ನಂಜನಗೂಡು: ಜ.18 ರಿಂದ 23 ವರೆಗೆ ನಡೆಯುವ ಆರು ದಿನಗಳ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ವಿದ್ಯಕ್ತ ಚಾಲನೆ ದೊರೆಯಿತು.
ಬಿ.ವೈ ವಿಜಯೇಂದ್ರ ಮತನಾಡಿ, ಸುತ್ತೂರಿನ ಜಾತ್ರೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದಿದೆ.ಹನ್ನರಡೆನೆ ಶತಮಾನದಲ್ಲಿ ಬಸವಣ್ಣ ಅವರ ಶೋಷಿತ ಸಮುದಾಯಗಳಿಗೆ ದ್ವನಿಯಾಗಿದ್ದರು.ಹಳೇ ಮೈಸೂರಿನಲ್ಲಿ ಸುತ್ತಯ ಮಠದ ಶಿಕ್ಷಣ ಮತ್ತು ಅನ್ನ ದಾಸೋಹ ಮಾಡುವ ಮೂಲಕ ಬಡವರ ಸೇವೆ ಮಾಡಲಾಗುತ್ತಿದೆ.ಜಾತ್ರೆಗಳು ಸಂಸ್ಕೃತಿಯ ರಾಯಭಾರಿಗಳು .ಸುತ್ತೂರು ಜಾತ್ರೆ ಕೇವಲ ಸಾಂಸ್ಕೃತಿಕ ಉತ್ಸವಲ್ಲ ಅದು ಶ್ರದ್ಧೆಯ ಕೇಂದ್ರ ಎಂದರು.
ಈ ಭಾಗದ ಎಲ್ಲಾ ಜನರ ಶಕ್ತಿ ತುಂಬಲು ಸುತ್ತೂರು ಮಠ ಅನೇಕ ಉತ್ತಮ ಕೆಲಸ ಮಾಡುತ್ತಿದೆ. ಚಾಮರಾಜನಗರ ಜಿಲ್ಲೆ ಹಸಿರು ಕ್ರಾಂತಿಯಾಗಲು ಮಾಜಿ ಸಿಎಂ ಯಡಿಯೂರಪ್ಪ ಅವರು ಕೆರೆಗಳನ್ನು ತುಂಬಿಸಿದರಿಂದ ಚಾಮರಾಜನಗರ ಜಿಲ್ಲೆ ಕೃಷಿಯಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದೆ ಎಂದರು. ಸರ್ಕಾರಕ್ಕಿಂತಲೂ ಹೆಚ್ಚಾಗಿ ತ್ರಿವಿಧ ದಾಸೋಹ ಮಾಡುವ ಮೂಲಕ ಮಠಗಳು ಉತ್ತಮ ಕೆಸಲ ಮಾಡಿವೆ. ಎಲ್ಲಾ ಸಮುದಾಯಗಳು ಉತ್ತಮ ಮಾರ್ಗದಲ್ಲಿ ನಡೆಯಬೇಕಾದರೆ,ಮಠಗಳಿಗೆ ಶಕ್ತಿ ತುಂಬುವ ಕೆಲಸ ನಡೆಯಬೇಕು ಎಂದರು.
ರಾಜಕಾರದಲ್ಲಿ ನಾನು ಎಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂಬುದು ಮುಖ್ಯವಲ್ಲ.ಆದರೆ, ವರುಣಾ ಕ್ಷೇತ್ರದ ಜನರು ತೋರಿಸುವ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ವರುಣಾ ಕ್ಷೇತ್ರದ ಜನರ ಬಗ್ಗೆ ಎಂದಿಗೂ ವಿಶೇಷ ಪ್ರೀತಿ ಹೊಂದಿರುತ್ತೇನೆ ಎಂದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸುತ್ತೂರು ಜಾತ್ರೆ ಇತರೆ ಜಾತ್ರೆಗಳಂತಲ್ಲ. ಕೃಷಿ, ವಿಜ್ಞಾನ, ಶಿಕ್ಷಣದ ಬಗ್ಗೆ ಜನರಿಗೆ ಅರ್ಥಪೂರ್ಣ ಮಾಹಿತಿ ನೀಡುತ್ತಾ ಬಂದಿದೆ. ರಾಜಕೀಯವಾಗಿ ಸುತ್ತೂರು ಮಠ ಯಾವುದೇ ಜಾತಿ ಅಥವಾ ಒಬ್ಬ ವ್ಯಕ್ತಿಗೆ ಸೀಮಿತವಾದದೇ ಎಲ್ಲರನ್ನೂ ಸಮಾನವಾಗಿ ನೋಡಿದೆ ಎಂದರು.
ಸಚಿವ ಬೀಸಿಪಾಟೀಲ್ ಮಾತನಾಡಿ, ಸುತ್ತೂರು ಜಾತ್ರೆ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇಲ್ಲಿನ ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಲಾಗದ ಕೆಲಸವನ್ನು ಸುತ್ತೂರು ಮಠ ಮಾಡಿತೋರಿಸಿದೆ.ಸಾವಾಯುವ ಕೃಷಿ ಕೇವಲ ವಸ್ತು ಪ್ರದರ್ಶನ ಕಣ್ತುಂಬಿಕೊಂಡೆ ಸಾಲದು ಮನತುಂಬಿಕೊಳ್ಳಬೇಕು. ಅದನ್ನು ಜೀವನ ಅಳವಡಿಸಕೊಳ್ಳಬೇಕು ಎಂದರು.
