News Kannada
Thursday, February 02 2023

ಮೈಸೂರು

ಮೈಸೂರು: ಧಾರ್ಮಿಕ ಪ್ರಜ್ಞೆಯಿಂದ ಸ್ವಸ್ಥ ಸಮಾಜ ಸಾಧ್ಯ- ಹೇಮಂತ್ ಕುಮಾರ್ ಗೌಡ

Mysuru: A healthy society is possible through religious consciousness: Hemanth Kumar Gowda
Photo Credit : News Kannada

ಮೈಸೂರು: ಸನಾತನ ಧರ್ಮದ ಪ್ರಕಾರ ಮನುಷ್ಯನು ಭಗವಂತನಲ್ಲಿ ಐಕ್ಯವಾಗಲು ರಾಜಯೋಗ’ ಭಕ್ತಿಯೋಗ ಕರ್ಮಯೋಗ, ಜ್ಞಾನಯೋಗ ಎಂಬ ಮಾರ್ಗಗಳಿವೆ. ಅಯ್ಯಪ್ಪ ವ್ರತ ಮಾಡುವವರು ಭಕ್ತಿ ಯೋಗದ ಮೂಲಕ ದೈವಸ್ವರೂಪದ ಅನುಭವವನ್ನು ಪಡೆಯುತ್ತಾರೆ ಎಂದು ವಸ್ತು ಪ್ರದರ್ಶನ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹೇಳಿದರು.

ರಾಘವೇಂದ್ರನಗರದಲ್ಲಿರುವ ಶ್ರೀ ಅಭಯಂ ಫೌಂಡೇಶನ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಹೊದಿಕೆ ಮತ್ತು ಅಯ್ಯಪ್ಪ ಮಾಲಧಾರಿಗಳ ವಸ್ತ್ರ ವಿತರಿಸುವ ಮೂಲಕ ಬ್ರಹ್ಮ ಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ಮತ ಭೇದ ಬದಿಗಿಟ್ಟು ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ಊರಿನ ದೈವ ದೇವಸ್ಥಾನಗಳು ಅಭಿವೃದ್ಧಿಗೊಂಡಲ್ಲಿ ಸುಭಿಕ್ಷೆ ನೆಲೆಗೊಳ್ಳುವುದು ಎಂದು ಹೇಳಿದರು, ಧಾರ್ಮಿಕ ಪ್ರಜ್ಞೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ನಿರಂತರವಾಗಿ ಶ್ರದ್ದಾ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ನೆಮ್ಮದಿ ಕಾಣುಲು ಸಾಧ್ಯವೆಂದರು ಸಾಮರಸ್ಯ ಸಾರುವ ಸಂಕೇತ ಅಯ್ಯಪ್ಪಸ್ವಾಮಿಯ ಆರಾಧನೆಯಲ್ಲಿ ಪ್ರಕೃತಿಯ ತತ್ವವಿದೆ ಸಾಮರಸ್ಯ ಸಾರುವ ಸಂಕೇತದ ಮೂಲಕ ಜಾತ್ಯತೀತ ಮನೋಧರ್ಮ ಅಡಗಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಅಭಯಂ ಫೌಂಡೇಶನ್ ಅಧ್ಯಕ್ಷರಾದ ಮುರುಳಿಧರ್ ಶಾಸ್ತ್ರಿ ಡಾ.ಚಕ್ರಪಾಣಿ, ಸುಚಿಂದ್ರ, ವೆಂಕಟೇಶ್, ದೇವಸ್ಥಾನದ ಅರ್ಚಕರಾದ ಎಂ ಎಸ್ ಮೋಹನ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.

See also  ಕರ್ನಾಟಕ ಸಿರಿ-2022 ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಕೆ.ಗಣೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು