ಮೈಸೂರಲ್ಲಿ ಗಮನಸೆಳೆದ ಗಾಳಿಪಟ ಉತ್ಸವ

ಮೈಸೂರಲ್ಲಿ ಗಮನಸೆಳೆದ ಗಾಳಿಪಟ ಉತ್ಸವ

LK   ¦    Feb 10, 2020 07:29:47 PM (IST)
ಮೈಸೂರಲ್ಲಿ ಗಮನಸೆಳೆದ ಗಾಳಿಪಟ ಉತ್ಸವ

ಮೈಸೂರು: ಅಗರಬತ್ತಿಯಿಂದ ಹಿಡಿದು ಏರೋಸ್ಪೇಸ್‍ವರೆಗೂ ಹಲವಾರು ಕ್ಷೇತ್ರಗಳಲ್ಲಿ ತನ್ನ ಸ್ಥಾಪಿತ ಉಪಸ್ಥಿತಿಯನ್ನು ಹೊಂದಿರುವ ಮೈಸೂರು ಮೂಲದ ಎನ್‍ಆರ್ ಸಮೂಹ ತನ್ನ ಉದ್ಯೋಗಿಗಳಿಗಾಗಿ ವಿಶೇಷ ಗಾಳಿಪಟ ಉತ್ಸವವನ್ನು ಆಯೋಜಿಸುವ ಮೂಲಕ ಸಂಭ್ರಮಿಸಿದರು.

ಈ ಗಾಳಿಪಟ ಉತ್ಸವದಲ್ಲಿ 600ಕ್ಕೂ ಹೆಚ್ಚು ಉದ್ಯೋಗಿಗಳು ಒಂದೆಡೆ ಸೇರಿ ಗಾಳಿ ಪಟ ಹಾರಿಸಿ ಖುಷಿಪಟ್ಟರು. ಉತ್ಸವದ ಅಂಗವಾಗಿ ನಗರದಲ್ಲಿ ಸುಮಾರು 200 ಗಾಳಿಪಟಗಳು ಆಕಾಶದೆತ್ತರಕ್ಕೆ ಹಾರಿದವು. ಗಾಳಿಪಟದಲ್ಲಿ ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ತಿಳಿಸುವ ಮೂಲಕ ನೌಕರರ ಸೃಜನಶೀಲ ಅಭಿವ್ಯಕ್ತಿಗೂ ಅವಕಾಶ ಕಲ್ಪಿಸಲಾಗಿತ್ತು. ಗಾಳಿಪಟಗಳಲ್ಲಿ ಅತ್ಯಂತ ಸೃಜನಶೀಲ ಕಲಾಕೃತಿಗಳು ಮೂಡಿಬಂದು ಗಮನಸೆಳೆದವು.

ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮಾತನಾಡಿ ಗಾಳಿಪಟ ಉತ್ಸವದ ಮೂಲಕ ಸೃಜನಶೀಲ ಕಲೆಯನ್ನು ವೃದ್ಧಿಸಲು ಮತ್ತು  ನೌಕರರಲ್ಲಿ ಸಂತಸ ಸಂಭ್ರಮ ಕಾಣಲು ಸಾಧ್ಯವಾಗಿದೆ ಎಂದರು.