News Kannada
Friday, September 30 2022

ಮೈಸೂರು

ಮೈಸೂರು: ದಸರಾಕ್ಕೆ ಈ ಬಾರಿ ಅದ್ಧೂರಿ ದೀಪಾಲಂಕಾರ - 1 min read

Photo Credit : By Author

ಮೈಸೂರು: ಎರಡು ವರ್ಷಗಳು ಸರಳವಾಗಿ ದಸರಾ ನಡೆದರೂ ಅದ್ಧೂರಿಯಾಗಿ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ ಅದ್ಧೂರಿಯಾಗಿ ದಸರಾ ನಡೆಯಲಿದ್ದು, ವಿದ್ಯುತ್ ದೀಪಾಲಂಕಾರ ವೈಭವಯುತವಾಗಿರಲಿದೆ. ಈ ವರ್ಷದ ದೀಪಾಲಂಕಾರಕ್ಕೆ ಲೇಸರ್ ಬೆಳಕಿನ ಹೊಸ ಸ್ಪರ್ಶ ನೀಡಲಾಗುತ್ತಿದೆ. ನವರಾತ್ರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಝಗಮಗಿಸಲಿದೆ.

ದಸರಾ ಸಂಭ್ರಮವನ್ನು ದೀಪಾಲಂಕಾರದ ಮೂಲಕ ಹೆಚ್ಚಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಈಗಾಗಲೇ ಸಿದ್ಧತೆ ಆರಂಭಿಸಿದೆ. ವಿದ್ಯುತ್ ಮಿತ ಬಳಕೆ, ಪರಿಸರ ಸ್ನೇಹಿ ಎಲ್‌ಇಡಿ ಬಲ್ಬ್ ಬಳಸಿ ಆಕರ್ಷಕ ದೀಪಾಲಂಕಾರ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ.

ಹಿಂದೆ ಉಪಯೋಗಿಸುತ್ತಿದ್ದ ಬುರುಡೆ ಬಲ್ಬ್ಗೆ ಬದಲಾಗಿ ಪ್ರಸ್ತುತ ಉಪಯೋಗಿಸುತ್ತಿರುವ ಎಲ್‌ಇಡಿ ಬಲ್ಬ್ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಯೋಜನೆ ರೂಪಿಸಲಾಗಿದೆ. 2019ರಲ್ಲಿ 1,07,550 ಯೂನಿಟ್ ಬಳಕೆಯಾಗಿದ್ದರೆ, ಎಲ್‌ಇಡಿ ಬಳಕೆ ಶುರು ಮಾಡಿದ್ದರಿಂದ 2020ರಲ್ಲಿ 88,605 ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. 2021ರಲ್ಲಿ 1,35,000 ಯೂನಿಟ್ ಬಳಕೆಯಾಗಿತ್ತು. ದೀಪಾಲಂಕಾರದ ವ್ಯಾಪ್ತಿ ಪ್ರದೇಶ ವಿಸ್ತಾರವಾದರೂ ವಿದ್ಯುತ್ ಬಳಕೆ ಪ್ರಮಾಣ ಕಳೆದ ಸಲಕ್ಕಿಂತ ಕಡಿಮೆಯಾಗಿದೆ. ಈ ಬಾರಿ 1,31,805 ಯೂನಿಟ್ ಬೇಡಿಕೆ ಇದೆ.

ಪ್ರತಿ ವರ್ಷದಂತೆ ಅರಮನೆಯ ಸುತ್ತಲಿನ ಪ್ರಮುಖ ರಸ್ತೆಗಳು, ರಾಜಮಾರ್ಗ, ಚಾಮರಾಜ ಜೋಡಿ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಅಲ್ಲದೇ, ಹೆಚ್ಚುವರಿಯಾಗಿ ನಗರದ ಪ್ರಮುಖ ಪ್ರದೇಶಗಳ ರಸ್ತೆಗಳು ಸೇರಿ 127 ರಸ್ತೆಗಳಿಗೆ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ. ನಗರದ ಪ್ರಮುಖ ವೃತ್ತಗಳಾದ ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ರಾಮಸ್ವಾಮಿ ವೃತ್ತ, ಮಿಲೇನಿಯಂ ವೃತ್ತ, ಡಾ.ಅಂಬೇಡ್ಕರ್ ವೃತ್ತ, ರೈಲ್ವೆ ನಿಲ್ದಾಣದ ಎದುರಿನ ಬಾಬು ಜಗಜೀವನರಾಂ ವೃತ್ತ ಸೇರಿದಂತೆ 96 ವೃತ್ತಗಳಿಗೆ ಬೆಳಕಿನ ಸಿಂಗಾರ ಮಾಡಲಾಗುತ್ತದೆ. 30 ಪ್ರತಿಕೃತಿಗಳು ಈ ಬಾರಿ ಇರಲಿವೆ. ಅದು ಯಾರದು, ಯಾವುದರ ಪ್ರತಿಕೃತಿ ಮಾಡಬೇಕೆಂಬುದು ಇನ್ನೂ ತೀರ್ಮಾನವಾಗಬೇಕಿದೆ.

 

See also  ಮೈಸೂರಲ್ಲಿ 1877 ಜನರಿಗೆ ಸೋಂಕು: 8 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು