News Kannada
Tuesday, January 31 2023

ಮೈಸೂರು

ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ: ಒಬ್ಬನ ಬಂಧನ

Photo Credit :

ಮೈಸೂರು: ನಂದಿನಿ ಬ್ರ್ಯಾಂಡ್ ನ ನಕಲಿ ಲೇಬಲ್ ಬಳಸಿ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದ ಘಟಕವೊಂದು ಅರಮನೆ ನಗರಿ ಮೈಸೂರಿನಲ್ಲಿ ಪತ್ತೆಯಾಗಿದೆ.

ಖಚಿತ ಮಾಹಿತಿ ಮೇಲೆ ಮೈಸೂರಿನ ಹೊರವಲಯದಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದ ಗೋಡೌನ್ ಮೇಲೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದೆ. ಈ ವೇಳೆ ಕೆಲವು ಅಸಲಿ ನಂದಿನಿ ತುಪ್ಪವನ್ನೂ ಇಟ್ಟುಕೊಂಡು, ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ಮಿಕ್ಸ್ ಮಾಡಿ, ಅದಕ್ಕೆ ಟನಲ್‌ನಲ್ಲಿ ತುಂಬಿಸಿ, ಪ್ಯಾಕಿಂಗ್ ಮಿಶನ್ ನಲ್ಲಿ ಒಂದಾದ ನಂತರ ಒಂದು ಟಿನ್ ಗಟ್ಟಲೆ ತುಂಬಿರುವುದು ಕಂಡು ಬಂತು.

ಈ ವೇಳೆ ಮಾತನಾಡಿದ ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್, ಇಂದು ಬೆಳಗಿನ ಜಾವ ನಮಗೆ ಒಂದು ದೂರವಾಣಿ ಕರೆ ಬಂತು. ಹೊಸಹುಂಡಿಯಲ್ಲಿ ನಂದಿನಿ ತುಪ್ಪವನ್ನು ನಕಲಿಯಾಗಿ ತಯಾರಿಸಿ, ಟನ್ ಗಟ್ಟಲೆ ಲೋಡ್ ಮಾಡಿ ಮೈಸೂರು ನಗರದಾದ್ಯಂತ ವಿತರಣೆ ಮಾಡುತ್ತಿದ್ದಾರೆ ಎಂದು ಸುದ್ದಿ ಬಂತು. ಏನು ಅಂತ ನೋಡೋದಕ್ಕೆ ಓಡೋಡಿ ಬಂದೆವು. ಕೆಲವರು ಲಾಕ್ ಮಾಡಿ, ಒಳಗಡೆ ಕೆಲಸ ಮಾಡುತ್ತಿದ್ದರು. ನಾವೇ ಸೀಜ್ ಮಾಡಿದ್ದೇವೆ. ಒಳಗಡೆ ಬಂದು ನೋಡಿದಾಗ ನಮಗೆ ಗೊತ್ತಾಯಿತು.

ಈ ತರ ಎಲ್ಲೆಲ್ಲಿ ವಿತರಣೆ ಮಾಡಿದ್ದಾರೋ, ಏನಾಗಿದೆಯೋ, ಈಗ ವಿಚಾರ ಮಾಡಿದಾಗ ಕಳೆದ ನಾಲ್ಕು ತಿಂಗಳಿನಿಂದ ಹೊಸಹುಂಡಿಯಲ್ಲಿ ನಡೆಯುತ್ತಿದೆಯಂತೆ. ಎಲೆಲ್ಲಿ ವಿತರಣೆ ಮಾಡಿದ್ದಾರೋ, ಇದು ಆರೋಗ್ಯಕ್ಕೆ ಹಾನಿಕಾರಕ. ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು. ಫುಡ್ ಕಾರ್ಪೋರೇಷನ್ ಆಪ್ ಇಂಡಿಯಾದವರಿಗೂ ಈಗಾಗಲೇ ತಿಳಿಸಿದ್ದೇವೆ. ಕೆಎಂಎಫ್ ಎಂಡಿಯವರು ಬಂದಿದ್ದಾರೆ. ಅದರ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯುತ್ತಿದೆ ಎಂದರು.

ವಿಷಯ ತಿಳಿಯುತ್ತಿದ್ದಂತೆ ಮೈಸೂರು ಹಾಲು ಉತ್ಪಾದಕರ ಒಕ್ಕೂಟ ಅರ್ಥಾತ್ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಅವರು ನಕಲಿ ತುಪ್ಪ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮೈಸೂರು ದಕ್ಷಿಣ ಗ್ರಾಮಾಂತರ ಪೋಲಿಸರು ಕೂಡ ಭೇಟಿ ನೀಡಿ, ನಕಲಿ ನಂದಿನಿ ತುಪ್ಪ ತಯಾರಿಕೆಯ ಪ್ರಮುಖ ಆರೋಪಿ ಚಂದ್ರು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಈ ಸಂಬಂಧ ಪೋಲಿಸರು ತನಿಖೆ ಕೈಗೊಂಡಿದ್ದು, ಈ ಜಾಲದಲ್ಲಿ ಭಾಗಿಯಾಗಿರುವ ಮತ್ತಷ್ಟು ಜನರಿಗೆ ಬಲೆ ಬೀಸಿದ್ದಾರೆ.

See also  ಮೈಸೂರಿನಲ್ಲಿ ಶಾಲೆ ಬಂದ್ ಗೆ ಡಿಸಿ ಸೂಚನೆ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು