ರೋಹಿಣಿ ಸಿಂಧೂರಿ ವರ್ಗಾವಣೆ ಕುರಿತಾದ ಮನವಿ ತಿರಸ್ಕಾರ ಮಾಡಿದ ಯಡಿಯೂರಪ್ಪ

ರೋಹಿಣಿ ಸಿಂಧೂರಿ ವರ್ಗಾವಣೆ ಕುರಿತಾದ ಮನವಿ ತಿರಸ್ಕಾರ ಮಾಡಿದ ಯಡಿಯೂರಪ್ಪ

Ms   ¦    Jun 06, 2021 03:42:54 PM (IST)
ರೋಹಿಣಿ ಸಿಂಧೂರಿ ವರ್ಗಾವಣೆ ಕುರಿತಾದ ಮನವಿ ತಿರಸ್ಕಾರ ಮಾಡಿದ ಯಡಿಯೂರಪ್ಪ

ಬೆಂಗಳೂರು : ಮೈಸೂರು ಐಎ ಎಸ್ ಅಧಿಕಾರಿಗಳ ನಡುವಿನ ಜಗಳದಿಂದಾಗಿ ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂದೂರಿ ಅವರನ್ನು ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೋಹಿಣಿ ಸಿಂಧೂರಿ ಭಾನುವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. 

 

ಆದರೆ , ರೋಹಿಣಿ ಸಿಂಧೂರಿಯವರ ಮನವಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿರಸ್ಕರಿಸಿದ್ದಾರೆ . ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ನಡುವಿನ ಜಟಾಪಟಿ ಹಿನ್ನೆಲೆಯಲ್ಲಿ ನಿನ್ನೆ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆಗೊಂಡಿರುವ ರೋಹಿಣಿ ಸಿಂಧೂರಿ ವರ್ಗಾವಣೆಗೆ ತಡೆ ಕೋರಲು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಖಾಸಗಿ ಕಾರಿನಲ್ಲಿ ಆಗಮಿಸಿ ಸಿಎಂ ಅವರನ್ನು ಭೇಟಿಯಾದರು .

 

 ಈ ಸಂದರ್ಭದಲ್ಲಿ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿ ತಮ್ಮನ್ನು ಸಮರ್ಥಿಸಿಕೊಂಡರು . ಆದರೆ , ರೋಹಿಣಿಯವರ ಮನವಿಯನ್ನು ತಿರಸ್ಕರಿಸಿ ವರ್ಗಾವಣೆಗೊಂಡಿರುವ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ . ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ , ವರ್ಗಾವಣೆ ಆದೇಶದ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಬಂದಿದ್ದರು . ವರ್ಗಾವಣೆಯಾದ ನಂತರ ಮತ್ತೆ ಮರು ಪರಿಶೀಲನೆ ಮಾಡುವ ಪ್ರಶ್ನೆ ಉದ್ಭವವಾಗಲ್ಲ . ತಕ್ಷಣ ವರ್ಗಾವಣೆಗೊಂಡ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು .