ಮೈಸೂರು,ಆ. ;ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಜಿ ಅವರು ಇಂದು ನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ಅವರ ಮನವಿ ಮೇರೆಗೆ ವಾರ್ಡ್ ನಂ 55 ಕ್ಕೆ ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿ, ವೀಕ್ಷಣೆ ನಡೆಸಿದರು.
ಬಸವೇಶ್ವರ ರಸ್ತೆಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗದ ಕೆಲಸವನ್ನು ವೀಕ್ಷಿಸಿ, ಕಂಸಾಳೆ ಮಹಾದೇವಯ್ಯ ವೃತ್ತದಲ್ಲಿ ಒಳಚರಂಡಿಯ ಕುರಿತು ಹಾಗೂ ಸೇಂಟ್ ಮೇರಿಸ್ ಹಿಂಭಾಗದ ರಸ್ತೆಯಲ್ಲಿ ಕಸ ಹಾಕುತ್ತಿರುವುದಲ್ಲದೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಶಾಲೆಯ ಮಕ್ಕಳಿಗೆ ಹಾಗೂ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮ.ವಿ.ರಾಂ ಪ್ರಸಾದ್ ಗಮನ ಸೆಳೆದರು. ನಾಲ್ಕನೇ ಮುಖ್ಯರಸ್ತೆ ದೊಡ್ಡ ಮೋರಿ ಹತ್ತಿರ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಚರಂಡಿ ಕಾಮಗಾರಿಗಳು ಪೂರ್ಣಗೊಳ್ಳದಿರುವ ಬಗ್ಗೆ ಹಾಗೂ ಅದರ ಲೋಪಗಳ ಬಗ್ಗೆ ಮಳೆ ನೀರು ಚರಂಡಿಯಲ್ಲಿ ಯುಜಿಡಿ ನೀರು ಹರಿಯುತ್ತಿರುವ ಬಗ್ಗೆ ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಅವರು ಆಯುಕ್ತರ ಗಮನಕ್ಕೆ ತಂದರು. ಆಯುಕ್ತರು ಮಾತನಾಡಿ ಕೊಡಲೇ ಸಮಸ್ಯೆ ಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ವಾರ್ಡ್ ನಂ 55 ಕ್ಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಭೇಟಿ : ಸಮಸ್ಯೆ ಆಲಿಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.