News Kannada
Saturday, April 01 2023

ಮೈಸೂರು

ಮೈಸೂರಿನಲ್ಲಿ ಇಂದ್ರಜಿತ್ ಲಂಕೇಶ್ ವಿರುದ್ಧ ಪ್ರತಿಭಟನೆ

Photo Credit :

ಮೈಸೂರು: ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಅಭಿಮಾನಿಗಳು ನಗರದ ಎಂಜಿ ರಸ್ತೆಯ ದಿವಾನ್ ಪೂರ್ಣಯ್ಯ ಛತ್ರದ ಬಳಿ ಪ್ರತಿಭಟನೆ ನಡೆಸಿದರು

ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ದರ್ಶನ್  ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ಫ್ಲೆಕ್ಸ್‌ಗೆ ಮಸಿ ಬಳಿದು, ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನಟ ದರ್ಶನ್ ವಿರುದ್ಧ ಮಾತನಾಡಿದ್ದಲ್ಲದೆ, ಪೊಲೀಸರನ್ನ ಬಳೆ ತೊಟ್ಟುಕೊಳ್ಳಿ ಎಂದಿದ್ದ ಇಂದ್ರಜಿತ್ ಕ್ಷಮೆಯಾಚಿಸುವಂತೆ ಆಗ್ರಹಿಸಿದರು..

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಚಳುವಳಿ ಕೇಂದ್ರ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಇಂದ್ರಜಿತ್ ಲಂಕೇಶ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದು, ಸ್ಮರಣ್, ನಿಶಾಂತ್,  ಪ್ರಶಾಂತ್,  ಶೇಖರ್, ಅಮಿತ್, ವಿನಾಯಕ,  ಮೂರ್ತಿ ಹಾಗೂ ಇನ್ನಿತರರು ಭಾಗಿಯಾಗಿದ್ದರು. ಯಾವುದೇ ಅವಘಡ ನಡೆಯದಂತೆ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

See also  ಮೇಘಾಲಯದ ವಿದ್ಯಾರ್ಥಿನಿಗೆ ಕನ್ನಡದಲ್ಲಿ ಶೇಕಡಾ 99 ಅಂಕ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು