News Kannada
Wednesday, November 30 2022

ಮೈಸೂರು

ಮೈಸೂರು: ನಾಗರಹೊಳೆಯಲ್ಲಿ ಮೃತಪಟ್ಟ ಹುಲಿಯ ಮೂರು ಮರಿಗಳು ಸುರಕ್ಷಿತ - 1 min read

Three cubs of a tiger that died in Nagarahole are safe
Photo Credit : Pixabay

ಮೈಸೂರು: ಜಿಲ್ಲೆಯ ನಾಗರಹೊಳೆ ಉದ್ಯಾನವನದ ಅಂತರಸಂತೆಯಲ್ಲಿ ಮೃತಪಟ್ಟ ಹುಲಿಯ ಮೂರು ಹುಲಿ ಮರಿಗಳು ಸುರಕ್ಷಿತವಾಗಿವೆ  ಎಂದು ಕ್ಯಾಮೆರಾಗಳ ಮೂಲಕ ತಿಳಿದು ಬಂದಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವನ್ಯಜೀವಿ ವಲಯಕ್ಕೆ ಒಳಪಡುವ ತಾರಕ ಹೊಳೆ ಪ್ರದೇಶದಲ್ಲಿ ಕಳೆದ ಎರಡು ತಿಂಗಳುಗಳಿಂದ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ತಿರುಗಾಡುತ್ತಿರುವುದು ಕಂಡುಬಂದಿದೆ.

ನವೆಂಬರ್ 12 ರಂದು ತಾರಕಾ ಹಿನ್ನೀರಿನ ಖಾಸಗಿ ಜಮೀನಿನಲ್ಲಿ ತಾಯಿ ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಾಗರಹೊಳೆ ನಿರ್ದೇಶಕ ಹರ್ಷಕುಮಾರ ನರಗುಂದ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 130 ಸಿಬ್ಬಂದಿ, 4 ಸಾಕು ಆನೆಗಳು, 30 ಟ್ರ್ಯಾಪಿಂಗ್ ಕ್ಯಾಮೆರಾಗಳು ಮತ್ತು 2 ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

See also  ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯರನ್ನು ಗೆಲ್ಲಿಸಿ: ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು