ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಸೆರೆ

ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಸೆರೆ

LK   ¦    Aug 01, 2020 04:52:16 PM (IST)
ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಸೆರೆ

ಬೇಲೂರು: ವ್ಯಕ್ತಿಯೊಬ್ಬರಿಗೆ ಫೈನಾನ್ಸ್ ನಿಂದ ಸಾಲ ಕೊಡಿಸುವುದಾಗಿ ನಂಬಿಸಿ ಎರಡು ಲಕ್ಷ ರೂ.ನ್ನು ವಂಚಿಸಿದ್ದ ಆರೋಪಿಯನ್ನು ಬಂಧಿಸಿರುವ ಬೇಲೂರು ಠಾಣಾ ಪೆÇಲೀಸರು ಬಂಧಿತನಿಂದ 4.47 ಲಕ್ಷ ರೂ. ನಗದು  14 ಖಾಲಿ ಚೆಕ್‍ಗಳು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಿವಾಸಿ ಗೋಪಾಲ್(35) ಎಂಬಾತನೇ ಸಾಲಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿ.  ಬೇಲೂರು ತಾಲೂಕು ಹಗರೆ ನಿವಾಸಿ ಧರ್ಮಯ್ಯ ಎಂಬುವರೇ  ವಂಚನೆಗೊಳಗಾದವರು. ಇವರು ತಮ್ಮ ಊರಿನಲ್ಲಿ ಮನೆಯೊಂದನ್ನು ನಿರ್ಮಿಸುತ್ತಿದ್ದರು. ಹೀಗಾಗಿ ಹಣದ ಅವಶ್ಯಕತೆಯಿತ್ತು. ಇವರು ಟೀ ಕುಡಿಯಲು ಬರುತ್ತಿದ್ದ ಕ್ಯಾಂಟೀನ್‍ಗೆ ಆರೋಪಿ ಗೋಪಾಲ್ ಬರುತ್ತಿದ್ದನು. ಹೀಗಾಗಿ ಪರಿಚಯವಾಗಿತ್ತು. ಈ ನಡುವೆ ಧರ್ಮಯ್ಯ ಅವರಿಗೆ ಹಣದ ಅವಶ್ಯಕತೆಯಿರುವುದನ್ನು ಅರಿತು ನಾನು ಬೇಲೂರಿನ ಚನ್ನಕೇಶವ ದೇವಸ್ಥಾನದ ಬಳಿ ಫೈನಾನ್ಸ್ ಇಟ್ಟುಕೊಂಡಿದ್ದು ಸಾಲಕೊಡಿಸುವುದಾಗಿ ನಂಬಿಸಿದ್ದಾನೆ.

ಆ ನಂತರ  ಧವರ್iಯ್ಯ ಅವರನ್ನು ಬೇಲೂರಿಗೆ ಕರೆ ತಂದು 10 ಲಕ್ಷ ಸಾಲ ಕೊಡಿಸುವುದಾಗಿ ಹೇಳಿ ಅವರಿಂದ ಸಿಂಡಿಕೇಟ್ ಬ್ಯಾಂಕ್ ಖಾತೆಯ ಮೂರು ಚೆಕ್‍ಗಳನ್ನು ಪಡೆದಿದ್ದಲ್ಲದೆ,  10 ಲಕ್ಷ ಸಾಲ ಮಂಜೂರು ಮಾಡಲು ಮುಂಗಡವಾಗಿ 2 ಲಕ್ಷ ರೂ ಡಿ.ಡಿ. ನೀಡುವಂತೆ ಹೇಳಿ ಅವರನ್ನು ಬೇಲೂರಿನ ಎಸ್‍ಬಿಐ ಬ್ಯಾಂಕಿಗೆ ಕರೆದೊಯ್ದು ಅವರನ್ನು ಬ್ಯಾಂಕಿನ ಕ್ಯೂನಲ್ಲಿ ನಿಲ್ಲಿಸಿದ್ದಾನೆ.

ಜೊತೆಗೆ ಚೆಕ್‍ಗಳು ಮತ್ತು 2 ಲಕ್ಷ ಡಿ.ಡಿ. ಪಡೆದು ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಬಹಳಷ್ಟು ಹೊತ್ತು ಕಾದರೂ ಸಾಲಕೊಡಿಸುವವರು ಬಾರದ ಇದ್ದ ವೇಳೆ ಧರ್ಮಯ್ಯ ಅವರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಅವರು ಬೇಲೂರು ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ತನಿಖಾತಂಡ ರಚಿಸಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‍ಗೌಡ  ಅವರು ತನಿಖೆಗೆ ಆದೇಶಿಸಿದ್ದರು. ತನಿಖೆಯನ್ನು ಕೈಗೊಂಡ  ಬೇಲೂರು ವೃತ್ತ ನಿರೀಕ್ಷಕ ಸಿದ್ದರಾಮೇಶ್, ಸಬ್‍ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಅವರುಗಳ ತಂಡ ಆರೋಪಿ ಗೋಪಾಲ್‍ನನ್ನು ಬಂಧಿಸಿದೆ. ಬಳಿಕ ವಿಚಾರಣೆಗೊಳಪಡಿಸಿದಾಗ ಈತ ಇದೇ ರೀತಿ ಬೇಲೂರಿನಲ್ಲಿ 2, ಗಂಡಸಿ ವ್ಯಾಪ್ತಿಯಲ್ಲಿ 1, ತುಮಕೂರಿನಲಿ ್ಲ1, ತಿಪಟೂರಿನಲ್ಲಿ 1 ಸೇರಿ ಒಟ್ಟು ಐದು ಕಡೆಗಳಲ್ಲಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯಿಂದ ಸುಮಾರು 15 ಚೆಕ್‍ಗಳು, 4.47 ಲಕ್ಷ ರೂ ನಗದು ಹಾಗೂ ಆತ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದು ಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.