ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

HSA   ¦    Feb 13, 2020 04:18:10 PM (IST)
ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

ಮೈಸೂರು: ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡಬೇಕು, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಘಟನೆಗಳು ಕೇವಲ ಪ್ರತಿಭಟನೆ ಮಾತ್ರ ಮಾಡಿದರು. ಇದರಿಂದ ಜನರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಖಾಸಗಿ ಟ್ಯಾಕ್ಸಿ, ಬಸ್ ಸಂಘಟನೆಗಳು, ರೈತ ಸಂಘಟನೆ ಪ್ರತಿಭಟನೆಯಲ್ಲಿ ಭಾಗಿಯಾದವು.

ಶಾಲಾ ಕಾಲೇಜುಗಳು ಕೂಡ ಎಂದಿನಂತ ನಡೆದವು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಬೆಂಗಳೂರಿನಲ್ಲಿ ಕೆಲವು ಚಾಲಕ ಮಾಲಕ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದ ಕಾರಣದಿಂದಾಗಿ ಸ್ವಲ್ಪ ಮಟ್ಟಿಗೆ ಜನರಿಗೆ ಪ್ರಯಾಣಕ್ಕೆ ತೊಂದರೆ ಆಗಿದೆ. ರಾಜ್ಯದ ಬೇರೆಡೆಗಳಲ್ಲಿ ಕೂಡ ಬಂದ್ ಗೆ ಅಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.