ಮೈಸೂರಿನಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆ

ಮೈಸೂರಿನಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆ

LK   ¦    May 18, 2020 04:47:21 PM (IST)
ಮೈಸೂರಿನಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆ

ಮೈಸೂರು: ಕೊರೋನಾ ಸೋಂಕಿತರು ವಾಸಿಯಾಗುವುದರೊಂದಿಗೆ ನೆಮ್ಮದಿಯಾಗಿದ್ದ ಮೈಸೂರಿಗೆ ಇದೀಗ ಮತ್ತೊಂದು ಸೋಂಕು ತಗುಲಿದ್ದು ಇದರಿಂದ ಕಳೆದ ಹದಿನೆಂಟು ದಿನಗಳಿಂದ ನೆಮ್ಮದಿಯಾಗಿದ್ದ ಜನ ಮತ್ತೆ ಭಯಪಡುವಂತಾಗಿದೆ.

ಈಗಾಗಲೇ ಮುಂಬೈನಿಂದ ಬಂದವರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗಿದ್ದು, ಮೈಸೂರಿಗೂ ಇದರ ನಂಟು ಇದೆ ಎನ್ನಲಾಗುತ್ತಿದೆ. ಇದೀಗ ಸೋಂಕು ತಗುಲಿದ ವ್ಯಕ್ತಿ ಕೆ.ಆರ್.ನಗರ ತಾಲೂಕಿನ ಹೆಬ್ಸೂರು ಗ್ರಾಮದ ನಿವಾಸಿ ಎನ್ನಲಾಗಿದೆ.

ಈತ ಒಂದೇ ಸ್ಕೂಟರ್ ನಲ್ಲಿ ಮಂಡ್ಯ ಮೂಲಕ ಭೇರ್ಯ ತಲುಪಿದ್ದರು. ಇವರನ್ನು  ಭೇರ್ಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದರು.  ವಿಚಾರಣೆ ವೇಳೆ ಇವರು ಮಹಾರಾಷ್ಟ್ರದ ಮುಂಬೈಯಿಂದ ಬೈಕ್ ಮೂಲಕ ಕೆ.ಆರ್.ಪೇಟೆ ಪ್ರವೇಶ ಮಾಡಿದ್ದರು. ಮೈಸೂರಿನಲ್ಲಿ ಅರ್ಜಿ ರಿಜೆಕ್ಟ್ ಆದ ಕಾರಣ ಮಂಡ್ಯ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಂದಿಗೆ ಊರು ಸೇರಲು ಭೇರ್ಯ ಮೂಲಕ ಸಂಚಾರ ಮಾಡುತ್ತಿದ್ದ ಇವರನ್ನು ಅರಕೆರೆ ಮೊರಾರ್ಜಿ ಶಾಲೆಯಲ್ಲಿ ಹೋಂ ಕ್ವಾರೈಂಟೆನ್ ಮಾಡಲಾಗಿತ್ತು. ಇವರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.