ಮೈಸೂರಲ್ಲಿ ಆರಂಭಗೊಂಡ  ಕೆಎಸ್ ಅರ್‌ ಟಿಸಿ, ನಗರ ಸಾರಿಗೆ ಸೇವೆ 

ಮೈಸೂರಲ್ಲಿ ಆರಂಭಗೊಂಡ  ಕೆಎಸ್ ಅರ್‌ ಟಿಸಿ, ನಗರ ಸಾರಿಗೆ ಸೇವೆ 

CI   ¦    May 19, 2020 12:10:05 PM (IST)
ಮೈಸೂರಲ್ಲಿ ಆರಂಭಗೊಂಡ  ಕೆಎಸ್ ಅರ್‌ ಟಿಸಿ, ನಗರ ಸಾರಿಗೆ ಸೇವೆ 

ಮೈಸೂರು: ನಗರದ ಸರ್ಕಾರಿ  ಬಸ್‌ ನಿಲ್ದಾಣದಲ್ಲಿ  ಲಾಕ್‌ ಡೌನ್‌  ಘೋಷಿಸಿದ  ೫೮ ದಿನಗಳ  ಬಳಿಕ ಇಂದಿನಿಂದ  ಬಸ್ ಸಂಚಾರ ಅರಂಭಗೊಂಡಿದೆ. ಕೊರೋನ ಮಹಾಮಾರಿ  ಸೋಂಕಿನ  ಭೀತಿಯಿಂದ ಇಡೀ  ದೇಶದಲ್ಲಿ  ಲಾಕ್‌ ಡೌನ್‌ ಘೋಷಿಸಲಾಗಿತ್ತು. 

ಮೈಸೂರಿನಲ್ಲಿಯೂ 90 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೆಂಪು ವಲಯದಲ್ಲಿ  ಗುರುತಿಸಲಾಗಿದ್ದು  ಯಾವುದೇ ವಾಹನ ಸಂಚಾರಕ್ಕೆ ಆಸ್ಪದವಿರಲಿಲ್ಲ. ಇದೀಗ ಮೈಸೂರಿನಲ್ಲಿ 90 ಪಾಸಿಟಿವ್ ವ್ಯಕ್ತಿಗಳೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯಂತೆ ಇಂದಿನಿಂದ ಮೈಸೂರಿನ ಪ್ರಮುಖ ನಗರಗಳಿಗೆ  ಹಾಗೂ ಬಡಾವಣೆಗಳಿಗೆ     ಕೆಎಸ್‌ಅರ್‌ಟಿಸಿ ಮತ್ತು ನಗರ ಬಸ್  ಸೇವೆ ಆರಂಬಗೊಂಡಿದೆ. 

ಈ ಕುರಿತು ‘ ಮಾತನಾಡಿದ  ಮೈಸೂರು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು  ಅವರು   ಮೈಸೂರಿನಲ್ಲಿಂದು ಬಸ್ ಸಂಚಾರಕ್ಕೆ     ಅನುವು ಮಾಡಿಕೊಡಲಾಗಿದೆ. ಇಂದು ನಗರದಲ್ಲಿ 68 ಬಸ್  ಗಳು ಸಂಚರಿಸಲಿದೆ. ಪ್ರತಿ ಬಸ್ ನಲ್ಲಿ 30ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅವರು ಇಳಿಯುವ ಸ್ಥಳಗಳಲ್ಲಿಯೇ ಅವರನ್ನು ಇಳಿಸಲಾಗುವುದು ಎಂದರು.

ಪ್ರತಿಯೊಬ್ಬರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಬಸ್ ನಿಲ್ದಾಣಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಅವರು ಮಾರ್ಕ್ ಮಾಡಿದ ಜಾಗಗಳಲ್ಲಿಯೇ ನಿಲ್ಲಬೇಕು. ಅವರ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುವುದು. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು, ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು. ಬಸ್ ಒಂದು ನಗರಕ್ಕೆ ಹೋಗಿ ಬಂದ ನಂತರ ಸ್ಯಾನಿಟೈಸರ್ ಮಾಡಲಾಗುವುದು. ಓರ್ವ ಪ್ರಯಾಣಿಕರು ಇಳಿದಲ್ಲಿ, ಅಕಸ್ಮಾತ್ ಅಲ್ಲಿ ಮತ್ತೋರ್ವರು ಹತ್ತಲು ಪ್ರಯಾಣಿಕರು ಸಿದ್ಧರಿದ್ದಲ್ಲಿ ಅವರನ್ನು ಬಸ್ ನಲ್ಲಿ ಕರೆದೊಯ್ಯುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಸ್ ನಲ್ಲಿ ಪ್ರಯಾಣಿಸುವವರಿಗೆ ಸೀಟ್ ಗಳನ್ನು ನಿಗದಿಪಡಿಸಲಾಗಿದೆ. ಸೀಟ್ ಇದ್ದಲ್ಲಿ ಮಾತ್ರ ಅವರನ್ನು ಕರೆದೊಯ್ಯಲಾಗುತ್ತದೆ. ಇಲ್ಲದಿದ್ದಲ್ಲಿ ಕರೆದೊಯ್ಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಮಾತನಾಡಿ ಇಂದು 10ರಿಂದ 12ಬಸ್ ಗಳನ್ನು ಬೆಂಗಳೂರು ಸೇರಿದಂತೆ ಬಿಡಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ ಗಳನ್ನು ಬಿಡಲಾಗುವುದು.  ಇಬ್ಬರು ಕುಳಿತುಕೊಳ್ಳುನ ಸೀಟ್ ನಲ್ಲಿ ಒಬ್ಬರು, ಮೂವರು ಕುಳಿತುಕೊಳ್ಳುವ ಸೀಟ್ ನಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ.  ಪ್ರಯಾಣಿಕರು ಬಸ್ ಹತ್ತುವುದಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್, ಕೈಗಳಿಗೆ ಸ್ನಾನಿಟೈಸರ್ ಹಾಕುವುದು ನಡೆಯಲಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.

ಬಸ್ ಡಿಪೋದಿಂದ ಹೋಗುವ ಮುನ್ನ ಮತ್ತು ಬಸ್ ಸಾಯಂಕಾಲ ಮರಳಿದಾಗ ಬಸ್ ನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುವುದು ಎಂದು ತಿಳಿಸಿದರು.