News Kannada
Sunday, November 27 2022

ಮಂಡ್ಯ

ರೈತರ ಕುಂದುಕೊರತೆ ನಿವಾರಣೆಗೆ ಅಗತ್ಯ ಕ್ರಮ:  ಜಿಲ್ಲಾಧಿಕಾರಿ ಎಸ್.ಅಶ್ವತಿ - 1 min read

Photo Credit :

ಮಂಡ್ಯ: ರೈತರು ಆರ್ಥಿಕವಾಗಿ ಸದೃಢವಾಗಬೇಕಾದರೆ ಜಿಲ್ಲಾಡಳಿತದಿಂದ ಸಿಗುವ ಎಲ್ಲಾ ಸೌಲಭ್ಯಗಳು ನಿಗದಿತವಾಗಿ  ತಲುಪಬೇಕು. ರೈತರ ಕುಂದುಕೊರತೆ ನಿವಾರಣೆಗೆ  ಅಗತ್ಯ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ರವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರೈತರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಣ್ಣು ಆರೋಗ್ಯ ಅಭಿಯಾನದಡಿ ಜಿಲ್ಲೆಯಲ್ಲಿ  ಗ್ರಾಮಗಳನ್ನು ಆಯ್ಕೆ ಮಾಡಿ ಮಣ್ಣಿನ ಸ್ಯಾಂಪಲ್ ತೆಗೆದು, ತರಬೇತಿ ಹಾಗೂ  ಪ್ರಾತ್ಯಕ್ಷಿಕೆ ಆಯೋಜಿಸಿ ರೈತರಿಗೆ ಅರಿವು ಮೂಡಿಸಬೇಕು ಎಂದರು.

ಮಂಡ್ಯದಲ್ಲಿ ಕೃಷಿಗೆ ಬಳಸಲಾಗುವ ಎಲ್ಲಾ ರಸ ಗೊಬ್ಬರಗಳನ್ನು ಕೃಷಿ ಇಲಾಖೆಯ ಪ್ರಯೋಗಾಲಯಗಳಲ್ಲಿ ಗುಣಮಟ್ಟ  ಪರೀಕ್ಷಿಸಲ್ಪಟ್ಟು ನಂತರ ಮಾರುಕಟ್ಟೆಗೆ ಬರುತ್ತದೆ ಆದ್ದರಿಂದ ರೈತರು ಪ್ರತ್ಯೇಕ ಗೊಬ್ಬರದ ಬ್ರಾಂಡ್‌ಗಳ ಮೇಲೆ ಅವಲಂಭಿತವಾಗದೆ ಗೊಬ್ಬರಗಳನ್ನು ಉಪಯೋಗಿಸಬಹುದು. ರೈತರಿಗೆ ಬರುವ ಇತರೆ ಸರ್ಕಾರದ ಅನುದಾನವನ್ನು ಸಾಲದ ಹೆಸರಿನಲ್ಲಿ ಕಡಿತಗೊಳಿಸದೆ ರೈತರಿಗೆ ಸೌಲಭ್ಯವನ್ನು ಒದಗಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದರಲ್ಲದೆ, ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಗೆ ಸಂಭಂದಿಸಿದಂತೆ ರೈತರ ಬೇಡಿಕೆಗಳನ್ನು  ಕುರಿತು ಚರ್ಚಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಅಗತ್ಯ ಕ್ರಮವಹಿಸುವಂತೆ ಹೇಳಿದರು.

