News Kannada
Sunday, December 04 2022

ಮೈಸೂರು

ಮೈಸೂರು: ದಸರಾ ಚಲನ ಚಿತ್ರೋತ್ಸವ ಆನ್ ಲೈನ್ ನೊಂದಣಿಗೆ ಅವಕಾಶ

Mysore/Mysuru: Dasara Film Festival will be open for online registration
Photo Credit : By Author

ಮೈಸೂರು: ದಸರಾ ಚಲನಚಿತ್ರೋತ್ಸವನ್ನು ಚಲನಚಿತ್ರೋತ್ಸವ ಸೆ.27 ರಿಂದ ಆರಂಭವಾಗಿ ಅಕ್ಟೋಬರ್ 3 ರವರೆಗೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಚಲನಚಿತ್ರೋತ್ಸವದಲ್ಲಿ 56 ಕನ್ನಡ, 28 ಪನೋರಮಾ, 28 ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಐನಾಕ್ಸ್ ನಲ್ಲಿ 3 ಮತ್ತು ಡಿಆರ್‌ಸಿ ಯ 1 ಸ್ಕೀನ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ದಿ.ಡಾ.ಪುನೀತ್ ರಾಜ್‌ಕುಮಾರ್ ಹಾಗೂ ಸಂಚಾರಿ ವಿಜಯ್ ನಟಿಸಿರುವ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದ್ದು, ಪುನಿತ್ ನಟನೆಯ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ್, ಮೈತ್ರಿ, ಪೃಥ್ವಿ, ಯುವರತ್ನ ಹಾಗೂ ಸಂಚಾರಿ ವಿಜಯ್ ಅಭಿನಯದ ತಲೆದಂಡ, ಪುಕ್ಸಟ್ಟೆ ಲೈಫು, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.

ಕನ್ನಡ ಚಿತ್ರಗಳಾದ 100, 777ಚಾರ್ಲಿ, ಶ್ರೀಸುತ್ತೂರು ಮಠ-ಗುರುಪರಂಪರೆ, ಆದ್ಯಾ, ಅವನೇ ಶ್ರೀಮನ್ನನಾರಾಯಣ, ಅವತಾರ ಪುರುಷ, ಬಡವರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭವಾಹನ, ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್ 1, ಕೆಜಿಎಫ್ 2, ಲವ್ ಮಾಕ್ಟೇಲ್1, ಲವ್ ಮಾಕ್ಟೇಲ್-2, ಮದಗಜ, ಮುಗಿಲ್ ಪೇಟೆ, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು, ಪೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸುರತ್ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಭಾರತೀಯ ಚಿತ್ರಗಳಾದ ಎ ಡಾಗ್ & ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯುಗೊಡಾರ್ಡ್ , ಅಗ್ನಿವರ್ಷ, ಐಸೇ ಹಿ, ಬಾಫ್, ಬೂಂಬಾ ರೈಡ್, ಈ ಮಣ್ಣು, ಘೋಡೇ ಕೋ ಜಲೇಬಿ ಖಿಲಾನೆ ಲೇಜಾರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ದಿ ಕ್ಲೌಡ್ &ದಿ ಮ್ಯಾನ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿಹಕ್ಕಿ, ನೋಯ್, ಪದಕ, ಸಾರಾ ವಜ್ರ, ಉರಿಯಟ್ಟು, ವಿಡೋ ಆಫ್ ಸೈಲೆನ್ಸ್ ಪ್ರದರ್ಶನಗೊಳ್ಳಲಿವೆ.

ವಿಶ್ವ ಚಿತ್ರಗಳಾದ ಜೆಂಟಲ್ ಕ್ರೀಚರ್, ಎ ಹೀರೋ, ಅಡಲ್ಟ್ಸ್ ಇನ್ ದಿ ರೂಮ್, ಅನದರ್ ರೌಂಡ್, ಆ್ಯಶ್ ಇಸ್ ದಿ ಪ್ಯೂರೆಸ್ಟ್ ವೈಟ್, ಕ್ಯಾಪರ್ನಾಮ್, ಎವರಿಥಿಂಗ್ ಎವೆರಿವೇರ್ ಅಳ್ ಎಟ್ ಒನ್ಸ್, ಎಕೈಲ್, ಐ ಡೇನಿಯಲ್ ಬ್ಲೇಕ್, ಲವ್ ಲೆಸ್, ನಾರ್ಥ್ ಸಿ, ಪ್ಯಾರಲೆಲ್ ಮದರ್ಸ್, ಪ್ಯಾರಾ ಸೈಟ್, ಪೋಟ್ರೇಟ್ ಆಫ್ ಎ ಲೇಡಿ ಆನ್ ಫೈರ್, ಸಾರಿ ವಿ ಮಿಸ್ಡ್ ಯೂ, ಸ್ಪೆನ್ಸರ್, ಬೈಸಿಕಲ್ ಥೀವ್ಸ್, ದಿ ಲಾಸ್ಟ್ ಎಕ್ಸೆ ಕ್ಯೂಷನ್, ದಿ ಸೆವೆಂತ್ ಸೀಲ್, ದಿ ಟ್ಯೂರಿನ್ ಹಾರ್ಸ್, ಥ್ರೋನ್ ಆಫ್ ಬ್ಲಡ್ , ಆನ್ ಡೈನ್ , ವ್ಯಾಗಾ ಬಾಂಡ್, ವಾಕಬೌಟ್, ವೆನ್ ಹಿಟ್ಲರ್ ಸ್ಟೋಲ್ ಪಿಂಕ್ ರ್ಯಾಬಿಟ್, ವೈಫ್ ಆಫ್ ಎ ಸ್ಪೈ, ವಿಮೆನ್ ಇನ್ ದಿ ಡ್ಯೂನ್ಸ್ ಪ್ರದರ್ಶನಗೊಳ್ಳಲಿದೆ.

See also  ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಲಾಗುತ್ತಿದೆ : ಸಚಿವ ಎಸ್.ಟಿ. ಸೋಮಶೇಖರ್

ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಇಚ್ಛಿಸುವವರು https://bit.ly/3UwiZm7 ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ 300 ರೂ. ಹಾಗೂ ಇತರರಿಗೆ 500 ರೂ. ದರವನ್ನು ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು