ನೋಡ ಬನ್ನಿ ಬನ್ನೂರು ಹೇಮಾದ್ರಾಂಬ ಬಂಡಿಜಾತ್ರೆ

ನೋಡ ಬನ್ನಿ ಬನ್ನೂರು ಹೇಮಾದ್ರಾಂಬ ಬಂಡಿಜಾತ್ರೆ

LK   ¦    Feb 16, 2019 06:07:29 PM (IST)
ನೋಡ ಬನ್ನಿ ಬನ್ನೂರು ಹೇಮಾದ್ರಾಂಬ ಬಂಡಿಜಾತ್ರೆ

ಈಗ ಜಾತ್ರೆಯ ಸಮಯ ಮೈಸೂರು ಜಿಲ್ಲೆಯಾದ್ಯಂತ ಒಂದಲ್ಲ ಒಂದು ಜಾತ್ರೆಗಳು ನಡೆಯುತ್ತಲೇ ಇವೆ. ತಮ್ಮ ಊರಿನ ಜಾತ್ರೆಗಳನ್ನು ಅದ್ಧೂರಿಯಾಗಿ ನಡೆಸಲು ಮತ್ತು ಅದರಲ್ಲಿ ತಾವು ಪಾಲ್ಗೊಂಡು ಸಂಭ್ರಮಿಸಲು ಜನ ಹಾತೊರೆಯುತ್ತಿರುತ್ತಾರೆ.

ಸದಾ ಕೆಲಸಗಳಲ್ಲಿ ನಿರತರಾದ ಗ್ರಾಮಸ್ಥರು ವರುಷಕ್ಕೊಮ್ಮೆ ತಮ್ಮೂರಿನ ಜಾತ್ರೆಯನ್ನು ಸಂಪ್ರದಾಯಬದ್ಧವಾಗಿ ಅದ್ಧೂರಿಯಾಗಿ ನಡೆಸಲು ಕಾತುರದಿಂದ ಕಾಯುತ್ತಾರೆ. ಅದರಂತೆ ಇದೀಗ ಬನ್ನೂರಿನ ಶ್ರೀ ಹೇಮಾದ್ರಾಂಬ ಅಮ್ಮನವರ ಬಂಡಿಜಾತ್ರೆ ಆರಂಭವಾಗುತ್ತಿದ್ದು ಸುಮಾರು ಹನ್ನೊಂದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.

ವಹ್ನೀಪುರ ಎಂದು ಇತಿಹಾಸ ಪ್ರಸಿದ್ದವಾದ ಹಸಿ ಬತ್ತ ಬಿಸಿ ಬೆಲ್ಲದ ಪಟ್ಟಣ ಬನ್ನೂರಿನಲ್ಲಿ ನಡೆಯುವ ಶ್ರೀ ಹೇಮಾದ್ರಾಂಬ ಜಾತ್ರೆಯ ವಿವಿಧ ಸೇವಾ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದ್ದು, ಫೆ. 17ರಿಂದ 27ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

17ನೇ ಭಾನುವಾರ ಮಾಗಶುದ್ದ ತ್ರಯೋದಶಿಯಂದು ಆದಿಜಾಂಬವ ಜನಾಂಗದವರಿಂದ ಹಸಿರು ಚಪ್ಪರದ ಸೇವಾರ್ಥ ನಡೆಯಲಿದ್ದು, ಯಳಂಗಾರ್ ಅವರಿಂದ ಅನ್ನಡಿಕೆ ಬಂಡಿ, ಜೈ ಭೀಮ ನಗರದ ಯಜಮಾನ್ ಬಿ.ಕೆ.ಕೇಶವಮೂರ್ತಿಯವರಿಂದ ರಾತ್ರಿ ಅಂಕುರಾರ್ಪಣೆ ನಡೆಯುವ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.

