ಮೈಸೂರು, : ಮೈಸೂರಿನಲ್ಲಿ ನಾಗರಿಕರ ಸಹ ಭಾಗಿತ್ವ ದೊಂದಿಗೆ ಮಹಿಳಾ ಸುರಕ್ಷತೆ ಗೆ ಅಗತ್ಯ ಕ್ರಮ ಕೈಗೊಳ್ಳ ಲು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಘಟಕ ಮುಂದಾಗಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಎಎಪಿ ಮೈಸೂರು ಘಟಕ ದ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ಸಾಂಸ್ಕೃತಿಕ ನಗರಿ ಯಲ್ಲಿ ಮಹಿಳೆಯರ ಮೇಲೆ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದು ಆಮ್ ಆದ್ಮಿ ಪಾರ್ಟಿಯನ್ನು ಆತಂಕಗೊಳಿಸಿದೆ. ಮಹಿಳಾ ಸುರಕ್ಷತೆಯು ಆಮ್ ಆದ್ಮಿ ಪಾರ್ಟಿಯ ಆದ್ಯತೆಯ ವಿಚಾರಗಳಲ್ಲಿ ಒಂದಾಗಿದ್ದು, ದೆಹಲಿಯ ಕೇಜ್ರಿವಾಲ್ ಸರ್ಕಾರ ಕೂಡ ವ್ಯಾಪಕವಾಗಿ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪಕ್ಷದ ಮೈಸೂರು ಘಟಕವು ಜನರ ಸಹಭಾಗಿತ್ವದೊಂದಿಗೆ ತನ್ನಿಂದ ಸಾಧ್ಯವಾಗುವ ಎಲ್ಲ ಕೆಲಸಗಳನ್ನು ಮಾಡಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳಗಳನ್ನು ಗುರುತಿಸಿ ಅದನ್ನು ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತರಬೇಕೆಂದು ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಅದು ಬೀದಿದೀಪ, ಪೊಲೀಸ್ ಗಸ್ತು ಮುಂತಾದವುಗಳ ಕೊರತೆಯಿರುವ ಸ್ಥಳವಾಗಿರಬಹುದು. ಅಥವಾ ಮಹಿಳೆಯರಿಗೆ ಅಹಿತಕರ ಎನಿಸುವಂತೆ ಜನರು ಗುಂಪುಗೂಡಿರುವ ಸ್ಥಳವಾಗಿರಬಹುದು. ಇಲ್ಲವೇ, ಬಸ್, ಆಟೋ, ಕ್ಯಾಬ್ ಸೌಲಭ್ಯವಿಲ್ಲದೇ ಮಹಿಳೆಯು ನಡೆದುಕೊಂಡೇ ಹೋಗಬೇಕಾದ ಸ್ಥಳವಾಗಿರಬಹುದು.
ಸಂಬಂಧಪಟ್ಟ ಪ್ರಾಧಿಕಾರಗಳನ್ನು ಸಂಪರ್ಕಿಸಲು ಕಷ್ಟವಾದರೆ ಅಥವಾ ಅವುಗಳಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ, ಜನರು ಆಮ್ ಆದ್ಮಿ ಪಾರ್ಟಿಯ ಮೈಸೂರು ಘಟಕವನ್ನು ಸಂಪರ್ಕಿಸಬಹುದು ಎಂದಿದ್ದಾರೆ. 8884431221 ಸಂಖ್ಯೆಗೆ ವಾಟ್ಸಪ್ ಮೆಸೇಜ್ ಕಳುಹಿಸಿದರೆ ಅಥವಾ [email protected] ಇಮೇಲ್ ಕಳುಹಿಸಿದರೆ ನೆರವು ನೀಡಲು ನಾವು ಸಿದ್ಧವಿದ್ದೇವೆ. ಮಹಿಳಾ ಸುರಕ್ಷತೆಗಾಗಿ ನಾಗರಿಕರು ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸುತ್ತಾರೆ ಹಾಗೂ ನಮ್ಮ ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬ ದೃಢ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.