ಸಿಡಿಲಿಗೆ ಹೆದರಿದ ಚಾಲಕ: ಹಾಲಿನ ಟ್ಯಾಂಕರ್ ಪಲ್ಟಿ

ಸಿಡಿಲಿಗೆ ಹೆದರಿದ ಚಾಲಕ: ಹಾಲಿನ ಟ್ಯಾಂಕರ್ ಪಲ್ಟಿ

LK   ¦    Oct 09, 2019 11:01:14 AM (IST)
ಸಿಡಿಲಿಗೆ ಹೆದರಿದ ಚಾಲಕ: ಹಾಲಿನ ಟ್ಯಾಂಕರ್ ಪಲ್ಟಿ

ಚಾಮರಾಜನಗರ: ಚಾಮರಾಜನಗರದಲ್ಲಿ ಸುರಿದ ಭಾರೀ ಮಳೆಯ ನಡುವೆ ಸಿಡಿಲ ಶಬ್ದಕ್ಕೆ ಹಾಲು ತುಂಬಿದ್ದ ಟ್ಯಾಂಕರ್ ನ ಚಾಲಕ ಬೆದರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ತಾಲೂಕಿನ ಕುದೇರು ಗ್ರಾಮದಲ್ಲಿರುವ ಚಾಮೂಲ್‍ನಿಂದ ತಮಿಳುನಾಡಿಗೆ ಹಾಲು ತುಂಬಿದ ಮೂರು ಟ್ಯಾಂಕರ್‍ ಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದ್ದ ವೇಳೆ ಭಾರೀ ಮಳೆಯ ನಡುವೆ ಸಿಡಿಲ ಶಬ್ದಕ್ಕೆ ತಮಿಳುನಾಡಿಗೆ ಸೇರಿದ ಟ್ಯಾಂಕರ್ ಚಾಲಕ ಬೆದರಿದ್ದು, ಇದರಿಂದ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 15 ಸಾವಿರ ಲೀಟರ್ ಹಾಲಿದ್ದ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಪಲ್ಟಿಯಾಗಿದ್ದು, ಅದೃಷ್ಟ ವಷಾತ್ ಹಾಲು ರಸ್ತೆಯಲ್ಲಿ ಹರಿಯಲಿಲ್ಲ.

ಅಲ್ಪ ಪ್ರಮಾಣದಲ್ಲಿ ಮಾತ್ರ ರಸ್ತೆಯಲ್ಲಿ ಹಾಲು ಹರಿದಿದ್ದು, ಪಲ್ಟಿಯಾದ ಲಾರಿಯನ್ನು ಮೇಲಕ್ಕೆತ್ತಲಾಯಿತಾದರೂ ಟ್ಯಾಂಕರ್‍ ನ ಮುಂಭಾಗದ ಚಕ್ರಗಳು ತುಂಡಾಗಿದ್ದವು. ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.