ಫಲಾನುಭವಿಗಳನ್ನು ಗುರುತಿಸಿ ಯಂತ್ರೋಪಕರಣಗಳನ್ನು ಅವರಿಗೆ ವಿತರಿಸುವ ಸಂದರ್ಭದಲ್ಲಿ ಅದನ್ನು ಬಳಸುವ ವಿಧಾನದ ಬಗ್ಗೆ  ಸಂಪೂರ್ಣ ಮಾಹಿತಿಯನ್ನು  ನೀಡಬೇಕು. ರೈತರ ಜಮೀನುಗಳ ದುರಸ್ತಿ, ಕೋಡಿ, ಸಾಗುವಳಿ ಚೀಟಿ ವಿತರಣೆ ಮಾಡುವ  ಸಂದರ್ಭದಲ್ಲಿ  ಅವ್ಯವಹಾರ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಊಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ನಷ್ಟವಾಗಿದೆ ಮತ್ತು ಬಾಕಿ ಉಳಿದಿರುವ ಸರ್ವೇ ಪ್ರಕ್ರಿಯೆ ಶೀಘ್ರದಲ್ಲಿ ಸರ್ವೇ ಮಾಡಿ ಅದಕ್ಕೆ ಪರಿಹಾರ ಒದಗಿಸಬೇಕು, ಹಾಲು ಸರಬರಾಜು ನಿರಂತವಾಗಿ  ನಡೆಯಬೇಕು ಹಾಲು ಪರೀಕ್ಷೆಯಲ್ಲಿ ಯಾವುದೇ ಲೋಪದೋ?ಕ್ಕೆ ಆಹ್ವಾನ ನೀಡದೆ ಲೋಪವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ಬಹಳ ಮುಖ್ಯವಾದ ಕೃಷಿ, ಬ್ಯಾಂಕ್, ವಿದ್ಯುತ್, ತೋಟಗಾರಿಕೆ, ಕಂದಾಯ ಲೆಕ್ಕೆದಲ್ಲಿ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು.  ಗುಣಮಟ್ಟದ ಬಿತ್ತನೆ ಬೀಜ, ಲೋಪವಿಲ್ಲದ ಶುದ್ಧ ರಸಗೊಬ್ಬರ, ವಿಳಂಬ ವಿಲ್ಲದೆ ಬ್ಯಾಂಕ್‌ಗಳು ಸಾಲ ಸೌಲಭ್ಯ ಹಾಗೂ ರೈತರಿಗೆ ಯಾವುದೇ ವಿಳಂಬವಾಗದೆ ಸಮರ್ಪಕ ವಿದ್ಯುತ್ ನೀಡುವಂತೆ, ರೈತ ಬೆಳೆಯುವ ರಾಗಿ ಮತ್ತು ಭತ್ತ ಖರೀದಿಗೆ ನೊಂದಣಿ ಸರಿಯಾದ ಸಮಯಕ್ಕೆ ಪ್ರಕ್ರಿಯೆ ಪ್ರಾರಂಭಿಸಿ ರೈತರಿಗೆ ಅನುಕೂಲವಾಗುವ ಆಗೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ರೈತರಿಗೆ ಸರ್ಕಾರ ನೀಡುವಂತಹ ಬಿತ್ತನೆ ಬೀಜಗಳು, ರಸಗೊಬ್ಬರ, ಸಾಲ ಸೌಲಭ್ಯ,  ಸರ್ಕಾರದಿಂದ ಬರುವಂತಹ ಅನುದಾನ  ಸೂಕ್ತವಾಗಿ ಪಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಬ್ಯಾಂಕ್ ನಲ್ಲಿ ರೈತರಿಗೆ ಇರುವ ಕುಂದು ಕೊರತೆಯ ಮಾಹಿತಿ ಪಡೆದು ನಿಯಮಾನುಸಾರವಾಗಿ  ಪರಿಹರಿಸಿ, ಹಾಫ್ ಕಾಮ್ಸ್ ನಲ್ಲಿ ನಿಗಧಿತ ದರವನ್ನು ಫಲಕದಲ್ಲಿ ದಾಖಲಿಸಿ ಲೋಪವಿಲ್ಲದೆ ಅನುಕೂಲವಾಗುವಂತೆ  ಮಾರಾಟಮಾಡಬೇಕು ಎಂದರು.

See also  ನಂಜನಗೂಡು ಬಳಿ ಭತ್ತದ ಕಣಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ,  ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎಸ್. ಅಶೋಕ್, ಜಿ.ಪಂ ಉಪಕಾರ್ಯದರ್ಶಿ ಧನರಾಜ್, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಜಿ.ಸೌಮ್ಯ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶರಾದ  ಮಂಜುನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ದೀಪಕ್,  ರೈತ ಮುಖಂಡೆ ಸುನಂದಾ ಜಯರಾಂ, ರೈತ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು