ಕಲ್ಲಿನ ಮೇಲಿನ ಅದ್ಭುತ ಬರಹಗಾರ ಈ ಮೂರ್ತಿ

ಕಲ್ಲಿನ ಮೇಲಿನ ಅದ್ಭುತ ಬರಹಗಾರ ಈ ಮೂರ್ತಿ

Jan 14, 2020 06:40:40 PM (IST)
ಕಲ್ಲಿನ ಮೇಲಿನ ಅದ್ಭುತ ಬರಹಗಾರ ಈ ಮೂರ್ತಿ

ನಾವು ಒಂದು ಹಾಳೆಯ ಮೇಲೆ, ಪೇಪರ್ ಮೇಲೆ, ಬುಕ್ ನಲ್ಲಿ ನಮ್ಮ ಹೆಸರು ಮತ್ತು ಅಕ್ಷರವನ್ನು ತುಂಬಾ ಸರಾಗವಾಗಿ ಬರೆಯುತ್ತೀವಿ, ಅದೇ ಕಲ್ಲಿನ ಮೇಲೆ ಬರೆಯಿರಿ ಅಂದ್ರೇ ಸ್ವಲ್ವ ಕಷ್ಟ, ಆದ್ರೆ ಇಲ್ಲೊಬ್ಬ ಕಲ್ಲಿನ ಮೇಲೆ ಅಕ್ಷರವನ್ನು ಎಷ್ಟು ಸರಾಗವಾಗಿ ಬರೆಯುತ್ತಿರುವುದನ್ನು ಕಂಡರೆ ಮೈ ರೋಮಾಂಚನಗೊಳ್ಳುತ್ತದೆ.

ಚಿಕ್ಕಮಗಳೂರಿನ ಮೂರ್ತಿ ಕಡಪ ಕಲ್ಲಿನ ಮೇಲೆ ನೀರು ಕುಡಿದ ಹಾಗೇ ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತನೆ ಮಾಡುತ್ತಾರೆ. ಸುಮಾರು ನಾಲ್ಕು ದಶಕಗಳಿಂದ ಕಲ್ಲಿನ ಮೇಲೆ ಮೂರ್ತಿ ಅಕ್ಷರಗಳನ್ನು ಬರೆಯುತ್ತಿದ್ದು, ತಮ್ಮ ತಾತನಿಂದ ಕಲಿತಂತಹ ವಿದ್ಯೆಯಾಗಿದೆ. ಚಿಕ್ಕಮಗಳೂರಿನ ದತ್ತಾಪೀಠ, ಮುಳ್ಳಯ್ಯನಗಿರಿ ಮತ್ತು ವಿವಿಧ ನೂರಾರು ದೇವಾಲಯಗಳಲ್ಲಿ ಹೊರಗಡೆ ಹಾಕಿರುವ ಕಲ್ಲಿನ ನಾಮಫಲಕಗಳ ಮೇಲೆ ಅಕ್ಷರಗಳನ್ನು ಬರೆದಿರುವುದು ಈ ವ್ಯಕ್ತಿಯೇ. ಕಲ್ಲಿನ ಮೇಲೆ ತುಂಬಾ ಸುಂದರವಾಗಿ ಮತ್ತು ನೋಡಲು ಆಕರ್ಷಣೆಯ ರೀತಿಯಲ್ಲಿ ಕಾಣುವಂತೆ ಬರೆಯುವುದನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಇವರ ಈ ಸಾಧನೆಗೆ ಇವರ ಧರ್ಮಪತ್ನಿಯೂ ಕೂಡ ಸಾಥ್ ನೀಡಿದ್ದಾರೆ. ಇವರ ಕೆಲಸಕ್ಕೆ ಇವರು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಈಗ ಇವರ ಕೆತ್ತನೆ ಕಂಪ್ಯೂಟರೀಕರಣಗೊಂಡಿದ್ದು, ಹೊಸದಾಗಿ ಪೋಟೋಗಳ ಕೆತ್ತನೆಯನ್ನು ಸಹ ಈಗ ಕೆತ್ತುತ್ತಿದ್ದಾರೆ. ಈಗಾಗಲೇ ಡಾ.ರಾಜ್ ಕುಮಾರ್, ಶೃಂಗೇರಿಯ ಪೀಠಾಧಿಪತಿ, ಆದಿಚುಂಚನಗಿರಿ, ರಂಭಾಪುರಿ ಪೀಠ ಶ್ರೀಗಳ ಪೋಟೋಗಳ ಜೊತೆಗೆ ಹತ್ತು ಹಲವಾರು ಜನರ ಪೋಟೋಗಳನ್ನು ಸಹ ಕಲ್ಲಿನ ಮೇಲೆ ಕೆತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಹೆಸರುವಾಸಿಯಾಗಿರುವ ಇವರ ಕಲೆ ಪ್ರತಿ ಜಿಲ್ಲೆಯಲ್ಲಿಯೂ ಚಿರಪರಿಚಿತವಾಗಿದೆ. ಒಟ್ಟಾರೆಯಾಗಿ ಇವರ ಈ ಸಾಧನೆಯನ್ನು ಜಿಲ್ಲಾಡಳಿತ ಗುರುತಿಸಿ ಕಳೆದ 2014-15 ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದಲ್ಲದೆ ಹತ್ತಾರೂ ಸಂಘಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಿದೆ. ಇವರ ಈ ಸಾಧನೆ ಇನ್ನಷ್ಟು ಮುಂದುವರಿಯಲಿ ಎಂದು ನಾವು ಹಾರೈಸೋಣ.