18ನೇ ಸೋಮವಾರ ಮಾಗಶುದ್ದ ಚತುರ್ದಶಿಯಂದು ಅಭಿಷೇಕ, ಅರ್ಚನೆ ನಡೆಯಲಿದ್ದು, ಹರಿಜನ ಬಾಂಧವರಿಂದ ಅನ್ನ ನೈವೇದ್ಯಕ್ಕೆ ಆಹ್ವಾನ ನೀಡಲಾಗುತ್ತದೆ. 19ನೇ ಮಂಗಳವಾರ ಮಾಗಶುದ್ದ ಪೌರ್ಣಿಮೆಯಂದು ಅಭಿಷೇಕ, ಮಹಾಮಂಗಳಾರತಿ, ನಾಯಕರ ದೇವಿ ತೋಪಿನ ಮಡುವಿನಲ್ಲಿ ಅವಭೃತ ಸ್ನಾನ ನಡೆಯಲಿದ್ದು, ಲಿಂಗಾಯಿತ ಜನಾಂಗದವರಿಂದ ದೇವಿತೋಪಿನಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಮಾಡಲಾಗಿರುತ್ತದೆ. ಹರಿಜನ ಭಾಂದವರಿಂದ ದೇವಿಗೆ ಅನ್ನ ನೈವೇದ್ಯ ನಡೆಯಲಿದ್ದು, ಮಧ್ಯಾಹ್ನ ಪ್ರಮುಖ ಕೇಂದ್ರ ಬಿಂದುವಾದ ಬಂಡಿಜಾತ್ರೆ ನಡೆಯಲಿದೆ. ಬಂಡಿ ಓಡಾಡುವ ಸ್ಥಳದಲ್ಲಿ ಬೋವಿ ಜನಾಂಗದವರು ಉತ್ತಮ ರೀತಿಯ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸುವ ಮೂಲಕ ಸೇವೆ ಸಲ್ಲಿಸುತ್ತಾರೆ. ಸಂಜೆ 7ಗಂಟೆಗೆ ದೇವಸ್ಥಾನದಿಂದ ಬಾಯಿಬೀಗ ಹೊರಡುತ್ತದೆ. ಅಂದು ರಾತ್ರಿ ಶಿವಜ್ಯೋತಿ ಪಣ ಜನಾಂಗದವರಿಂದ ಉತ್ಸವ ನಡೆಯಲಿದೆ.

20ನೇ ಬುಧವಾರ ಮಾಘಕೃಷ್ಣ ಪ್ರತಿಪತ್ ದಿನದಲ್ಲಿ ದಿ.ಸುಬ್ರಹ್ಮಣ್ಯಚಾರ್ ಕುಟುಂಬದಿಂದ ಮಂಟಪೋತ್ಸವ ನಡೆಯಲಿದೆ. 21ನೇ ಗುರುವಾರ ಮಾಘಕೃಷ್ಣ ದ್ವಿತೀಯ ದಿನದಂದು ಬಣಜಿಗಶೆಟ್ಟರ ಜನಾಂಗದವರಿಂದ ಪಲ್ಲಕ್ಕಿ ಉತ್ಸವ ನಡೆಯಲಿದೆ. 22ನೇ ಶುಕ್ರವಾರ ಮಾಘಕೃಷ್ಣ ತೃತೀಯ ದಿನದಂದು ಈಡಿಗ ಜನಾಂಗದವರಿಂದ ಶೇಷಗಜವಾಹನೋತ್ಸವ ನಡೆಯಲಿದೆ.23ನೇ ಶನಿವಾರ ಮಾಘಕೃಷ್ಣ ಚತುರ್ಥಿಯಂದು ಪೆÇಲೀಸ್ ಇಲಾಖೆ ವತಿಯಿಂದ ಗರುಡೋತ್ಸವ ನಡೆಯಲಿದೆ. 24ನೇ ಭಾನುವಾರ ಮಾಘಕೃಷ್ಣ ಪಂಚಮಿಯಂದು ಪ್ರಾತಃ ಕಾಲ ಹೋಮ ಆಭಿಷೇಕ, ಸಂಪೆÇ್ರೀಕ್ಷಣೆ, ಕಳಸ ಪ್ರತಿಷ್ಠಾಪನೆ,ಮತ್ತು ಒಕ್ಕಲಿಗ ಜನಾಂಗದ ವತಿಯಿಂದ ದಿವ್ಯ ಮಹಾತಥೋತ್ಸವ, ರಾತ್ರಿ ಬ್ರಾಹ್ಮಣ ಸಂಘದ ವತಿಯಿಂದ ತೇರಡಿ ಉತ್ಸವ ಮತ್ತು ಪೌರಕಾರ್ಮಿಕ ಜನಾಂಗದವರಿಂದ ವಾದ್ಯ ಸೇವಾರ್ಥ ನಡೆಯಲಿದೆ. 25ನೇ ಸೋಮವಾರ ಮಾಘಕೃಷ್ಣ ಷಷ್ಠಿಯಂದು ಅಭಿಷೇಕ, ಮಹಾಮಂಗಳಾರತಿ ನಡೆಯಲಿದ್ದು, ಮಧ್ಯಾಹ್ನ ಮಾಕನಹಳ್ಳಿ ಗ್ರಾಮಸ್ಥರಿಂದ ಬನ್ನೂರು ನಾಯಕ ಜನಾಂಗದ ಸಹಕಾರದೊಂದಿಗೆ ತೆಪೆÇ್ಪೀತ್ಸವ ನಡೆಯಲಿದೆ. ಅಂದು ರಾತ್ರಿ ನಯನ ಕ್ಷತ್ರೀಯ ಜನಾಂಗದವರಿಂದ ಪಲ್ಲಕ್ಕಿ ಉತ್ಸವ ನಡೆಯಲಿದೆ. 26ನೇ ಮಂಗಳವಾರ ಮಾಘಕೃಷ್ಣ ಸಪ್ತಮಿಯಂದು ಪ್ರಾತÀಃ ಕಾಲ ವೈಮಾಳಿಗೋತ್ಸವ ನಡೆಯಲಿದೆ. 27ನೇ ಬುಧವಾರ ಮಾಘಕೃಷ್ಣ ಅಷ್ಟಮಿಯಂದು ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ. ಈ ಎಲ್ಲ ದೇವತಾಕಾರ್ಯಗಳಿಗೆ ಮಡಿವಾಳ ಶೆಟ್ಟರ ಜನಾಂಗದವರಿಂದ ನಡಮುಡಿಸೇವೆ, ಪಂಜಿನ ಸೇವೆ ನಿರಂತರವಾಗಿ ನಡೆಯಲಿದೆ. 

