NewsKarnataka
Wednesday, November 24 2021

ಮೈಸೂರು

ಯುವಕನಿಂದ ವಂಚನೆಗೊಳಗಾಗಿ ಯುವತಿ ಆತ್ಮಹತ್ಯೆ ಪ್ರಕರಣ: 8 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ಮೈಸೂರು: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಬಳಿಕ ವಂಚಿಸಿದ ಹಿನ್ನಲೆಯಲ್ಲಿ ಮನನೊಂದ ಯುವತಿಯೊಬ್ಬಳು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಭoಧಿಸಿದoತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಠಾಣೆ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಕರಣದಲ್ಲಿ ಎಸ್ಐ ಎಂ.ಶಿವರಾಜು 8 ನೇ ಆರೋಪಿಯಾಗಿದ್ದು, ಅವರು ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೇ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ನಂಜನಗೂಡು ತಾಲೂಕು ಚೆನ್ನಪಟ್ಟಣ ಗ್ರಾಮದ ಶೋಭಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನ ಪ್ರೀತಿಸಿದ್ದಳು.ಶೋಭಾಳನ್ನ ವಿವಾಹವಾಗುವುದಾಗಿ ನಂಬಿಸಿದ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಇವರಿಬ್ಬರ ಮಧ್ಯೆ ಸುರೇಶ್ ಎಂಟ್ರಿ ಕೊಟ್ಟಿದ್ದ.ಈ ಪರಿಣಾಮ ಶೋಭಾಳಿಗೆ ಲೋಕೇಶ್ ಕೈಕೊಟ್ಟು ವಂಚಿಸಿದ್ದಾನೆ. ತನಗಾದ ವಂಚನೆ ಬಗ್ಗೆ ಶೋಭಾ ದೂರು ನೀಡಲು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ.ಈ ವೇಳೆ ಶೋಭಾಳ ದೂರಿಗೆ ಸ್ಪಂದಿಸದ ಎಸ್ ಐ ಶಿವರಾಜು ನಿರ್ಲಕ್ಷಿಸಿದ್ದಾರೆ.

ನಂತರ ಲೋಕೇಶ್ ಹಾಗೂ ಇತರರು ಶೋಭಾ ಮನೆಗೆ ಬಂದು ಗಲಾಟೆ ಮಾಡಿದ್ದಾರೆ.ಡೀಲ್ ಮಾಡಿ ಕೇಸ್ ಮುಗಿಸಿರುವುದಾಗಿ ಕುಡಿದ ಮತ್ತಿನಲ್ಲಿ ಹೇಳಿದ್ದಾರೆ.ನಮ್ಮನ್ನ ಏನೂ ಮಾಡಲು ಸಾಧ್ಯವಿಲ್ಲವೆಂದು ಧಮ್ಕಿ ಹಾಕಿದ್ದಾರೆ.ಇಷ್ಟೆಲ್ಲಾ ಬೆಳವಣಿಗೆಯಿಂದ ನೊಂದ ಶೋಭಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶೋಭಾ ಅಂತ್ಯೆಕ್ರಿಯೆ ನೆರವೇರಿಸಿದ 11 ದಿನಗಳ ನಂತರ ಆಕೆ ಇದ್ದ ಕೊಠಡಿ ಸ್ವಚ್ಛಮಾಡುವಾಗ ಶೋಭಾ ಬರೆದಿದ್ದ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ತನಗಾದ ಅನ್ಯಾಯವನ್ನ ನಿವೇದಿಸಿಕೊಂಡಿದ್ದಾಳೆ. ಲೋಕೇಶ್ ಅತ್ಯಾಚಾರ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ. ಆತನಿಗೆ ಜೈಲು ಶಿಕ್ಷೆ ಆಗಬೇಕು ನೇಣಿಗೆ ಏರಿಸಬೇಕೆಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾಳೆ. ಡೆತ್ ನೋಟ್ ದೊರೆತ ನಂತರ ಶೋಭಾಳ ತಾತ ಚಿಕ್ಕಚೆನ್ನಯ್ಯ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ದವೂ ಸಹ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಠಾಣೆಗೆ ಭೇಟಿ ನೀಡಿದ್ದ ಎಸ್ಪಿ ಚೇತನ್ ಮಾಹಿತಿ ಪಡೆದು ವರದಿ ನೀಡುವಂತೆ ಸೂಚನೆ ನೀಡಿದ್ದರು.ಅಕ್ಟೋಬರ್ 16 ರಂದು ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಎಸ್ ಐ ಶಿವರಾಜ್ ಸಹ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಯುವತಿ ನ್ಯಾಯ ಕೇಳಿ ಬಂದಾಗ ಸೂಕ್ತವಾಗಿ ಸ್ಪಂದಿಸಿದ ಎಸ್ ಐ ಶಿವರಾಜು ನಿರ್ಲಕ್ಷ÷್ಯ ವಹಿಸಿದ್ದಾರೆಂದು ಹಾಗೂ ಆರೋಪಿಗಳು ನೀಡಿದ ಆಮಿಷಕ್ಕೆ ಬಲಿಯಾಗಿ ಯುವತಿ ನೀಡಿದ ದೂರು ದಾಖಲಿಸಿಲ್ಲವೆಂದು ಎಸ್ ಐ ಶಿ ವರಾಜು ಮೇಲೆ ಆರೋಪ ಹೊರೆಸಲಾಗಿದೆ.

ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಈIಖ ದಾಖಲಾಗಿದೆ.ಪ್ರಕರಣದಲ್ಲಿ ಸುರೇಶ, ಗುರುಮಲ್ಲು, ಲೋಕೇಶ್, ಜಡೆಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಎಂಬುವರ ಮೇಲೂ ಎಫ್.ಐ.ಆರ್ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!