ವಿವಾಹ ಸಮಾರಂಭಕ್ಕೆ  ಆರೋಗ್ಯ ಇಲಾಖೆ ಆಯುಕ್ತರ ಮಾರ್ಗಸೂಚಿ

ವಿವಾಹ ಸಮಾರಂಭಕ್ಕೆ  ಆರೋಗ್ಯ ಇಲಾಖೆ ಆಯುಕ್ತರ ಮಾರ್ಗಸೂಚಿ

YK   ¦    May 23, 2020 12:31:31 PM (IST)
ವಿವಾಹ ಸಮಾರಂಭಕ್ಕೆ  ಆರೋಗ್ಯ ಇಲಾಖೆ ಆಯುಕ್ತರ ಮಾರ್ಗಸೂಚಿ

ಗದಗ : ಕೋವಿಡ್-೧೯ ಸೋಂಕು ನಿಯಂತ್ರಣ  ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಜಾರಿಗೊಳಿಸಿದ  ಪ್ರತಿಬಂಧಗಳನ್ನು  ಹಂತಹಂತವಾಗಿ ಸಡಿಲಗೊಳಿಸಿ ಆದೇಶ ಹೊರಡಿಸಿದೆ.

ವಿವಾಹ ಸಮಾರಂಭಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿ ವಿವಾಹ ಸಮಾರಂಭದಲ್ಲಿ ಅತಿಥಿಗಳ ಸಂಖ್ಯೆ ಗರಿಷ್ಟ   ೫೦ ಸೀಮಿತವಾಗಿರಬೆಕು.   ಸ್ಥಳಿ ಟಿ.ಎಸ್. ರುದ್ರೇಶಪ್ಪ ಯ ಸಂಸ್ಥೆಯಿಂದ ಅನುಮತಿ  ಪಡೆದಿರಬೇಕು.  ಸಾರ್ವಜನಿಕ ಸ್ಥಳದಲ್ಲಿ ನೈಸರ್ಗಿಕ ಗಾಳಿ ಬೆಳಕು  ಲಭ್ಯವಿರುವಲ್ಲಿ ಸಮಾರಂಭ ಜರುಗಿಸಬೇಕು.   ಕೋವಿಡ್ -೧೯  ಮಾಹಿತಿ ಕಂಟೇನೆಮೆಂಟ್ ವಲಯದ ವ್ಯಕ್ತಿಗಳು,  ೬೫ ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ  ೧೦ ವರ್ಷದೊಳಗಿನ ಮಕ್ಕಳು  ಜ್ವರ , ಶೀತ, ಕೆಮ್ಮು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.

ಸಮಾರಂಭದಲ್ಲಿ  ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.    ಕೈತೊಳೆಯುವ ಸ್ಥಳಗಳಲ್ಲಿ / ಶೌಚಾಲಯಗಳಲ್ಲಿ ಹ್ಯಾಂಡ್ ವಾಶ,   ಟಿಶ್ಯು ಪೇಪರ್ ಮತ್ತು  ನೀರನ್ನು ಪೂರೈಸುವುದು ಕಡ್ಡಾಯ.  ಮಧ್ಯಪಾನ, ಪಾನ್ ಗುಟಕಾ ತಂಬಾಕು  ಸೇವನೆಯನ್ನು ಸಮಾರಂಭದಲ್ಲಿ ನಿಷೇಧಿಸಬೇಕು.  ಸ್ಥಳ ಸ್ವಚ್ಛವಾಗಿದ್ದು   ಆರೋಗ್ಯಕರ ಪರಿಸರವಿರತಕ್ಕದ್ದು.  ಸಮಾರಂಭದ ಸ್ಥಳದಲ್ಲಿ ಕೈಗೊಂಡಿರುವ ವ್ಯವಸ್ಥೆಗಳ  ಬಗ್ಗೆ ನೇಮಿಸಿದ  ನೋಡಲ್ ವ್ಯಕ್ತಿ  ಮೇಲ್ವಿಚಾರಣೆ ಮಾಡತಕ್ಕದ್ದು.  ವಿವಾಹ ಸಮಾರಂಭದಲ್ಲಿ ಪಾಲ್ಗೊಂಡವರ ಹೆಸರು , ಅವರ ಸಂಪರ್ಕ ಸಂಖ್ಯೆ   ಕಡ್ಡಾಯವಾಗಿದೆ.     ಸಮಾರಂಭದಲ್ಲಿ ಭಾಗವಹಿಸುವ ಎಲ್ಲ ಅತಿಥಿಗಳು ಆರೋಗ್ಯ ಸೇತು ಆಪ್ ಸೇತು ಹೊಂದಿರಬೇಕು. 

    ಕೋವಿಡ್ ಸಂಬಂಧಿತ ಯಾವುದೇ ಮಾಹಿತಿಗೆ  ಸಹಾಯವಾಣಿ ಸಂಖ್ಯೆ ೯೭೪೫೬೯೭೪೫೬ , ೦೮೦-೪೬೮೪೬೦೦ , ೦೮೦-೬೬೬೯೨೦೦೦ ಮತ್ತು ಆಪ್ತ ಮಿತ್ರ ೧೪೪೧೦ ಸಂಪರ್ಕಿಸಬಹುದಾಗಿದೆ ಆರೋಗ್ಯ ಇಲಾಖೆಯ ವಿವಾಹ ಸಮಾರಂಭದ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಸಂಬಂಧಿತರ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆಯಡಿ  ಕಾರ್ಯಕ್ರಮ ಜರುಗಿಸಲಾಗುವುದು.