ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಮುಖ್ಯ ರಸ್ತೆ ಬಳಿ ಟಾಟಾ ಎಸಿ ಹಾಗೂ ಬೈಕ್ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹುಣಸೂರು ತಾಲೂಕಿನ ಹುಣಸೆಗಾಲ ಗ್ರಾಮದ ನಿವಾಸಿ ಪುಟ್ಟೇಗೌಡ ಮಗ 32 ವರ್ಷದ ಮಂಜು ಮೃತ ದುರ್ದೈವಿ.
ಹುಣಸೂರು ಕಡೆಗೆ ಹೋಗುತ್ತಿದ್ದ ಬೈಕ್ ಗೆ ಹುಣಸೂರು ಕಡೆಯಿಂದ ಬರುತಿದ್ದ ಟಾಟಾ ಏಸ್ ವಾಹನದ ಚಾಲಕನ ಅಜಾಗರುಕತೆ ಹಾಗೂ ಅತಿವೇಗದಿಂದ ಬಂದ ಪರಿಣಾಮ ಮುಂದೆ ಬರುತಿದ್ದ ಬೈಕ್ ಗೆ ಅಪಘಾತ ಮಾಡಿದ್ದು ಬೈಕ್ ನಲ್ಲಿ ಇದ್ದ ಮಂಜು ಸ್ಥಳದಲೇ ಸವಣಪ್ಪಿದ್ದು ಅವನ ಹೆಂಡತಿ ತುಳಸಿ ಮತ್ತು 2 ವರ್ಷದ ಮಗು ವಿಗೆ ಗಾಯಗಳಾಗಿವೆ.
ತುಳಸಿ ಮತ್ತು ಮಗುವಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ದುರ್ದೈವಿ ಮಂಜು ಗೆ 2 ವರ್ಷದ ಗಂಡು ಮಗು, 4ಹಾಗೂ 6 ವರುಷದ ಹೆಣ್ಣು ಮಕ್ಕಳಿದ್ದಾರೆ.
ಅತಿ ವೇಗದ ಪರಿಣಾಮ ಗುದ್ದಿದ ವೇಗಕ್ಕೆ ಪಕ್ಕದಲ್ಲಿ ಬರುತಿದ್ದ ಮತ್ತೊಂದು ಬೈಕ್ ಹಿರಿಖ್ಯಾತನಹಳ್ಳಿ ಗ್ರಾಮದ ಸಚಿನ್ ಎಂಬುವವರಿಗೂ ತಲೆಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಳಿಸಲಾಗಿದ್ದು, ಟಾಟಾ ಏಸ್ ವಾಹನದ ಚಾಲಕ ತಪ್ಪಿಸಿಕೊಂಡು ಹೋಗುತ್ತಿದ್ದ ವೇಳೆ ಸೂಕ್ತ ಮಾಹಿತಿ ಮೇರೆಗೆ ಹುಣಸೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹುಣಸೂರು ಗ್ರಾಮಾಂತರ ಪೊಲೀಸರು ಸ್ಥಳ ಮಹಾಜರ್ ಮಾಡಿ, ಪ್ರಕರಣ ದಾಖಲಿಸಿಕೊಂಡು, ಶವವನ್ನು ಸ್ನೇಹಜೀವಿ ಆಂಬುಲೆನ್ಸ್ ಮುಕಾಂತರ ಹುಣಸೂರಿನ ಶ್ರೀ ದೇವರಾಜ ಆಸ್ಪತ್ರೆಗೆ ಮರಣೋನೊತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಮನ ಕುಲುಕುವಂತಿದೆ.