ಕಲೆ ಸಾಹಿತ್ಯ ಪ್ರಚಾರದ ಜೊತೆಗೆ ರೈತರು ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶ ಇಟ್ಟಕೊಂಡು ಸ್ವಾಮೀಜಿ ಅನೇಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಕೃಷಿ ವಿದ್ಯಾನಿದಿಯ ಮೂಲಕ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ರೈತಶಕ್ತಿ ಯೋಜನೆಯಡಿ ಡೀಸಲ್ ಸಹಾಯದ ನೀಡಲು 1200 ರೂ ಪ್ರತಿಯೊಬ್ಬರ ರೈತರಿಗೆ ಖಾತೆಗೆ ನೀಡಲಾಗುತ್ತದೆ ಎಂದು ಹೇಳಿದರು.
ಸಿರಿದಾನ್ಯವನ್ನ ಬೆಂಗಳೂರಿನಲ್ಲಿ 21 ಮತ್ತು 22 ರಂದು ಸಿರಿದಾನ್ಯ ಮೇಳ ಆಯೋಜಿಸಲಾಗಿದೆ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದರು.
ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ನಾರಾಯಣ ಸ್ವಾಮಿ ಮಾತನಾಡಿ, ಜೆಎಸ್ಎಸ್ ಸಂಸ್ಥೆ ಕೇಲವ ಒಂದು ಧರ್ಮ ಅಥವಾ ಜಾತಿಗಾಗಲಿ ಸೀಮಿತವಾಗಿಲ್ಲ.ಸಮಾಜಕ್ಕೆ ಅಗತ್ಯವಾದ ಜ್ಞಾನಾರ್ಜನೆ ಧಾರ್ಮಿಕ ಧರ್ಮ ಪೀಠಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಎಲ್ಲಾ ಸಮುದಾಯಯದ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸಭಾಪತಿ ಮರಿತ್ತಿಬ್ಬೇಗೌಡ ಮಾತನಾಡಿ, ಸುತ್ತೂರು ಜಾತ್ರೆ ಬಸವಣ್ಣನವರ ಅನುಭವ ಮಂಟಪದ ಕಣ್ಮುಂದೆ ಕಾಣುವಂತಿದೆ. ಈ ಜಾತ್ರೆಯ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಅನೇಕ ಹೊಸ ಚಿಂತನೆಗಳು ಅಳವಡಿಕೊಳ್ಳು ಕೆಲಸವನ್ನು ಸುತ್ತೂರು ಜಾತ್ರೆ ಮಾಡುತ್ತಿದೆ ಎಂದರು.
ದಾಸೋಹದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನ ನೀಡುತ್ತಿದೆ.ಯಾವ ಸರ್ಕಾರವು ಮಾಡಲಾಗದಂತಹ ಕೆಲಸವನ್ನು ಮಠಗಳು ಮಾಡುತ್ತಿವೆ. ಭವಿಷ್ಯದಲ್ಕಿ ಸುತ್ತೂರು ಮಠ ಮತ್ತಷ್ಟು ವಿಸ್ತೀರ್ಣವಾಗಬೇಕು ಎಂದರು.
ಸುತ್ತೂರು ಜಾತ್ರೆಯ ಮೊದಲ ದಿನದಂದು ವಸ್ತು ಪ್ರದರ್ಶನ,ಕೃಷಿ,ಸಿರಿಧಾನ್ಯ ಮೇಳ,ಸಾಂಸ್ಕೃತಿಕ ಮೇಳ,ಉಚಿತ ಆರೋಗ್ಯ ತಪಾಸಣೆ ಶಿಬಿರ,ರಂಗೋಲಿ,ದೋಣಿ ವಿಹಾರ,ಸೋಬಾನೆ ಪದ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆಗಳು ಉದ್ಘಾನೆಗೊಂಡವು.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಬಿ.ಸಿ.ಪಾಟೀಲ್, ಕೇರಳದ ಎಡನೀರು ಮಠದ ಸಚ್ಚಿದಾನಂದ ಭಾರತಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಕೇಂದ್ರ ಸಚಿವ ನಾರಾಯಣ ಸ್ವಾಮಿ, ಹೊಸಮಠದ ಚಿದಾನಂದ ಸ್ವಾಮಿ, ಶಾಸಕ ಸಿ.ಎಸ್.ನಿರಂಜನ, ಸಫಾಯಿ ಕರ್ಮಚಾರಿ ಅಯೋಗದ ಕೋಟೆ ಶಿವಣ್ಣ, ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ. ವಿ.ಲೋಕೇಶ್, ಮರಿತಿಬ್ಬೇಗೌಡ ,ಅಶೋಕ್ ಪಾಟೀಲ್ ಹಾಗೂ ಇತರರು ಹಾಜರಿದ್ದರು.