ಮೂಡಾದಿಂದ ಒತ್ತುವರಿ ತೆರವು: 6 ಕೋಟಿ ರೂ  ಆಸ್ತಿ ವಶ

ಮೂಡಾದಿಂದ ಒತ್ತುವರಿ ತೆರವು: 6 ಕೋಟಿ ರೂ  ಆಸ್ತಿ ವಶ

CI   ¦    Sep 16, 2020 03:17:02 PM (IST)
ಮೂಡಾದಿಂದ ಒತ್ತುವರಿ ತೆರವು: 6 ಕೋಟಿ ರೂ  ಆಸ್ತಿ ವಶ

ಮೈಸೂರು: ಆಶಾ ಮಂದಿರ ಯೋಜನೆಯಡಿ ನಗರದ ದೇವನೂರು 1ನೇ ಹಂತ ಬಡಾವಣೆಯ ಮೂಲೆ ನಿವೇಶನಗಳಲ್ಲಿ ಮೂಡ ಜಮೀನನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹತ್ತಾರು ಶೆಡ್ಡುಗಳನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ತೆರವುಗೊಳಿಸಿದರು.

ದೇವನೂರು ಬಡಾವಣೆಯ ಮೂಲೆ ನಿವೇಶನಗಳಾದ ಸಂಖ್ಯೆ 1142, 1162, 1698, 1699, 1728, 1727  ರಲ್ಲಿ  40x40 ಅಡಿ ಅಳತೆಯ 4 ನಿವೇಶನ ಹಾಗೂ 30x40 ಅಡಿ ಅಳತೆಯ 2 ನಿವೇಶನಗಳಲ್ಲಿ ಒಟ್ಟು 8800 ಚದರ ಅಡಿಗಳಷ್ಟನ್ನು  ಒತ್ತುವರಿ ಮಾಡಿಕೊಂಡು ಶೆಡ್‌ ನಿರ್ಮಿಸಲಾಗಿತ್ತು. ಶೆಡ್‌ ತೆರವುಗೊಳಿಸಲಾದ ಈ  ನಿವೇಶನಗಳ ಒಟ್ಟು ಮೌಲ್ಯ 6 ಕೋಟಿ ರೂಪಾಯಿ  ಮೂಡ ಆಯುಕ್ತ ನಟೇಶ್‌ ತಿಳಿಸಿದರು.

ಆಯುಕ್ತ ನಟೇಶ್‌ ನೇತೃತ್ವದಲ್ಲಿ  ನಡೆದ ಒತ್ತುವರಿ ತೆರುವು ಕಾರ್ಯಾಚರಣೆಯಲ್ಲಿ ಅಧೀಕ್ಷಕ ಅಭಿಯಂತರ ಶಂಕರ್, ಕಾರ್ಯಪಾಲಕ ಅಭಿಯಂತರರಾದ ಎಂ.ಆರ್.ಪಾಂಡುರಂಗ, ಜಿ.ಸುವರ್ಣ, ವಲಯ ಅಧಿಕಾರಿಗಳಾದ ಜಿ.ಮೋಹನ್, ಎಸ್.ಕೆ.ಭಾಸ್ಕರ್, ಸಿ.ಕಿರಣ್, ಕೆ.ಆರ್.ಮಹೇಶ್, ಎಚ್.ಪಿ.ಶಿವಣ್ಣ, ನಾಗೇಶ್, ಎಚ್.ಎನ್.ರವೀಂದ್ರ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಇತರರು  ಭಾಗವಹಿಸಿದ್ದರು.