾಡಿದರು.
ಗೋಷ್ಠಿಯಲ್ಲಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಮಾಜಿ ಎಂಎಲ್ ಸಿ ಸುನೀಲ್ ಸುಬ್ರಹ್ಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಬಿ.ಬಿ.ಭಾರತೀಶ್, ರವಿಕುಶಾಲಪ್ಪ, ಸೇರಿದಂತೆ ಬಿಜೆಪಿ ಪ್ರಮುಖರ ಹಾಜರಿದ್ದರು.
ಶೋಕ ಸಂದೇಶ
ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ. ಶತ್ರುಗಳೂ ಅಲ್ಲ. ಕಾಂಗ್ರೆಸ್ ಕಾಯಾ೯ಧ್ಯಕ್ಷ ದೃವನಾರಾಯಣ್ ವಿಧಿವಶರಾದ ವಿಚಾರ ಮನಸ್ಸಿಗೆ ನೋವಾಗುತ್ತಿದೆ. ಸರಳ ಸಜ್ಜನಿಕೆಯ ನೇತಾರ ರಾಜ್ಯ ಬಿಜೆಪಿ ಘಟಕ ಧ್ರುವನಾರಾಯಣ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ.- ಡಿ.ವಿ. ಸದಾನಂದ ಗೌಡ ಶೋಕಸಂದೇಶ