ಸಣ್ಣ ಸಣ್ಣ ಖುಷಿಯ ಪ್ರಾಮುಖ್ಯತೆ

ಸಣ್ಣ ಸಣ್ಣ ಖುಷಿಯ ಪ್ರಾಮುಖ್ಯತೆ

Akarsha Ariga   ¦    Apr 25, 2021 08:10:27 PM (IST)
ಸಣ್ಣ ಸಣ್ಣ ಖುಷಿಯ ಪ್ರಾಮುಖ್ಯತೆ

ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾಂತ್ರಿಕ ಜೀವನದ ಒತ್ತಡದಲ್ಲಿ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಮರೆತರೆ ಎಂತಹ ದೊಡ್ಡ ನಷ್ಟ ಎದುರಾಗಬಹುದು, ಆದರೆ ಜೀವನದಲ್ಲಾಗುವ ಸಣ್ಣ ಸಣ್ಣ ಘಟನೆಗಳಲ್ಲೂ ಸಂತೋಷವನ್ನು ಕಂಡುಕೊಳ್ಳುವುದರಿಂದ ದುಃಖಕ್ಕೆ ಅಲ್ಲಿ ಜಾಗವಿರುವುದಿಲ್ಲ.

 

ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು- ಮಂಕುತಿಮ್ಮ’ ಎನ್ನುತ್ತಾರೆ ಡಿವಿಜಿ.ಸುಖ, ಸಂತೋಷ ನಾಳೆ ಬರುತ್ತದೆ ಎಂದುಕೊಂಡು ಕಾಯುವುದರಲ್ಲಿ ಅರ್ಥ ಇಲ್ಲ.ಈಗ ಸಂತೋಷಪಟ್ಟರೆ ನಾಳೆ ದುಃಖ ಬರುತ್ತದೆಯೋ ಏನೋ ಎಂಬ ದುಗುಡದಲ್ಲೇ ದಿನ ದೂಡುತ್ತೇವೆ. ಈ ಕ್ಷಣದ ಸುಖವನ್ನು ಅನುಭವಿಸಬೇಕು. ಖುಷಿ ಕೊಡುವ ಗೆಳೆಯರು, ಇಷ್ಟವಾಗುವ ಸಂಗೀತ, ಸಿನಿಮಾ ನೋಡಿದಾಗ ಆಗುವ ಖುಷಿ, ಹಳೆಯ ಗೆಳತಿ ಸಿಕ್ಕಾಗ ಹಂಚಿಕೊಂಡ ನೆನಪುಗಳಿಂದ ಸ್ವಲ್ಪ ಸಮಯವಾದರೂ ಮನಸ್ಸಿಗೆ ಸಿಗುವ ನಿರಾಳತೆ ಇವೆಲ್ಲಾ ಸಣ್ಣಸಣ್ಣ ಖುಷಿಗಳೇ. ಆದರೆ ಅದನ್ನು ಸಂಭ್ರಮಿಸಲು ಹೋಗುವುದಿಲ್ಲ.ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದರ ಮೂಲಕ ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸಬಹುದು.ಕ್ಷಣಗಳಿಂದ ಮಾತ್ರ ಖುಷಿ ಸಿಗುತ್ತದೆ ಎಂದೇ ಭಾವಿಸಿರುತ್ತಾರೆ. ಪುಟ್ಟ ಪುಟ್ಟ ಬದಲಾವಣೆಯೂ ಬದುಕಿನಲ್ಲಿ ಖುಷಿಯನ್ನು ತರಬಲ್ಲದು.ನಾಳೆಯ ಚಿಂತೆ ಮಾಡ್ಕೊಂಡು ಈ ಕ್ಷಣದ ಬಗ್ಗೆ ಮರೆಯುತ್ತಿದ್ದೇವೆ. ಈ ಕೋವಿಡ್ ಸಂದರ್ಭದಲ್ಲಿ ನಮ್ಮೆಲ್ಲ ಸಣ್ಣ-ಸಣ್ಣ ಖುಷಿಯನ್ನು ಮೆಲಕು ಹಾಕಲು ಅವಕಾಶ ದೊರೆಯಿತು ಸಂಬಂಧಗಳು ಕಟ್ಟಲಾಯಿತು. 

 

ಕೆಲವೊಮ್ಮೆ ನಾವು ತಪ್ಪಾಗಿ ಯೋಚನೆ ಮಾಡುತ್ತೇವೆ. ನಾವಿರುವವರೆಗೂ ಕಷ್ಟಗಳು ತಪ್ಪಿದ್ದಲ್ಲ ಎಂದುಕೊಂಡು ಖುಷಿಪಡುವುದಕ್ಕೂ ಆಯ್ಕೆ ಮಾಡಿಕೊಳ್ಳುತ್ತಾರೆ.ಈಗ ಸಂತೋಷಪಟ್ಟರೆ ನಾಳೆ ದುಃಖ ಬರುತ್ತದೆಯೋ ಏನೋ ಎಂಬ ದುಗುಡದಲ್ಲೇ ದಿನ ದೂಡುತ್ತೇವೆ.