News Kannada
Tuesday, February 07 2023

ಮೈಸೂರು

ಮೈಸೂರು: 2 ದಿನಗಳ ಅಂತಾರಾಜ್ಯ ವಿಟಿಯು ಕುಸ್ತಿ ಮತ್ತು ಜುಡೋ ಪಂದ್ಯಾವಳಿ ಮುಕ್ತಾಯ

The 2-day Inter-State VTU Wrestling and Judo Tournament concludes
Photo Credit : By Author

ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ(ವಿವಿಸಿಈ) ಎಚ್.ಕೆಂಪೇಗೌಡ ಒಳಾಂಗಣ ಮೈದಾನದಲ್ಲಿ ನಡೆದ 2 ದಿನಗಳ ಅಂತಾರಾಜ್ಯ ವಿಟಿಯು ಕುಸ್ತಿ ಮತ್ತು ಜುಡೋ ಪಂದ್ಯಾವಳಿ ಇಂದು ಯಶಸ್ವಿಯಾಗಿ ತೆರೆ ಕಂಡಿತು.

ರಾಜ್ಯದ 42 ಇಂಜಿನಿಯರಿಂಗ್ ಕಾಲೇಜುಗಳಿಂದ 300ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಪುರುಷರ ಜುಡೋ ಸಮಗ್ರ ಪ್ರಶಸ್ತಿಯಲ್ಲಿ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಹಾಗೂ ಕುಸ್ತಿ ಪಂದ್ಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ನ್ಯೂ ಹೊರೈಝೆನ್ ಕಾಲೇಜು ಪಡೆದುಕೊಂಡಿತು.

ಮಹಿಳೆಯರ ಕುಸ್ತಿ ವಿಭಾಗದಲ್ಲಿ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದರೆ ಜುಡೋ ವಿಭಾಗದಲ್ಲಿ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜು ಚಿಕ್ಕಮಗಳೂರು ಪಡೆದುಕೊಂಡಿತು.

ಮೈಸೂರಿನ ವಿವಿಸಿಈ ಕಾಲೇಜಿನ ಮೊಹಮ್ಮದ್ ಓಮರ್ 79 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಯತೀಶ್ ಆರ್ ಹಾಗೂ ಕಿರಣ್ ಗೌಡ ಕ್ರಮವಾಗಿ 65ಕೆಜಿ ಹಾಗೂ 70ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮೂಡಿಗೆರಿಸಿಕೊಂಡರು. ಈ ಋತುವಿನ ಪುರುಷರ ಜುಡೋ ಸಮಗ್ರ ಪ್ರಶಸ್ತಿಯಲ್ಲಿ ಮಹಾರಾಜ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್ ಆಗಿ ಹೊರಹುಮ್ಮಿತು.

See also  ಬಂಟ್ವಾಳ : ವಿದ್ಯಾರ್ಥಿಗಳಿಂದ ಚುನಾವಣಾ ಮತದಾನ ಜಾಗೃತಿ ಅಭಿಯಾನ ಜಾಥಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು