ಕುರುಬಾಳಹುಂಡಿಯ ಜನರಿಗೆ  ಕಾಟ ಕೊಡುತಿದ್ದ ಚಿರತೆ ಇಲಾಖೆಯ ಬೋನಿನಲ್ಲಿ  ಸೆರೆ 

ಕುರುಬಾಳಹುಂಡಿಯ ಜನರಿಗೆ  ಕಾಟ ಕೊಡುತಿದ್ದ ಚಿರತೆ ಇಲಾಖೆಯ ಬೋನಿನಲ್ಲಿ  ಸೆರೆ 

CI   ¦    May 22, 2020 12:56:46 PM (IST)
ಕುರುಬಾಳಹುಂಡಿಯ ಜನರಿಗೆ  ಕಾಟ ಕೊಡುತಿದ್ದ ಚಿರತೆ ಇಲಾಖೆಯ ಬೋನಿನಲ್ಲಿ  ಸೆರೆ 

ಮೈಸೂರು: ಕಳೆದ ಎರಡು ಮೂರು ತಿಂಗಳಿಗಳಿಂದ   ತಿ. ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದ ಜನರಿಗೆ ವಿಪರೀತ ಕಾಟ ಕೊಡುತಿದ್ದ  ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಚಿರತೆ  ಜಾನುವಾರುಗಳ ಮೇಲೆ ಧಾಳಿ ನಡೆಸುತಿತ್ತು ಅಷ್ಟೇ ಅಲ್ಲ ರಾತ್ರಿ   ನಾಯಿಗಳನ್ನೂ  ಹೊತ್ತೊಯ್ಯುತಿತ್ತು. 

ಇದರಿಂದಾಗಿ   ಗ್ರಾಮಸ್ಥರಲ್ಲಿ ಜೀವ ಭಯ ಹುಟ್ಟು ಹಾಕಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತ ರಾಜು ಎಂಬವವರ ಜಮೀನಿನಲ್ಲಿ ಬೋನು ಇರಿಸಿ ನಾಯಿ ಕಟ್ಟಿ ಹಾಕಲಾಗಿತ್ತು.

ಶುಕ್ರವಾರ ರಾತ್ರಿ  ಬೇಟೆಯಾಡಲು ಬಂದು ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಮಾಹಿತಿ ಮೆರೆಗೆ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಸೆರೆಯಾಗಿರುವ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ನಿರ್ಧರಿಸಿದ್ದಾರೆ.