ಮೈಸೂರು: ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಸ್.ಗೀತಾ ಅವರನ್ನು ವರ್ಗಾವಣೆ ಮಾಡಿ ಪೊಲೀಸ್ ತರಬೇತಿ ಶಾಲೆಗೆ ನಿಯೋಜಿಸಲಾಗಿದೆ.
ಹಲವು ದಿನಗಳಿಂದ ಹುದ್ದೆ ಇಲ್ಲದೆ ಇದ್ದ ಪ್ರದೀಪ್ ಗುಂಟಿ ಅವರಿಗೆ ಕಾರಾಗೃಹ ಇಲಾಖೆ ಅಧೀಕ್ಷಕರನ್ನಾಗಿ ನಿಯೋಜನೆ ಮಾಡುವ ಮೂಲಕ ಒಂದೂವರೆ ತಿಂಗಳ ಬಳಿಕ ಹುದ್ದೆ ತೋರಿಸಿದೆ. ಎಂ.ಎಸ್.ಗೀತಾ ಅವರ ಸ್ಥಳಕ್ಕೆ ಯಾರನ್ನೂ ನಿಯೋಜಿಸಿಲ್ಲ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಆಗಿದ್ದ ಎಂ.ಎಸ್.ಗೀತಾ ಅವರನ್ನು 2020 ಜೂ.2ರಂದು ಸರ್ಕಾರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯನ್ನಾಗಿ ನೇಮಿಸಲಾಗಿತ್ತು.
ಜೂ.4ರಂದು ಅಧಿಕಾರ ಸ್ವೀಕರಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಎಸ್ಪಿಯನ್ನಾಗಿ ನೇಮಿಸಲಾಗುತ್ತಿದೆ ಎನ್ನುವ ಮಾತು ಕೇಳಿಬಂದಿತ್ತಾದರೂ ಕೊನೆಯಲ್ಲಿ ರದ್ದಾಗಿತ್ತು. ಇದೀಗ ಸಾರ್ವತ್ರಿಕ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.