ಗಮನಸೆಳೆಯುವ ಹೇಮಾದ್ರಾಂಬ ದನಗಳ ಜಾತ್ರೆ

ಶ್ರೀ ಹೇಮಾದ್ರಾಂಬ ಅಮ್ಮನವರ ಬಂಡಿಜಾತ್ರೆ ಅಂಗವಾಗಿ ಫೆ.18 ರಿಂದ 24ರವರೆಗೆ ಭಾರೀ ದನಗಳ ಜಾತ್ರೆ ನಡೆಯಲಿದ್ದು, ಉತ್ತಮ ರಾಸುಗಳಿಗೆ ಬೆಳ್ಳಿ ಬಹುಮಾನ ನೀಡಲಾಗುತ್ತದೆ.

ಹಾಲು ಹಲ್ಲು, ಎರಡು ಹಲ್ಲು,ನಾಲ್ಕು ಹಲ್ಲು,ಆರು ಹಲ್ಲು ಮತ್ತು ಬಾಯಿಗೂಡಿದ ಎಲ್ಲಾ ವಿಭಾಗದ ಹಸು ಮತ್ತು ಎತ್ತುಗಳಿಗೆ ಪ್ರಥಮ ಬಹುಮಾನ 100ಗ್ರಾಂ ಬೆಳ್ಳಿ, ದ್ವಿತೀಯ ಬಹುಮಾನ 75 ಗ್ರಾಂ ಬೆಳ್ಳಿ, ತೃತೀಯ ಬಹುಮಾನ 50ಗ್ರಾಂ ಬೆಳ್ಳಿ ಬಹುಮಾನ ನೀಡಲಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಉತ್ತಮ ಎತ್ತುಗಳಿಗೆ ಜಾತ್ರಾ ಚಾಂಪಿಯನ್, ಹಿರಿಯ ವೈದ್ಯಕೀಯ ಪರಿವೀಕ್ಷಕರಿಂದ ಉತ್ತಮ ಹಸುಗಳಿಗೆ ಜಾತ್ರಾ ಚಾಂಪಿಯನ್ ನೀಡಲಾಗುತ್ತದೆ.