ಸ್ವರ್ಗಸ್ಥರಾದ ಹಿರಿಯ ಯೋಧ ರಾಯಪ್ಪನ್

ಸ್ವರ್ಗಸ್ಥರಾದ ಹಿರಿಯ ಯೋಧ ರಾಯಪ್ಪನ್

LK   ¦    Nov 08, 2019 05:52:09 PM (IST)
ಸ್ವರ್ಗಸ್ಥರಾದ ಹಿರಿಯ ಯೋಧ ರಾಯಪ್ಪನ್

ಚಾಮರಾಜನಗರ: ಯೋಧರ ಗ್ರಾಮವೆಂದು ಗುರುತಿಸಿ ಕೊಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ನಿವಾಸಿ ಹಿರಿಯ ನಿವೃತ್ತ ಯೋಧ ಜನರಲ್ ರಾಯಪ್ಪನ್(75) ಸ್ವರ್ಗಸ್ಥರಾಗಿದ್ದಾರೆ.

ಇವರು 1965ರ ಭಾರತ - ಪಾಕಿಸ್ತಾನ ಯುದ್ದ ಮತ್ತು 1971ರಲ್ಲಿ ಬಾಂಗ್ಲಾದೇಶ ಲಿಬರೇಶನ್ ಯುದ್ದದಲ್ಲಿ ಭಾಗವಹಿಸಿದ್ದರು. 1960 ರಿಂದ 1977ರವರಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ರಾಯಪ್ಪನ್, ಸೇನೆಯಿಂದ ನಿವೃತ್ತಿಯಾದ ಬಳಿಕ ಮಾರ್ಟಳ್ಳಿಯಲ್ಲಿ ಜೀವನ ಸಾಗಿಸುತ್ತಿದ್ದರು.

ನಿವೃತ್ತ ಯೋಧ ಜನರಲ್ ರಾಯಪ್ಪನ್ ಅವರ ನಿಧನಕ್ಕೆ ಮಾರ್ಟಳ್ಳಿ ಆರ್ಮಿ ಅಸೋಸಿಯೇಷನ್ ಟ್ರಸ್ಟ್. ಹಾಗೂ ಗ್ರಾಮಸ್ಥರು ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.