News Kannada
Friday, December 02 2022

ಮೈಸೂರು

ಮೈಸೂರು: ಗುರಿಯೊಂದಿಗೆ ಪರೀಕ್ಷೆ ಎದುರಿಸಿದರೆ ಯಶಸ್ಸು ಸಾಧ್ಯ

Photo Credit : By Author

ಮೈಸೂರು: ಆಸಕ್ತಿಯ ಅಧ್ಯಯನದ ಜತೆಗೆ ಸ್ಪಷ್ಟ ಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಭಾರ ಕುಲಪತಿ ಡಾ. ಎ. ಖಾದರ್ ಪಾಷ ಹೇಳಿದರು.

ಮಂಗಳವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗ ಎಲ್ಲಾ ಹುದ್ದೆಗಳ ಆಯ್ಕೆಗೆ ಪರೀಕ್ಷೆ ಇರುವುದರಿಂದ ನಿರಂತರವಾಗಿ ಅಧ್ಯಯನ ಮಾಡುತ್ತಲೇ ಇರಬೇಕಾಗುತ್ತದೆ. ಹೆಚ್ಚೆಚ್ಚು ಪರೀಕ್ಷೆಗಳನ್ನು ಎದುರಿಸುವುದರಿಂದ ಹೆಚ್ಚೆಚ್ಚು ಅನುಭವ ಸಿಗಲಿದೆ. ಜತೆಗೆ ಜ್ಞಾನದ ಲಭ್ಯತೆಯೂ ಆಗಲಿದೆ. ಒಂದಲ್ಲಾ ಒಂದು ಕಡೆ ಅವಕಾಶ ಸಿಕ್ಕೇ ಸಿಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಪ್ರಾಮಾಣಿಕ ಅಧ್ಯಯನ ಹಾಗೂ ಪ್ರಯತ್ನ ಮಾಡಬೇಕಷ್ಟೆ. ಸಾಧ್ಯವಾದಷ್ಟು ಪರೀಕ್ಷೆಗಳನ್ನು ನೀವು ಎದುರಿಸಿ ಎಂದರು, ಜೊತೆಗೆ ಐಎಎಸ್, ಐಪಿಎಸ್, ಐಎಫ್‌ಎಸ್ ಕೆಎಎಸ್ ಮುಂತಾದ ಪರೀಕ್ಷೆಗಳನ್ನು ಎದುರಿಸಲು ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷಾ ಅಧ್ಯಯನ ಸಂದರ್ಭದಲ್ಲಿಯೇ ಸಿದ್ದತೆ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಕರಾಮುವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ ಅವರು ಪರೀಕ್ಷಾ ಅಧ್ಯಯನ ಪುಸ್ತಕದ ಸಾಫ್ಟ್ ಕಾಪಿ ಬಿಡುಗಡೆ ಮಾಡಿ ಮಾತನಾಡಿ ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ಮಾತ್ರ ಜಯ ಸಿಗುತ್ತದೆ ಎಂಬ ಅಂಶವನ್ನು ಅರಿತುಕೊಳ್ಳಬೇಕು ಎಂದರು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯಕ್ರಮದಲ್ಲಿ ಗಣೇಶ್ ಕೆ.ಜಿ.ಕೊಪ್ಪಲ್, ಸಿದ್ದೇಶ್ ಹೊನ್ನೂರ್ ಇದ್ದರು.

See also  ಹೊಸದಿಲ್ಲಿ: ದಿಯೋಘರ್ ನಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು