News Kannada
Monday, December 11 2023
ಮೈಸೂರು

ಮೈಸೂರಿನಲ್ಲಿ ಮೂವರು ಡ್ರಗ್ಸ್ ಫೆಡ್ಲರ್ ಗಳ ಬಂಧನ

Bangladeshi nationals arrested in Bengaluru
Photo Credit : Pexels

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೂ ಡ್ರಗ್ಸ್ ವಾಸನೆ ಬಡಿದಿದ್ದು, ಡ್ರಗ್ಸ್ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿ.ಸಿ.ಬಿ ಪೊಲೀಸರು ಖಚಿತವಾದ ಮಾಹಿತಿ ಮೇರೆಗೆ ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಪುಲಿಕೇಶಿ ರಸ್ತೆಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡಲು ನಿಂತಿದ್ದ ಇಬ್ಬರು ಆರೋಪಿಗಳನ್ನು ಹಾಗೂ ಡ್ರಗ್ಸ್ ಅನ್ನು ಖರೀದಿಸಿ ಇತರರಿಗೆ ಮತ್ತೆ ಮಾರಾಟ ಮಾಡಲು ನಿಂತಿದ್ದ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಡ್ರಗ್ಸ್ ಅನ್ನು ಹಾಗೂ ಅದರಿಂದ ಸಂಪಾದಿಸಿದ್ದ ರೂ 43,500 ನಗದು ಹಣ, 3 ಮೊಬೈಲ್ ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆಯಲ್ಲಿ ಆರೋಪಿಗಳು ಹಲವು ದಿನಗಳಿಂದ ಸದರಿ ಡ್ರಗ್ಸ್ ಅನ್ನು ಬೆಂಗಳೂರಿನ ಓರ್ವ ಮುಖ್ಯ ಪೆಡ್ಲರ್‌ನಿಂದ ತರಿಸಿಕೊಂಡು ಮೈಸೂರು ನಗರದ ವಿವಿಧ ಕಾಲೇಜು ಯುವಕ ಯುವತಿಯರು ಸೇರಿದಂತೆ ಇತರರಿಗೆ ಮಾರಾಟ ಮಾಡುತ್ತಿದ್ದದ್ದು ಕಂಡು ಬಂದಿದ್ದು, ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಬೆಂಗಳೂರಿನ ಮುಖ್ಯ ಪೆಡ್ಲರ್ ಹಾಗೂ ಮೈಸೂರಿನಲ್ಲಿ ಡ್ರಗ್ಸ್ ಅನ್ನು ಖರೀದಿಸಿ ಬಳಕೆ ಮಾಡಿದವರ ಪತ್ತೆ ಕಾರ್ಯ ಮುಂದುವರಿದಿದೆ.

ಮೈಸೂರು ನಗರದ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ) ಗೀತ ಪ್ರಸನ್ನ ಹಾಗೂ ಸಿ.ಸಿ.ಬಿ.ಯ ಎ.ಸಿ.ಪಿ. ದ ಸಿ.ಕೆ.ಅಶ್ವಥ ನಾರಾಯಣರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಇನ್ಸ್ಪೆಕ್ಟರ್ ಎ.ಮಲ್ಲೇಶ್, ಸಿಬ್ಬಂದಿ ರಾಜು, ಜೋಸೆಫ್ ನೊರೋನ್ಹ, ಡಿ.ಶ್ರೀನಿವಾಸ್ ಪ್ರಸಾದ್ ರವಿಕುಮಾರ್, ಜನಾರ್ಧನರಾವ್, ರಾಧೇಶ್, ರಾಮಯ್ಯ, .ಅನಿಲ್, ಸುಬಾನಲ್ಲಾ, ಸುನೀಲ್, ರಘು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ.ಚಂದ್ರಗುಪ್ತರವರು ಪ್ರಶಂಸಿಸಿದ್ದಾರೆ.

See also  ಭುವನೇಶ್ವರ: 1 ಕೋಟಿ ರೂ.ಗೂ ಅಧಿಕ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಂಡ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು