ಮಂಡ್ಯ: ಕಬ್ಬಿನ ಬೆಲೆ ಏರಿಕೆ ಮತ್ತು ಹಾಲಿನ ಬೆಲೆ ಏರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ನಗರ ಬಂದ್ ಆಚರಿಸಲಾಯಿತು.
ರೈತ ಸಂಘ ಕರೆ ನೀಡಿದ್ದ ಮಂಡ್ಯ ನಗರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಮುಖ ವಾಣಿಜ್ಯ ಪ್ರದೇಶಗಳ ವ್ಯಾಪಾರಿಗಳು ಬಂದ್ ಗೆ ಬೆಂಬಲ ಸೂಚಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ವಿ.ರಸ್ತೆ, ಗುತ್ತಲ ರಸ್ತೆ, ಆರ್.ಪಿ.ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ (ನೂರಡಿ ರಸ್ತೆ), ಬನ್ನೂರು ರಸ್ತೆ, ಹೊಸಳ್ಳಿ ರಸ್ತೆ, ವಿನೋಬಾ ರಸ್ತೆ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿಯ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಪ್ರತಿಭಟನಾಕಾರರು ಬೆಳಿಗ್ಗೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಬಾಗಿಲುಗಳನ್ನು ಮುಚ್ಚಿದರು ಮತ್ತು ಹೋಟೆಲ್ ವ್ಯವಹಾರಕ್ಕೂ ಅಡ್ಡಿಪಡಿಸಿದರು.